ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗೆ ಹೆದ್ದಾರಿಗಳು ಬಂದ್: ಬೆಂಗಳೂರು,ಮಂಗಳೂರು ವಿಮಾನ ದರ ದುಪ್ಪಟ್ಟು!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 16: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಮಾರ್ಗ ಗುಡ್ಡ ಕುಸಿತದ ಪರಿಣಾಮ ಬಂದ್‌ ಆಗಿರುವುದರಿಂದ ಮಂಗಳೂರು-ಬೆಂಗಳೂರು ನಡುವಿನ ವಿಮಾನ ಪ್ರಯಾಣಕ್ಕೆ ಭಾರಿ ಡಿಮ್ಯಾಂಡ್‌ ಬಂದಿದೆ.

ಕರಾವಳಿಯಲ್ಲಿ ಮುಂದುವರಿದ ಮಳೆ, ಹವಾಮಾನ ಇಲಾಖೆಯಿಂದ ಎಚ್ಚರಿಕೆಕರಾವಳಿಯಲ್ಲಿ ಮುಂದುವರಿದ ಮಳೆ, ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಈ ಎರಡು ನಗರಗಳ ನಡುವೆ ಸಂಚರಿಸುವ ವಿಮಾನಗಳಲ್ಲಿ ಭಾರಿ ಸಂದಣಿ ಕಾಣಿಸಿಕೊಂಡಿದ್ದು, ವಿಮಾನ ಯಾನ ಸಂಸ್ಥೆಗಳು ಯಾನ ದರವನ್ನು ದುಪ್ಟ್ಟುಗೊಳಿಸಿವೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರಿನಿಂದ ಸ್ಪೈಸ್‌ಜೆಟ್‌ನಲ್ಲಿ 1,649 ರೂ, ಇಂಡಿಗೋನಲ್ಲಿ 1698, ಜೆಟ್‌ ಏರ್‌ವೇಸ್‌ 2,719, ಮಂಗಳೂರಿನಿಂದ ಬೆಂಗಳೂರು ಏಕಮುಖ ಪ್ರಯಾಣಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇದು ದುಪ್ಪಟ್ಟಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಸಕಲೇಶಪುರ ದೊಡ್ಡ ತಪ್ಪಲೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಪ್ರಪಾತಕ್ಕೆ ಉರುಳಿ ಚಾಲಕ ಹಾಗೂ ಕ್ಲೀನರ್‌ ಮೃತಪಟ್ಟಿದ್ದಾರೆ.

ಕುಮಾರಸ್ವಾಮಿ ಅವರ ಆಲಮಟ್ಟಿ ಬಾಗಿನ ಕಾರ್ಯಕ್ರಮ ರದ್ದುಕುಮಾರಸ್ವಾಮಿ ಅವರ ಆಲಮಟ್ಟಿ ಬಾಗಿನ ಕಾರ್ಯಕ್ರಮ ರದ್ದು

No bus-train between Bengaluru- Mangaluru: Airfare doubled

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ ರಸ್ತೆಯ ಪಕ್ಕದ ಗುಡ್ಡಗಳು ವಿಪರೀತ ಮಳೆಯ ಕಾರಣದಿಂದ ದಿನಂಪ್ರತಿ ಅಲ್ಲಲ್ಲಿ ಗುಡ್ಡಗಳು ಕುಸಿಯುತ್ತಿರುವ ಘಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳವರೆಗೆ ಶಿರಾಡಿ ಘಾಟ್‌ ರಸ್ತೆ ಮೂಲಕ ಘನ ವಾಹನಗಳಿಗೆ ಮುಂದಿನ 4 ದಿನಗಳವರೆಗೆ ಲಘು ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

English summary
Including Shiradi ghat national highway, all the three roads have been closed between Bengaluru and Mangaluru due to heavy rain, aircraft companies have almost double air ticket in this route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X