ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಇಂದು ಕಾವೇರಿ ನೀರು ವ್ಯತ್ಯಯ

|
Google Oneindia Kannada News

ಬೆಂಗಳೂರು, ಮಾರ್ಚ್ 18: ನಗರದ ಬಹುತೇಕ ಕಡೆಗಳಲ್ಲಿ ಇಂದು ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

Recommended Video

Yediyurappa reacts about water being illegally flown from Kabini to Tamil Nadu | Kabini | CM

ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಸರಬರಾಜು ಯೋಜನೆ ಒಂದನೇ ಹಂತದ ತೊರೆಕಾಡನಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿ ಯಂತ್ರಗಾರದಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 18 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ಬಹುತೇಕ ಕಡೆಗಳಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.

ಕದಿರೇಹಳ್ಳಿ, ಮಿನಾಜ್‌ನಗರ, ಮಾಗಡಿ ರಸ್ತೆ, ಗಂಗಾಧರ ನಗರ, ಪದ್ಮನಾಭನಗರ, ಆರ್‌ಕೆ ಲೇಔಟ್, ಹನುಮಗಿರಿ ನಗರ, ಮುನೇಶ್ವರನಗರ, ಪ್ರಗತಿಪುರ, ಬೇಂದ್ರೆ ನಗರ, ಚಂದ್ರನಗರ, ವಿಠ್ಠಲನಗರ, ಇಸ್ರೋ ಬಡಾವಣೆ, ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಪಿಸಿ ಬಡಾವಣೆ, ಬಿಎಚ್‌ಸಿಎಸ್ ಬಡಾವಣೆ, ಬ್ಯಾಂಕ್ ಕಾಲೊನಿ,ಉತ್ತರಹಳ್ಳಿ, ಎಜಿಎಸ್ ಬಡಾವಣೆ, ಸಾರ್ವಭೌಮನಗರ, ಚಿನ್ನಮ್ಮ ಬಡಾವಣೆ, ಕೋರಮಂಗಲ, ಬೃಂದಾವನ ಬಡಾವಣೆ, ಭವಾನಿ ಬಡಾವಣೆ, ಕೆನರಾ ಬ್ಯಾಂಕ್ ಕಾಲೊನಿ, ಮಡಿವಾಳ ಟೀಚರ್ಸ್ ಕಾಲೊನಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

No Cauvery Water Supply In Several Areas On March 18

ಚಿಕ್ಕ ಆಡುಗೋಡಿ, ಸೇಂಟ್ ಜಾನ್ ಆಸ್ಪತ್ರೆ, ರಾಜೇಂದ್ರನಗರ, ಜಾನ್ಸನ್ ಮಾರುಕಟ್ಟೆ, ಆಸ್ಟಿನ್ ಟೌನ್, ವಿವೇಕ್ ನಗರ, ಈಜಿಪುರ, ದೊಮ್ಮಲೂರು, ಆಸ್ಟಿನ್ ಟೌನ್, ಕೋಡಿ ಹಳ್ಳಿ, ಹಲಸೂರು, ದೊಮ್ಮಲೂರು ವಿಲೇಜ್, ಶ್ರೀನಗರ, ಹಲಸೂರು, ಜೋಗುಪಾಳ್ಯ, ಕೇಂಬ್ರಿಡ್ಜ್ ಬಡಾವಣೆ, ಚಾಮರಾಜಪೇಟೆ, ಮಾಧವನ್ ಪಾರ್ಕ್, ಜಯನಗರ, ತಿಲಕ್‌ನಗರ, ಕೋಡಿಹಳ್ಳಿ, ಲಕ್ಕಸಂದ್ರ ಸುತ್ತಮುತ್ತಲ ಪ್ರದೇಶದಲ್ಲಿ ಕಾವೇರಿ ನೀರು ಬರುವುದಿಲ್ಲ ಎಂದು ಜಲಮಂಡಳಿ ತಿಳಿಸಿದೆ.

English summary
Cauvery water supply will be affected in most parts of the Bengaluru city today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X