ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

NLAT 2020 ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ

|
Google Oneindia Kannada News

ಬೆಂಗಳೂರು, ಸೆ. 14: ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) 2020 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಮಾಹಿತಿ ಬಂದಿದೆ.

ಈ ಬಗ್ಗೆ ಬಾರ್ ಅಂಡ್ ಬೆಂಚ್ ವರದಿ ಮಾಡಿದೆ. ಇಂದು ಮಧ್ಯಾಹ್ನ 12.30 ರಿಂದ 1.15 ರ ಅವಧಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿದ್ಯಾರ್ಥಿಗಳು ದೃಢಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

NLSIUನಲ್ಲಿ ಮೀಸಲಾತಿ, ದೆಹಲಿ ಕೋರ್ಟಲ್ಲಿ ಕನ್ನಡಿಗರಿಗೆ ಮುನ್ನಡೆ NLSIUನಲ್ಲಿ ಮೀಸಲಾತಿ, ದೆಹಲಿ ಕೋರ್ಟಲ್ಲಿ ಕನ್ನಡಿಗರಿಗೆ ಮುನ್ನಡೆ

ಶನಿವಾರದಂದು ಪರೀಕ್ಷೆ ಬಗ್ಗೆ ಅನೇಕ ಗೊಂದಲ ಮೂಡಿತ್ತು. ವಿದ್ಯಾರ್ಥಿಗಳ ಫೇಸ್ ರೆಕಗ್ನಿಷನ್, ಹಾಲ್ ಟಿಕೆಟ್ ವೆರಿಫಿಕೇಷನ್, ಲಾಗಿನ್ ಎಲ್ಲವೂ ಸಮಸ್ಯೆಯಾಗಿತ್ತು. ಹೀಗಾಗಿ ಮರು ಪರೀಕ್ಷೆಯನ್ನು ಸೆ. 14ರಂದು ಮಧ್ಯಾಹ್ನ ನಡೆಸಲು ವಿವಿ ಮುಂದಾಗಿತ್ತು.

Nlat 2020 Re-test Paper Leaked, Students Report

ದೇಶದ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಪ್ರವೇಶಕ್ಕಾಗಿ ಒಕ್ಕೂಟವು ಕೇಂದ್ರೀಕೃತ ಪರೀಕ್ಷೆಯನ್ನು ನಡೆಸುತ್ತದೆ. ಸೋಂಕಿನ ಭೀತಿಯ ನಡುವೆ ಪರೀಕ್ಷೆಗೆ ಖುದ್ದು ಹಾಜರಾಗುವ ಅಗತ್ಯವನ್ನು ಪ್ರಶ್ನಿಸಿ ಕಾನೂನು ಪದವೀಧರರೊಬ್ಬರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಎನ್‌ಎಲ್‌ಯು ಒಕ್ಕೂಟಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು.

Recommended Video

Indiaದ ಮೇಲೆ Cyber ​​Attack ಶುರು ಮಾಡಿದ Dragon | Oneindia Kannada

ಇದೇ ರೀತಿ ಸಿಎಲ್‌ಎಟಿ ಪರೀಕ್ಷೆಗಳು ಹಲವು ಬಾರಿ ಮುಂದೂಡಲ್ಪಟ್ಟಿವೆ. ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಮೇ 24ಕ್ಕೆ ಮುಂದೂಡಲಾಗಿತ್ತು. ಬಳಿಕ ಆಗಸ್ಟ್‌ಗೆ ಮುಂದೂಡಿಕೆಯಾಗಿತ್ತು. ಅದರಿಂದ ಸೆ. 7ಕ್ಕೆ ನಿಗದಿಯಾಗಿತ್ತು. ಈಗ ಸೆ. 28ಕ್ಕೆ ಮುಂದೂಡಲಾಗಿದೆ.

English summary
National Law Aptitude Test (NLAT 2020) paper for the re-test has been leaked reports Bar & Bench.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X