ಲಾಲ್ಬಾಗ್ನಲ್ಲಿ ನಡೆಯಬೇಕಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು
ಬೆಂಗಳೂರು, ಜನವರಿ 18: ಲಾಲ್ಬಾಗ್ನಲ್ಲಿ ನಡೆಯಬೇಕಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಇಲಾಖೆ ರದ್ದುಪಡಿಸಿದೆ.
ತೋಟಗಾರಿಕಾ ಇಲಾಖೆ ಹಾಗೂ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಈ ವರ್ಷ ಸಣ್ಣ ಪ್ರಮಾಣದಲ್ಲಿ ಕೊರೊನಾ ಕುರಿತು ಗೃತಿ ನೀಡುವ ಕುರಿತ ಫಲಪುಷ್ಪ ಪ್ರದರ್ಶನ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು.
ಆದರೆ, ರೂಪಾಂತರಿ ಕೊರೊನಾ ಭೀತಿಯಲ್ಲಿ ಜನರಲ್ಲಿ ಕಾಡುತ್ತಿದ್ದು, ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.ಜತೆ ಮೈಸೂರು ಉದ್ಯಾನ ಕಲಾಸಂಘ ಸಹ ಫಲಪುಷ್ಪ ಪ್ರದರ್ಶನ ಆಯೋಜಿಸುವುದು ಬೇಡ ಎಂದು ಹೇಳಿತ್ತು.
ತೋಟಗಾರಿಕೆ ಸಚಿವ ನಾರಾಯಣಗೌಡ ಅವರ ಸಮ್ಮುಖದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಆಗಸ್ಟ್ನಲ್ಲಿಯೂ ಪ್ರದರ್ಶನ ರದ್ದಾಗಿತ್ತು, ಅಲ್ಲದೆ ಎರಡು ಮೂರು ತಿಂಗಳ ಮೊದಲೇ ಪೂರ್ವ ಸಿದ್ಧತೆಗಳು ನಡೆಯಬೇಕಿತ್ತು.
ಈ ಬಾರಿ ಸಿದ್ಧತೆಗಳನ್ನು ನಡೆಸಲಾಗಿಲ್ಲ.ಹಣವೂ ಇಲ್ಲ ಸರಳವಾಗಿ ಮಾಡಿದರೆ ಜನ ಬರುವುದು ಅನುಮಾನ, ಹೀಗಾಗಿ ಪ್ರದರ್ಶನವನ್ನೇ ರದ್ದುಗೊಳಿಸುವಂತೆ ಮನವಿ ಮಾಡಲಾಗಿತ್ತು ಎಂದು ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ 102 ಕೇಂದ್ರಗಳಲ್ಲಿ ಇಂದು ಕೊರೊನಾ ಲಸಿಕೆ ಅಭಿಯಾನ ನಡೆಯಲಿದೆ.
ಬಿಬಿಎಂಪಿಯ ವ್ಯಾಪ್ತಿಯಲ್ಲಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಾಲ್ಕು ಸಾವಿರ ಆರೋಗ್ಯ ಸಿಬ್ಬಂದಿಗೆ ಸೋಮವಾರ ಕೊರೊನಾ ಲಸಿಕೆ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ನಗರದ 141 ಪ್ರಾಥಮಿಕ ಆರೋಗ್ಯ ಕೇಂದ್ರದ 7,300 ಆರೋಗ್ಯ ಸಿಬ್ಬಂದಿ,106 ಖಾಸಗಿ ಆಸ್ಪತ್ರೆಯ 42,000 ಸಿಬ್ಬಂದಿ ಹಾಗೂ ಒಂಬತ್ತು ವೈದ್ಯಕೀಯ ಕಾಲೇಜುಗಳ 28 ಸಾವಿರ ಆರೋಗ್ಯ ಸಿಬ್ಬಂದಿಗಳಿಗೆ ಕೊರೊನಾ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.