ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ESI ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು? ಇಲ್ಲಿದೆ ಸತ್ಯ

|
Google Oneindia Kannada News

ಬೆಂಗಳೂರು, ಮಾರ್ಚ್ 9: ಬೆಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಕೊರೊನಾವೈರಸ್ ಸೋಂಕಿತೆಯೊಬ್ಬರು ದಾಖಲಾಗಿದ್ದಾರೆ ಎಂಬ ಸುದ್ದಿಯುಳ್ಳ ವಿಡಿಯೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಡುತ್ತಿದೆ. ಈ ಬಗ್ಗೆ ಸಹಜವಾಗಿ ಎಲ್ಲರಲ್ಲೂ ಆತಂಕ ಮೂಡಿತ್ತು. ಸುದ್ದಿಯ ಸತ್ಯಾಸತ್ಯತೆ ಬಗ್ಗೆ ಜೋರು ಚರ್ಚೆ ನಡೆಯುವ ವೇಳೆಗೆ ಸಚಿವ ಸುರೇಶ್ ಕುಮಾರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.

"ರಾಜಾಜಿನಗರದ ESI ಆಸ್ಪತ್ರೆಯಲ್ಲಿ ಒಂದು ಕೊರೋನಾವೈರಸ್ ಪ್ರಕರಣ ಗೊತ್ತಾಗಿದೆ ಎಂಬುದು ಸತ್ಯವಲ್ಲ. ಈ ಆಸ್ಪತ್ರೆಯಲ್ಲಿ ಆ ರೀತಿ ಯಾವುದೇ ಪ್ರಕರಣವಾಗಿಲ್ಲ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ" ಎಂದು ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ಭೀತಿ: ಬೆಂಗಳೂರಿನ ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ಇಂದಿನಿಂದ ರಜೆಕೊರೊನಾ ಭೀತಿ: ಬೆಂಗಳೂರಿನ ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ಇಂದಿನಿಂದ ರಜೆ

ರಾಷ್ಟ್ರೀಯ ಮಾಧ್ಯಮವೊಂದರ ಫಾರ್ಮಾಸಿ ಸ್ಟುಡೆಂಟ್ ಒಬ್ಬರಿಗೆ ಕೋವಿಡ್ 19 ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಕೇರಳ ಮೂಲದ ಸ್ಟುಡೆಂಟ್ ರಕ್ತದ ಸ್ಯಾಂಪಲ್ ಪಡೆದುಕೊಂಡಿದ್ದು, ಹೆಚ್ಚಿನ ಪರೀಕ್ಷೆಗಾಗಿ ಸ್ಯಾಂಪಲ್ ಲ್ಯಾಬಿಗೆ ಕಳಿಸಲಾಗಿದೆ. ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂಬ ವಿಡಿಯೋವೊಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.

No Coronavirus cases at ESI, Rajajingar tweets Suresh Kumar

ಆದರೆ, ಕರ್ನಾಟಕ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಇಲ್ಲಿ ತನಕ ಕೊರೊನಾವೈರಸ್ ಸೋಂಕಿತರಿಗೆ ಪಾಸಿಟಿವ್ ಎಂದು ದೃಢಪಟ್ಟಿಲ್ಲ. ಆರೋಗ್ಯ ಇಲಾಖೆ ಸಚಿವ ಬಿ. ಶ್ರೀರಾಮುಲು ಕೂಡಾ ಟ್ವೀಟ್ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕೊರೊನಾವೈರಸ್ ಎಣಿಕೆ ಮೀಟರ್:
ಒಟ್ಟು ಪ್ರಕರಣಗಳು: 110,077
ಒಟ್ಟು ಸಾವು: 3830
ಗುಣಮುಖ: 62,280
ಚೀನಾದಲ್ಲಿ 80,735 ಪ್ರಕರಣಗಳಲ್ಲಿ 3119 ಸಾವು
ಭಾರತದಲ್ಲಿ 40 ಪ್ರಕರಣಗಳಲ್ಲಿ 37 ಸಕ್ರಿಯವಾಗಿದ್ದು, 3 ಮಂದಿ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

English summary
No Coronavirus cases at ESI, Rajajingar tweets Minister Suresh Kumar giving clarification to the messages spreading via social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X