ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಚ್ಚುವರಿ ಟ್ರಿಪ್ ಕಡಿತ: ಹಿಂದಿನ ವೇಳಾಪಟ್ಟಿಯಂತೆ ಮೆಟ್ರೋ ಸಂಚಾರ

|
Google Oneindia Kannada News

ಬೆಂಗಳೂರು, ಜನವರಿ 05: ನೇರಳೆ ಮೆಟ್ರೋ ಮಾರ್ಗದಲ್ಲಿ ಏಕಾಏಕಿ 10 ರೈಲುಗಳ ಸಂಚಾರ ಹೆಚ್ಚಿಸಿದ್ದು ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯೆಗೆ ಕಾರಣ ಎಂದು ಅರಿವಾದ ಹಿನ್ನೆಲೆಯಲ್ಲಿ ಹಳೆ ವೇಳಾಪಟ್ಟಿ ರೈಲುಗಳ ಸಂಚಾರ ನಿರ್ವಹಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.

ಮೆಟ್ರೋ ರೈಲು: ನೇರಳೆ-ಹಸಿರು ಮಾರ್ಗದಲ್ಲಿ ರೈಲು ಸಂಚಾರ ಹೆಚ್ಚಳಮೆಟ್ರೋ ರೈಲು: ನೇರಳೆ-ಹಸಿರು ಮಾರ್ಗದಲ್ಲಿ ರೈಲು ಸಂಚಾರ ಹೆಚ್ಚಳ

ಏರಿಕೆಯಾಗುತ್ತಿರುವ ಪ್ರಯಾಣಿಕರ ದಟ್ಟಣೆ ಪರಿಹರಿಸಲು ಜ.2 ರಿಂದ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ 3 ಹಾಗೂ ನಾಯಂಡಹಳ್ಳಿ-ಬೈಯಪ್ಪನಹಳ್ಳಿ ಮಾರ್ಗದಲ್ಲಿ 10 ಟ್ರಿಪ್ ಹೆಚ್ಚಿಸಲಾಗಿತ್ತು.

No extra metro trip, Old time table will continue

ದಟ್ಟಣೆ ಅವಧಿಯಲ್ಲಿ ಪ್ರತಿ ಮೂರೂವರೆ ನಿಮಿಷಕ್ಕೆ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಜ.2 ರ ಬೆಳಗ್ಗೆ10.02 ರಿಂದ 10.28 ರವರೆಗೆ ಮತ್ತು ಸಂಜೆ 6 ನಿಮಿಷ ಸಂಚಾರ ಸ್ಥಗಿತವಾಗಿತ್ತುನೇರಳೆ ಮಾರ್ಗದಲ್ಲಿ ಪ್ರತಿದಿನ 27 ರೈಲುಗಳು ಮಾಡುತ್ತಿದ್ದ 127 ಟ್ರಿಪ್ ಗಳನ್ನು 167 ಕ್ಕೆ ಹೆಚ್ಚಿಸಲಾಗಿತ್ತು.

ಗಣರಾಜ್ಯೋತ್ಸವದಿಂದ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ!ಗಣರಾಜ್ಯೋತ್ಸವದಿಂದ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ!

ಅದೇ ರೀತಿ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲೂ ಟ್ರಿಪ್ ಸಂಖ್ಯೆ 120 ರಿಂದ 123 ಕ್ಕೆ ಏರಿಕೆಯಾಗಿತ್ತು. ಇದೀಗ ಹಿಂದಿನಂತೆ ದಟ್ಟಣೆ ಅವಧಿಯಲ್ಲಿ 4 ನಿಮಿಷಕ್ಕೊಮ್ಮೆ ಹಾಗೂ ಗರಿಷ್ಠ 9-10 ನಿಮಿಷಕ್ಕೆ ರೈಲುಗಳು ಸಂಚರಿಸಲಿವೆ.

English summary
BMRCL has decided to run the trains as per old time table while increasing in frequency caused electricity outage recently. BMRCL found out that additional metro service are the reason of electricity problem. Electricity cut day before Yesterday many metro services are abandoned for half an hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X