ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ತಡೆ ಇಲ್ಲ: ಸಾ.ರಾ. ಗೋವಿಂದು

|
Google Oneindia Kannada News

ಬೆಂಗಳೂರು, ಏಪ್ರಿಲ್ 22: ತಮಿಳುನಾಡಿನಲ್ಲಿ ಯಾವುದೇ ಕನ್ನಡ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಿಲ್ಲ. ಆ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕರ್ನಾಟಕದಲ್ಲಿ ಬಾಹುಬಲಿ ಚಿತ್ರದ ನಿಷೇಧವಿಲ್ಲ. ತಮಿಳು ನಟ ಸತ್ಯರಾಜ್ ಕ್ಷಮೆ ಕೂರುವ ಮೂಲಕ ಈ ವಿವಾದ ಅಂತ್ಯಗೊಂಡಿದೆ. ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳಿಗೆ ತೊಂದರೆಯಾಗಿಲ್ಲ. ಇಂಥಾ ಗಾಳಿ ಸುದ್ದಿಗಳಿಗೆ ಕಿವಿಗೊಡುವುದು ಬೇಡ'' ಎಂದು ಕನ್ನಡಪರ ಸಂಘಟನೆಗಳಿಗೆ ಕಿವಿಮಾತು ಹೇಳಿದರು.[ತಮಿಳುನಾಡಿಗೆ ಎಚ್ಚರಿಕೆ ನೀಡಿದ 'ಬಿಗ್ ಬಾಸ್' ಪ್ರಥಮ್!]

No Clogging for Kannada films in Tamilnadu: Sa.Ra.Govindu

ಒಂಭತ್ತು ವರ್ಷಗಳ ಹಿಂದೆ ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ತಮಿಳು ನಟ ಸತ್ಯರಾಜ್ ಶುಕ್ರವಾರ (ಏಪ್ರಿಲ್ 21) ಕ್ಷಮೆ ಕೋರಿದ್ದರು. ಆದರೆ, ಅದರ ಬೆನ್ನಲ್ಲೇ ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ ಎಂಬ ಸುದ್ದಿ ಹರಡಿತ್ತು.

ಈ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ಕೆಲ ಕನ್ನಡಪರ ಸಂಘಟನೆಗಳ ಸದಸ್ಯರು, ಏಪ್ರಿಲ್ 22ರ ಬೆಳಗ್ಗೆ ಬೆಂಗಳೂರಿನ ಸಂಜಯಗಾಂಧಿ ನಗರದಲ್ಲಿರುವ ಪುಷ್ಪಾಂಜಲಿ ಥಿಯೇಟರ್ ಗೆ ನುಗ್ಗಿ ಅಲ್ಲಿ ಪ್ರದರ್ಶನಗೊಳ್ಳುತ್ತಿದ್ದ ತಮಿಳು ಚಿತ್ರಕ್ಕೆ ತಡೆಯೊಡ್ಡಿದ್ದರು. ಅಲ್ಲದೆ, ಚಿತ್ರ ಮಂದಿರದಲ್ಲಿದ್ದ ತಮಿಳು ಚಿತ್ರದ ಪೋಸ್ಟರ್ ಗಳನ್ನು ಹರಿದು ಹಾಕಿ ಪ್ರತಿಭಟಿಸಿದ್ದರು.

English summary
Karnataka Film Chamber of Commerce, President Sa.Ra.Govidu clarifies that, no clogging for Kannada films in Tamilnadu. The news which has been spreading about it is a roumer. He was talking to the press meet on April 22, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X