ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಉಚಿತ ಪಾರ್ಕಿಂಗ್ ರದ್ದು, ಇನ್ಮುಂದೆ ಶುಲ್ಕ ಪಾವತಿಸಲೇಬೇಕು

|
Google Oneindia Kannada News

ಬೆಂಗಳೂರು,ಫೆಬ್ರವರಿ 11: ನಗರದಲ್ಲಿ ಈಗಿರುವ ಬಹುತೇಕ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪಾವತಿ ಪಾರ್ಕಿಂಗ್ ವ್ಯವಸ್ಥೆಗೆ ಬದಲಾಯಿಸುವುದು ಸೇರಿದಂತೆ ಭೂಸಾರಿಗೆ ನಿರ್ದೇಶನಾಲಯ ಸಿದ್ಧಪಡಿಸಿರುವ ಪರಿಷ್ಕೃತ ಪಾರ್ಕಿಂಗ್ ನೀತಿ 2.0ರ ಅನುಷ್ಠಾನಕ್ಕೆ ಸರ್ಕಾರ ಸಮ್ಮತಿ ಸೂಚಿಸಿದೆ.

ವಾಹನ ನೋಂದಣಿ ವಾರ್ಷಿಕ ಏರಿಕೆ ದರ ಶೇ.10ಕ್ಕಿಂತ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕಾಗಿ ಹಂತ 1 ಮೆಟ್ರೋ ರೈಲು ಪರಿಚಯ, ಫ್ಲೈಓವರ್‌ಗಳ ನಿರ್ಮಾಣ ಮಾಡಿದರೂ ವಾಹನ ಸಂಚಾರವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ.

'ಇದು ಅಕ್ಷಮ್ಯ': ವಾಹನ ತಯಾರಕರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ'ಇದು ಅಕ್ಷಮ್ಯ': ವಾಹನ ತಯಾರಕರಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ

ಇದರ ನಿಯಂತ್ರಣಕ್ಕೆ ಮುಖ್ಯವಾಗಿ ಕಡ್ಡಾಯ ಪಾರ್ಕಿಂಗ್ ನೀತಿ ಅಳವಡಿಸುವ ಮೂಲಕ ವಾಹನ ದಟ್ಟಣೆ ಕಡಿಮೆ ಮಾಡಲು ಉದ್ದೇಶಿಸಲಾಗಿದೆ.

 No Free Parking Facility In Bengaluru Anymore

ಜತೆಗೆ ಮೋಟಾರ್ ರಹಿತ ಸಂಚಾರಕ್ಕೆ ಹೆಚ್ಚಿನ ಹೂಡಿಕೆಗಳ ಅಗತ್ಯವಿದ್ದು ಸ್ವಂತ ವಾಹನ ಬಳಕೆದಾರರನ್ನು ಸಮೂಹ ಸಾರಿಗೆಯಲ್ಲಿ ಸಂಚರಿಸಲು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದ್ದಾರೆ.

ಡಲ್ಟ್ ಹಾಗೂ ಬಿಬಿಎಂಪಿಗೆ ಈ ಪಾರ್ಕಿಂಗ್ ನೀತಿ ಅನುಷ್ಠಾನದ ಜವಾಬ್ದಾರಿ ವಹಿಸಿ ಸರ್ಕಾರ ಆದೇಶ ಮಾಡಿದೆ. ನಗರದಲ್ಲಿ ಮೇ 2020ರ ವೇಳೆಗೆ ವಾಹನಗಳ ಸಂಖ್ಯೆ 94 ಲಕ್ಷ ದಾಟಿದೆ.

ಪಾರ್ಕಿಂಗ್ ನೀತಿಯ ಅಂಶಗಳಿವು

Recommended Video

ನಾಳೆಯಿಂದ ಫೆ. 25ರವರೆಗೆ ಕೃಷಿ ಹಾಗೂ ಕರಾವಳಿ ಕಲೋತ್ಸವ | Oneindia Kannada

*ಉಚಿತ ಪಾರ್ಕಿಂಗ್‌ನಿಂದ ಪಾವತಿಸಿದ ಪಾರ್ಕಿಂಗ್ ಮಾಡಬೇಕು.
*ಎಲ್ಲೆಡೆ ನಿಲ್ಲುವ ವಾಹನಗಳನ್ನು ಒಂದು ಕಡೆ ನಿಲ್ಲುವಂತೆ ಮಾಡಬೇಕು.
*ಸರ್ಕಾರಿ ಚಾಲಿತ ಪಾರ್ಕಿಂಗ್ ಅನ್ನು ಪಿಪಿಪಿ ಮತ್ತು ಮಾರುಕಟ್ಟೆ ಚಾಲಿತ ಪಾರ್ಕಿಂಗ್‌ಗೆ ಬದಲಾಯಿಸಬೇಕು.
*ಪಾರ್ಕಿಂಗ್ ನೀತಿ ಪ್ರಕಾರ ವಲಯಗಳಿಗೆ ಏರಿಯಾ ಪಾರ್ಕಿಂಗ್ ಯೋಜನೆ ಜಾರಿಗೆ ತರಬೇಕು.

English summary
Karnataka Government Approved cancellation of Free parking facilities in Bengaluru, so No Free Parking Facility In Bengaluru Anymore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X