ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯುವ ಹಾಗಿಲ್ಲ

|
Google Oneindia Kannada News

ಬೆಂಗಳೂರು, ಮಾರ್ಚ್ 22: ಬಿಸಿಲ ಬೇಗೆ ವಿಪರೀತವಾಗುತ್ತಿರುವಂತೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಹಾಗಾಗಿ ಹೊಸ ಬೋರ್‌ವೆಲ್‌ಗಳಿಗೆ ಜಲಮಂಡಳಿ ಬ್ರೇಕ್ ಹಾಕಿದೆ.

ಪ್ರತಿ ಮನೆ ನಿರ್ಮಾಣಕ್ಕೂ ಮುನ್ನ ಬೋರ್‌ವೆಲ್ ತೆಗೆಯುವುದು ಕಡ್ಡಾಯವಾದಂತಾಗಿದೆ. ಎಲ್ಲರ ಮನೆಯಲ್ಲೂ ಬೋರ್‌ವೆಲ್ ವ್ಯವಸ್ಥೆ ಇದ್ದೇ ಇರುತ್ತದೆ. ಆದರೆ ಪ್ರತಿ ಬೋರ್‌ವೆಲ್‌ಗೂ ಇಂತಿಷ್ಟು ಅಂತರವಿರಬೇಕು ಎನ್ನುವ ನಿಯಮಗಳಿವೆ ಆದರೆ ಅದೆಲ್ಲವನ್ನೂ ಗಾಳಿಗೆ ತೂರಿ ಅಕ್ಕ ಪಕ್ಕದಲ್ಲೇ ಬೋರ್‌ವೆಲ್ ಕೊರೆಯಲಾಗುತ್ತಿದೆ.

ಕರ್ನಾಟಕಾದ್ಯಂತ ಬೋರ್‌ವೆಲ್ ಕೊರೆಯುವ ದರ ದುಪ್ಪಟ್ಟು ಕರ್ನಾಟಕಾದ್ಯಂತ ಬೋರ್‌ವೆಲ್ ಕೊರೆಯುವ ದರ ದುಪ್ಪಟ್ಟು

ಮಳೆಗಾಲ ಆರಂಭವಾಗುವ ವರೆಗೆ ಕೊಳವೆ ಬಾವಿ ಕೊರೆಯಲು ಅವಕಾಶ ಕೋರಿ ಎಷ್ಟೇ ಅರ್ಜಿ ಬಂದರೂ, ಖುದ್ದು ಸ್ಥಳ ಪರಿಶೀಲನೆ ನಡೆಸಿ ಆ ಪ್ರದೇಶದಲ್ಲಿ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದ್ದರೆ ಅವಕಾಶ ನೀಡದಿರಲು ತೀರ್ಮಾನಿಸಿದೆ.

No consent for new borewells in core areas of Bengaluru

ಅವಕಾಶ ನೀಡುವ ಮುನ್ನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರ ತಂಡ ಪರಿಶೀಲನೆ ನಡೆಸಿ ವರದಿ ನೀಡಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿಮನೆ ಬಳಕೆ, ಕಟ್ಟಡ ನಿರ್ಮಾಣ ಸೇರಿದಂತೆ ವಾಣಿಜ್ಯ, ಉದ್ದೇಶೇತರ ಕಾರ್ಯಕ್ಕೆ ಕೊಳವೆ ಬಾವಿ ಕೊರೆಸಲು ಜಲಂಂಡಳಿ ಅನುಮತಿ ಪಡೆಯುವುದು ಕಡ್ಡಾಯ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಅದೇ ರೀತಿ ವಾಣಿಜ್ಯ ಉದ್ದೇಶಕ್ಕೆ ಕೊಳವೆಬಾವಿ ಕೊರೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ ಆದರೆ, ನಗರಾದ್ಯಂತ ಈ ನಿಯಮ ಪಾಲನೆಯೇ ಆಗುತ್ತಿಲ್ಲ. ಅನುಮತಿಯನ್ನೇ ಪಡೆಯದೆ ನಗರದಲ್ಲಿ ಕೊಳವೆಬಾವಿಗಳನ್ನು ಕೊರೆಸುವುದು ಸಾಮಾನ್ಯವಾಗಿದೆ. ಮೊದಲು ಕೊಳವೆ ಬಾವಿ ಕೊರೆಸಿ ನಂತರ ಅನುಮತಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳೂ ಕೂಡ ನಡೆಯುತ್ತಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 4 ಲಕ್ಷದಷ್ಟು ಕೊಳವೆ ಬಾವಿಗಳಿವೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಜಲಮಂಡಳಿಗೆ ಸೇರಿದ ಸುಮಾರು 9,300 ಸಾರ್ವಜನಿಕ ಕೊಳವೆ ಬಾವಿಗಳು ಮತ್ತು ಬಿಬಿಎಂಪಿಗೆ ಸೇರಿದ 1200ಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ.

English summary
In an effort to conserve the existing groundwater level, the Bangalore Water Supply and Sewerage Board (BWSSB) has decided not to give permission to sink new borewells in the core areas of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X