ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಕ್ಕೆ ನಮ್ಮ ಮೆಟ್ರೋದಲ್ಲಿ ಪಾಲಿಸಬೇಕಾದದ್ದು ಏನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 31: 2019 ನೇ ವರ್ಷಕ್ಕೆ ಇನ್ನೇನು ಗುಡ್ ಬಾಯ್ ಹೇಳಲು ಬೆಂಗಳೂರಿಗರು ತುದಿಗಾಲ ಮೇಲೆ ನಿಂತಿದ್ದಾರೆ. 2020 ನೇ ವರ್ಷ ಬರಮಾಡಿಕೊಳ್ಳಲು ಬೆಂಗಳೂರಿಗರು ಇಂದು ರಾತ್ರಿ ವಿಶೇಷ ತಯಾರಿ ನಡೆಸಿದ್ದಾರೆ. ಇದಕ್ಕಾಗಿ ನಗರದ ಪ್ರಮುಖ ಸ್ಥಳಗಳಾದ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ ಸಿದ್ಧಗೊಂಡಿವೆ.

ಇಂದಿನಿಂದ ಹಸಿರು ಮಾರ್ಗದಲ್ಲಿ ಇನ್ನೆರೆಡು 6 ಬೋಗಿ ಮೆಟ್ರೋ ಇಂದಿನಿಂದ ಹಸಿರು ಮಾರ್ಗದಲ್ಲಿ ಇನ್ನೆರೆಡು 6 ಬೋಗಿ ಮೆಟ್ರೋ

ಹೊಸ ವರ್ಷಾಚರಣೆ ಮಾಡಬೇಕು ಎನ್ನವರಿಗೆ ನಮ್ಮ ಮೆಟ್ರೋ ಕೂಡ ಸಾತ್ ನೀಡಿದ್ದು, ಮೆಟ್ರೋದಲ್ಲಿ ಸಂಚರಿಸುವ ಅವಧಿಯನ್ನು ರಾತ್ರಿ 2 ಗಂಟೆಗೆ ವಿಸ್ತರಿಸಿರುವುದು ಈಗಾಗಲೇ ಖಚಿತವಾಗಿದೆ. ಆದರೆ, ಮಂಗಳವಾರ ಡಿಸೆಂಬರ್ 31 ರಂದು ಮದ್ಯಪಾನ ಮಾಡಿ ಮೆಟ್ರೋ ರೈಲು ಹತ್ತುವ ಹಾಗಿಲ್ಲ ಎಂದು ಬಿಎಂಆರ್‌ಸಿಎಲ್ ಕಟ್ಟುನಿಟ್ಟಿನ ಆದೇಶ ಮಾಡಿದೆ. ಇದೇ ನಿಯಮವನ್ನು ಇನ್ನು ಮುಂದೆ ಕಟ್ಟುನಿಟ್ಟಾಗಿ ಪಾಲಿಸಲು ಮೆಟ್ರೋ ಮುಂದಾಗಿದೆ ಎಂದು ತಿಳಿದು ಬಂದಿದೆ. ಮದ್ಯಪಾನ ಮಾಡಿ ಮೆಟ್ರೋ ಪ್ರವೇಶಿಸಿ, ಸಹ ಪ್ರಯಾಣಿಕರಿಗೆ ತೊಂದರೆ ಕೊಡುವವರನ್ನು ಮೆಟ್ರೋ ನಿಲ್ದಾಣದಿಂದ ಹೊರಹಾಕುವುದಲ್ಲದೇ ಸಂಬಂದಿಸಿದ ಕಾನೂನಿನಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಎಂಆರ್‌ಸಿಎಲ್ ಎಚ್ಚರಿಸಿದೆ.

No Entry For Drunkers In Namma Metro

ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ನಗರದ ಅನೇಕ ಪ್ರಮುಖ ಮಾಲ್ ಹೋಟೆಲ್‌ಗಳಿಗೆ ತೆರಳಲಿದ್ದಾರೆ. ಇದರಿಂದ ಜನಕ್ಕೆ ಅನಾನುಕೂಲ ಆಗದಿರಲೆಂದು ಬಿಎಂಆರ್‌ಸಿಎಲ್ ಅವತ್ತೊಂದಿನ ಮಾತ್ರ ರಾತ್ರಿ 2 ಗಂಟೆವರೆಗೆ ಈ ಸೇವೆ ನೀಡಿದೆ.

English summary
For New year celebration bengaluru metro gives shock for drunkers. No Entry For Drunkers In Namma Metro.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X