ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಬ್ಬಂದಿಗೆ ಸೋಂಕು; ಬೆಂಗಳೂರಿನ ಕೋವಿಡ್ ಪರೀಕ್ಷೆ ಲ್ಯಾಬ್‌ಗೆ ಬೀಗ

|
Google Oneindia Kannada News

ಬೆಂಗಳೂರು, ಜುಲೈ 07 : ಪ್ರತಿದಿನ ಸುಮಾರು 1 ಸಾವಿರ ಕೊರೊನಾ ವೈರಸ್ ಸೋಂಕಿನ ಮಾದರಿಗಳ ಪರೀಕ್ಷೆ ನಡೆಸುತ್ತಿದ್ದ ಪ್ರಾಯೋಗಾಲಯ ಬಾಗಿಲು ಮುಚ್ಚಿದೆ. ಶುಕ್ರವಾರದ ತನಕ ಬೆಂಗಳೂರು ನಗರದಲ್ಲಿನ ಈ ಲ್ಯಾಬ್ ಕಾರ್ಯ ನಿರ್ವಹಣೆ ಮಾಡುವುದಿಲ್ಲ.

ಬೆಂಗಳೂರಿನ ಜಯನಗರದಲ್ಲಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ (ಎನ್‌ಐವಿ)ಯಲ್ಲಿನ ಕೋವಿಡ್ -19 ಪ್ರಾಯೋಗಾಲಯ ಮುಚ್ಚಲಾಗಿದೆ. ಲ್ಯಾಬ್ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಹಿನ್ನಲೆಯಲ್ಲಿ ಬಾಗಿಲು ಹಾಕಲಾಗಿದೆ.

ಬೆಂಗಳೂರು ಇಎಸ್‌ಐ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಬೆಂಗಳೂರು ಇಎಸ್‌ಐ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಲ್ಯಾಬ್ ಬಾಗಿಲು ಮುಚ್ಚಲಾಗಿದ್ದು, ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತದೆ. ಇದಕ್ಕಾಗಿ 7 ದಿನಗಳ ಕಾಲ ಮುಚ್ಚಲಾಗಿದೆ. ಕೊರೊನಾ ವೈರಸ್ ಸೋಂಕು ಕಂಡು ಬಂದ ಸಿಬ್ಬಂದಿಗಳನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ! ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ!

NIV Bengaluru COVID 19 Lab Closed For 7 Days

ಎನ್‌ಐವಿ ಕ್ಯಾಂಪಸ್‌ನಲ್ಲಿನ ಈ ಲ್ಯಾಬ್ ನಗರದಲ್ಲಿಯೇ ಮೊದಲು ಆರ್‌ಟಿ-ಪಿಸಿಆರ್ ಪ್ರಯೋಗ ನಡೆಸಿದ ಲ್ಯಾಬ್ ಆಗಿದೆ. ಇದುವರೆಗೂ 55,245 ಮಾದರಿಗಳನ್ನು ಇಲ್ಲಿ ಪರೀಕ್ಷೆ ನಡೆಸಲಾಗಿದೆ. ಕ್ವಿದಾಯಿ ಆಸ್ಪತ್ರೆಯ ತುರ್ತು ಅಗತ್ಯವಿಲ್ಲದ ಎಲ್ಲಾ ಸೇವೆಗಳನ್ನು ಗುರುವಾರದ ತನಕ ಸ್ಥಗಿತಗೊಳಿಸಲಾಗಿದೆ.

ರಸ್ತೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕ್ಷಮೆ ಕೇಳಿದ ಬಿಬಿಎಂಪಿ ಆಯುಕ್ತರಸ್ತೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕ್ಷಮೆ ಕೇಳಿದ ಬಿಬಿಎಂಪಿ ಆಯುಕ್ತ

ಕಿದ್ವಾಯಿ ಆಸ್ಪತ್ರೆಯ ತುರ್ತು ವಿಭಾಗವನ್ನು ತೆರೆಯಲಾಗಿದೆ. ಕಳೆದ ಮೂರು ವಾರದಲ್ಲಿ 12 ಕ್ಯಾನ್ಸರ್ ರೋಗಿಗಳು, 10 ಸಿಬ್ಬಂದಿಗಳು, ನರ್ಸ್, ಡಾಕ್ಟರ್‌ಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇವರಲ್ಲಿ ಹಲವಾರು ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

English summary
Bengaluru National Institute of Virology (NIV) lab that testing more than 1000 Coronavirus sample per day closed for 7 days after staff tested positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X