ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಿನಿಟಿ ಸರ್ಕಲ್ ಮೆಟ್ರೋ ನಿಲ್ದಾಣದ ಬಳಿ ಹಾರ್ನ್ ಮಾಡುವಂತಿಲ್ಲ, ಏಕೆ?

|
Google Oneindia Kannada News

ಬೆಂಗಳೂರು, ಜುಲೈ 23: ಟ್ರಿನಿಟಿ ವೃತ್ತದ ಮೆಟ್ರೋ ನಿಲ್ದಾಣದ ಬಳಿ ಇನ್ನುಮುಂದೆ ಹಾರ್ನ್ ಮಾಡುವಂತಿಲ್ಲ.

ಆ ಪ್ರದೇಶದಲ್ಲಿ ಶಬ್ದ ಮಾಲಿನ್ಯ ಹೆಚ್ಚಾಗಿರುವ ಕಾರಣ ಆ ಪ್ರದೇಶದಲ್ಲಿ ವಾಹನಗಳ ಹಾರ್ನ್ ಗೆ ಕಡಿವಾಣ ಹಾಕಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಮೆಟ್ರೋ ಕೇವಲ ಮಹಾನಗರಗಳಿಗೆ ಮಾತ್ರವಲ್ಲ, ಸಣ್ಣ ನಗರಗಳಿಗೂ ಬರಲಿದೆ ಮೆಟ್ರೋ ಕೇವಲ ಮಹಾನಗರಗಳಿಗೆ ಮಾತ್ರವಲ್ಲ, ಸಣ್ಣ ನಗರಗಳಿಗೂ ಬರಲಿದೆ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ವರದಿ ನೀಡಿದೆ. ವಾಯುಮಾಲಿನ್ಯ ಮಟ್ಟ ಕ್ಯೂಬಿಕ್ ಮೀಟರ್‌ಗೆ 3.30 ಮೈಕ್ರೋಗ್ರಾಮ್ ನಷ್ಟಿದೆ. ಕ್ಯೂಬಿಕ್ ಮೀಟರ್‌ಗೆ 2 ಮೈಕ್ರೋಗ್ರಾಮನಷ್ಟು ಮಾಲಿನ್ಯವಿದ್ದರೆ ಅಷ್ಟು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹಾಗೆಯೇ ವಾಯು ಮಾಲಿನ್ಯ ಮಟ್ಟ 83.3 ಡೆಸಿಬಲ್ಸ್‌ನಷ್ಟಿದ್ದು, ಸಾಮಾನ್ಯವಾಗಿ 65 ಡೆಸಿಬಲ್ಸ್‌ನಷ್ಟು ಒಪ್ಪಿಕೊಳ್ಳಬಹುದಾಗಿದೆ.

 No honking zone in Trinity Metro station

ಕೇವಲ 12 ತಾಸುಗಳಷ್ಟೇ ಪರಿಶೀಳಿಸಲಾಗಿದ್ದರೂ ಕೂಡ ಮಾಲಿನ್ಯ ವಿಪರೀತವಾಗಿದೆ. ಹಾಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ಬಾಕ್ಸ್ ನಂತೆ ಇರುವ ಮೆಟ್ರೋ ನಿಲ್ದಾಣಗಳಲ್ಲಿ ನೋ ಹಾಂಕಿಂಗ್ ಝೋನ್ ಆಗಿ ಪರಿವರ್ತನೆ ಮಾಡುವಂತೆ ಹೇಳಿದೆ.

ಜುಲೈ 13ರಂದು ಬಿಎಂಆರ್‌ಸಿಎಲ್ ಎಂಡಿ ಅಜಯ್ ಸೇಠ್ ಸಂಚಾರ ಪೊಲೀಸ್ ಆಯುಕ್ತ ಪಿ ಹರಿಶೇಖರನ್ ಅವರಿಗೆ ಪತ್ರ ಬರೆದು ನೋ ಹಾಂಕಿಂಗ್ ಝೋನ್ ಮಾಡುವಂತೆ ತಿಳಿಸಿದೆ.

English summary
No honking zone in Trinity Metro station, After observing excess noise and air pollution at Trinity Metro station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X