ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಖಿಲ್ ಕುಮಾರಸ್ವಾಮಿ ಮೈಸೂರಿನಿಂದ ಸ್ಪರ್ಧೆ? ದಿನೇಶ್ ಗುಂಡೂರಾವ್ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಮಾರ್ಚ್‌ 02: ನಿಖಿಲ್ ಕುಮಾರಸ್ವಾಮಿ ಅವರು ಮೈಸೂರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಬೆಳಿಗ್ಗೆಯಿಂದ ಹರಿದಾಡುತ್ತಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಜೆಡಿಎಸ್ ಸಚಿವ ಜಿ.ಟಿ.ದೇವೇಗೌಡ ಅವರು, ನಿಖಿಲ್ ಕುಮಾರಸ್ವಾಮಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿದ್ದರು. ಆಗಿನಿಂದಲೂ ಮೈಸೂರಿನಲ್ಲಿ ರಾಜಕೀಯ ಬೆಳವಣಿಗೆಗಳು ಜೋರಾಗಿದ್ದವು.

ಮೈಸೂರಿನಿಂದ ಲೋಕಸಭಾ ಚುನಾವಣೆಗೆ ಸ್ಫರ್ಧಿಸುತ್ತಾರಾ ಎಚ್‌ಡಿಕೆ ಪುತ್ರ ನಿಖಿಲ್ ? ಮೈಸೂರಿನಿಂದ ಲೋಕಸಭಾ ಚುನಾವಣೆಗೆ ಸ್ಫರ್ಧಿಸುತ್ತಾರಾ ಎಚ್‌ಡಿಕೆ ಪುತ್ರ ನಿಖಿಲ್ ?

ಆದರೆ ಈ ಸುದ್ದಿಯನ್ನು ನಿರಾಕರಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಜಿ.ಟಿ.ದೇವೇಗೌಡ ಹೇಳಿದ ತಕ್ಷಣ ಅದು ಅಂತಿಮವಲ್ಲ. ನಮ್ಮದು ಸ್ವತಂತ್ರ್ಯ ದೇಶ ಯಾರು ಏನು ಬೇಕಾದರೂ ಹೇಳಬಹುದು, ಆದರೆ ಅದೆಲ್ಲಾ ಆಗಿಯೇ ತೀರುತ್ತದೆ ಎಂದೇನೂ ಇಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

No any seat sharing happen till now between jds-congress: Dinesh Gundu Rao

ಎಚ್‌.ಡಿ.ದೇವೇಗೌಡ ಅವರು ಹೇಳಿದರೆ ಅದೂ ಸಹ ಅಂತಿಮವಲ್ಲ, ಚರ್ಚೆಯ ಬಳಿಕವಷ್ಟೆ ಸೀಟು ಹಂಚಿಕೆ ಅಂತಿಮವಾಗಲಿದೆ. ಆ ವರೆಗೂ ಯಾವುದೂ ಸಹ ಅಂತಿಮವಲ್ಲ ಎಂದು ದಿನೇಶ್ ಅವರು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾರೆ.

ಸುತ್ತೂರಿನಲ್ಲಿ ಸುಮಲತಾ ಅಂಬರೀಶ್; ಇದೇನು ರಾಜಕೀಯ ಟ್ರೇಲರೋ ಅಥವಾ ಪಿಕ್ಚರೋ?ಸುತ್ತೂರಿನಲ್ಲಿ ಸುಮಲತಾ ಅಂಬರೀಶ್; ಇದೇನು ರಾಜಕೀಯ ಟ್ರೇಲರೋ ಅಥವಾ ಪಿಕ್ಚರೋ?

ಮಾರ್ಚ್ 4ರಂದು ಸಮನ್ವಯ ಸಮಿತಿ ಸಭೆ ಇದೆ. ಅಲ್ಲಿ ಎಲ್ಲವೂ ಚರ್ಚೆಯಾಗಬೇಕಿದೆ ಎಂದರು.

English summary
KPCC Dinesh Gundu Rao said no any seat sharing talkings happen between jds-congress till now. Local leaders saying what they want to say but leaders will decide the seat sharing and constituency sharing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X