ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್ಆರ್‌ಟಿಸಿ ಪ್ರಯಾಣ ದರ ಕಡಿತವಿಲ್ಲ, ಸಚಿವರ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಅ.7 : 'ಡಿಸೇಲ್ ದರದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ಕೆಎಸ್ಆರ್‌ಟಿಸಿ ಬಸ್ಸುಗಳ ಪ್ರಯಾಣ ದರದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ, ಇಂತಹ ಆಲೋಚನೆಯೂ ಸಂಸ್ಥೆಯ ಮುಂದಿಲ್ಲ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಲ್ಲಿ ಮಂಗಳವಾರ ಬಸ್ ಡೇ ಉದ್ಘಾಟನೆ ಮಾಡಿದ ನಂತರ ಮಾತನಾಡಿದ ಸಚಿವರು, ಸಾರಿಗೆ ಸಿಬ್ಬಂದಿಗಳ ವೇತನ ಮತ್ತು ಭತ್ಯೆ ಹೆಚ್ಚಾಗಿದೆ. ಇದೇ ರೀತಿ ಎಲ್ಲಾ ವೆಚ್ಚಗಳು ದುಬಾರಿಯಾಗಿವೆ. ಆದ್ದರಿಂದ ಡಿಸೇಲ್ ಬೆಲೆ ಇಳಿಕೆಯಾದ ತಕ್ಷಣ ಪ್ರಯಾಣ ದರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

Ramalinga Reddy

ಖಾಸಗಿ ಬಂಕ್‌ಗಳಿಂದ ಬಸ್‌ಗಳಿಗೆ ಖರೀದಿ ಮಾಡಿರುವ ಡೀಸೆಲ್ ಹಣವನ್ನು ಇನ್ನೂ ಪಾವತಿ ಮಾಡಬೇಕಾಗಿದೆ. ಆದ್ದರಿಂದ ಪ್ರಯಾಣ ದವರನ್ನು ಕಡಿತಗೊಳಿಸುವ ಯಾವುದೇ ಆಲೋಚನೆ ಸರ್ಕಾರ ಮುಂದಿಲ್ಲ ಎಂದು ಅವರು ಹೇಳಿದರು. ಈ ನಿಯಮ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಸಂಸ್ಥೆಗಳಿಗೆ ಅನ್ವಯವಾಗಲಿದೆ ಎಂದು ಸಚಿವರು ತಿಳಿಸಿದರು.

ಖಾಸಗಿ ಬಸ್ ಸ್ಥಳಾಂತರ : ಬೆಂಗಳೂರು ನಗರದಲ್ಲಿ 40 ಲಕ್ಷಕ್ಕೂ ಅಧಿಕ ವಾಹನಗಳಿದ್ದು, ಸಂಚಾರ ದಟ್ಟಣೆ ಉಂಟಾಗುತ್ತದೆ. ಕೆಎಸ್ಆರ್‌ಟಿಸಿ ಬಸ್ಸುಗಳಿಂದ ಆಗುವ ಸಂಚಾರ ದಟ್ಟಣೆಯನ್ನು ತಪ್ಪಿಸಲು ಪೀಣ್ಯದಲ್ಲಿ ನಿರ್ಮಿಸಿರುವ ಬಸವೇಶ್ವರ ಬಸ್ ನಿಲ್ದಾಣಕ್ಕೆ ಹಲವು ಬಸ್ಸುಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದರು.

ಪೀಣ್ಯಕ್ಕೆ ಕೆಎಸ್ಆರ್‌ಟಿಸಿಯ ಸಾಮಾನ್ಯ ಬಸ್ಸುಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಖಾಸಗಿ ಬಸ್ಸುಗಳು ಮಾತ್ರ ಮೆಜೆಸ್ಟಿಕ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ಸ್ಥಳಾಂತರ ಮಾಡುವ ಕುರಿತು ಮಾತುಕತೆ ನಡೆದಿದೆ. ಈ ಕುರಿತು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಮಲಿಂಗಾ ರೆಡ್ಡಿ ಹೇಳಿದರು. [ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತೆ?]

ಬಸ್‌ ಡೇ ಮುಂದುವರೆಸುತ್ತೇವೆ : ಬಿಜೆಪಿ ಸರ್ಕಾರ ಅವಧಿಯಲ್ಲಿ ಸಮೂಹ ಸಾರಿಗೆಗೆ ಒತ್ತು ನೀಡಲು ಜಾರಿಗೆ ತಂದ ಬಸ್‌ ಡೇಯನ್ನು ನಾವು ಮುಂದುವರೆಸುತ್ತೇವೆ. ಪ್ರತಿತಿಂಗಳ 4ರಂದು ಬಸ್ ಡೇ ಆಚರಣೆ ಮಾಡಲಾಗುತ್ತದೆ. ಈ ಬಾರಿ ಸಾಲು-ಸಾಲು ರಜೆಗಳು ಬಂದ ಹಿನ್ನೆಲೆಯಲ್ಲಿ ಮೂರು ದಿನ ತಡವಾಗಿ ಬಸ್ ಡೇ ಆಚರಣೆ ಮಾಡಲಾಗಿದೆ ಎಂದರು.

English summary
Transport minister of Karnataka Ramalinga Reddy ruled out any cut in KSRTC bus fares in the coming days after reduction in Diesel price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X