ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಸ್ಸಪ್ಪ, ಅಂತೂ ಆಯ್ತು ನಿತ್ಯಾ ಪುರುಷತ್ವ ಪರೀಕ್ಷೆ!

|
Google Oneindia Kannada News

ಬೆಂಗಳೂರು, ಸೆ.8 : ಸಿಐಡಿ ಪೊಲೀಸರು ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮಿ ಕೊನೆಗೂ ಇಂದು ಪುರುಷತ್ವ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲೂ ತನ್ನ ಮೊಂಡಾಟ ಮುಂದುವರೆಸಿದ್ದ ನಿತ್ಯಾನಂದ ಸ್ವಾಮಿ ವೈದ್ಯರ ತಾಳ್ಮೆಯನ್ನು ಪರೀಕ್ಷಿಸಿದ. ನಿತ್ಯಾನಂದ ಪುರುಷತ್ವ ಪರೀಕ್ಷೆಯ ವಿವರಗಳು ಇಲ್ಲಿವೆ.

ಸಮಯ 5.30 : ವಿಕ್ಟೋರಿಯಾ ಆಸ್ಪತ್ರೆಯಿಂದ ನಿತ್ಯಾನಂದ ಸ್ವಾಮಿ ಹೊರಬಂದಿದ್ದು ಧ್ವನಿ ಪರೀಕ್ಷೆಗಾಗಿ ಮಡಿವಾಳದತ್ತ ತೆರಳುತ್ತಿದ್ದಾರೆ. ಪೊಲೀಸರ ಸೂಚನೆಯಂತೆ ವಿಶೇಷ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಮಡಿವಾಳಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ.

ಸಮಯ 4.30 : ಸೋಮವಾರ ಬೆಳಗ್ಗೆಯಿಂದ ಆಸ್ಪತ್ರೆಯಲ್ಲಿದ್ದ ನಿತ್ಯಾನಂದ ಸ್ವಾಮಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರು ಆಯಾಸ ಗೊಂಡಿದ್ದಾರೆ. ಆದ್ದರಿಂದ ವಿಕ್ಟೋರಿಯಾ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಮುಗಿದ ಬಳಿಕ ಸ್ವಾಮಿ ಮಡಿವಾಳಕ್ಕೆ ಧ್ವನಿ ಪರೀಕ್ಷೆಗೆ ತೆರಳಬೇಕಾಗಿದೆ.

ಸಮಯ 3.30 : ನಿತ್ಯಾನಂದನ ಪುರುಷತ್ವ ಪರೀಕ್ಷೆ ಮುಗಿಸಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಮಂಗಳವಾರ ಸಿಐಡಿ ಅಧಿಕಾರಿಗಳಿಗೆ ವರದಿ ನೀಡಲಿದ್ದಾರೆ. ಈ ಕುರಿತು ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ದುರ್ಗಣ್ಣ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಎಲ್ಲಾ ಪರೀಕ್ಷೆಗಳು ಮುಕ್ತಾಯಗೊಂಡಿದ್ದು ಮಂಗಳವಾರ ವರದಿ ಸಲ್ಲಿಸಲಿದ್ದೇವೆ ಎಂದು ಹೇಳಿದ್ದಾರೆ.

ಸಮಯ 2.30 : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ಅಂತ್ಯಗೊಂಡಿದ್ದು, ಅವರಿಗೆ 20 ನಿಮಿಷಗಳ ಕಾಲ ವಿಶ್ರಾಂತಿ ನೀಡಲಾಗಿದೆ. ನಂತರ ಅವರನ್ನು ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಧ್ವನಿ ಪರೀಕ್ಷೆಗೆ ಕರೆದುಕೊಂಡು ಹೋಗಲಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಸಭೆ ನಡೆಸುತ್ತಿದ್ದು, ಬೆಳಗ್ಗೆಯಿಂದ ನಡೆದ ಪರೀಕ್ಷೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಸಮಯ 1.30 : ಹಸ್ತಮೈಥುನಕ್ಕೆ ವಿರೋಧ ವ್ಯಕ್ತಪಡಿಸಿದ್ದ ನಿತ್ಯಾನಂದ ಸ್ವಾಮಿಯ ಮನವೊಲಿಕೆ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದು, ಸುಮಾರು ಅರ್ಧತಾಸು ನಿತ್ಯಾನಂದ ಜೊತೆ ಮಾತನಾಡಿದ ವೈದ್ಯರು ಪರೀಕ್ಷೆ ಬಗ್ಗೆ ಎಲ್ಲಾ ರೀತಿಯ ಮಾಹಿತಿ ನೀಡಿ ಅವರನ್ನು ಒಪ್ಪಿಸಿದ್ದಾರೆ. ಪ್ರತ್ಯೇಕ ಕೊಠಡಿಯಲ್ಲಿ ಸ್ವಾಮಿಗೆ 45 ನಿಮಿಷಗಳ ಕಾಲವಕಾಶ ನೀಡಿ ಹಸ್ತಮೈಥುನಕ್ಕೆ ಅವಕಾಶ ನೀಡಲಾಗಿದೆ.

ಸಮಯ 12.30 : ನಿತ್ಯಾನಂದ ಸ್ವಾಮಿಗೆ ಮೂರು ರೀತಿಯ ಪರೀಕ್ಷೆಗಳು ಮುಕ್ತಾಯಗೊಂಡಿದ್ದು, ನಾಲ್ಕನೇ ಪರೀಕ್ಷೆ ಆರಂಭಗೊಂಡಿದೆ. ನಿತ್ಯಾನಂದ ಸ್ವಾಮಿಯ ಬೆವರಿನ ಕಣಗಳನ್ನು ಸಂಗ್ರಹಿಸಲಾಗಿದ್ದು, ಅದನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. [ಪುರುಷತ್ವ ಪರೀಕ್ಷೆ ಎಂದರೇನು? ಇಲ್ಲಿದೆ ಮಾಹಿತಿ]

ನಿತ್ಯಾನಂದ ಸ್ವಾಮಿಗೆ ಮನೋವೈದ್ಯ ಡಾ.ಚಂದ್ರಶೇಖರ್‌ ಅವರು 18 ಪ್ರಶ್ನೆಗಳನ್ನು ಕೇಳಿ ಪರೀಕ್ಷೆ ನಡೆಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ನಿತ್ಯಾನಂದ ಸ್ವಾಮಿ ಇದ್ದು ವಿಶೇಷ ಕೊಠಡಿಯೊಂದನ್ನು ಅವರಿಗೆ ನೀಡಲಾಗಿದೆ. ಐವರು ಶಿಷ್ಯರು ಅವರೊಂದಿಗೆ ಇದ್ದು, ಅವರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಶ್ರಮದಿಂದಲೇ ನೀರು, ಕಾಫಿ, ಉಪಹಾರವನ್ನು ಆಸ್ಪತ್ರೆಗೆ ತರಲಾಗಿದೆ.

Nithyananda

ಸಮಯ 12 ಗಂಟೆ : ನಿತ್ಯಾನಂದ ಸ್ವಾಮಿ ವೀರ್ಯಾಣು ಪರೀಕ್ಷೆ ಮಾಡಬೇಕಾಗಿರುವುದರಿಂದ ಹಸ್ತಮೈಥುನ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೆ, ಹಸ್ತಮೈಥುನ ಮಾಡಿಕೊಳ್ಳುವಂತೆ ವೈದ್ಯರು ಒತ್ತಡ ಹೇರುವಂತಿಲ್ಲ. ಪರೀಕ್ಷೆಗೆ ಒಳಪಡುವ ವ್ಯಕ್ತಿಯ ಮನವೊಲಿಸಿ ಪರೀಕ್ಷೆ ನಡೆಬೇಕು. ಇದುವರೆಗೂ ನಿತ್ಯಾನಂದ ಸ್ವಾಮಿ ಹಸ್ತಮೈಥುನಕ್ಕೆ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.

ಸಮಯ 11.30 : ನಿತ್ಯಾನಂದ ಆಶ್ರಮದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದ ಆರತಿ ರಾವ್ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಪುರುಷತ್ವ ಪರೀಕ್ಷೆ ನಡೆಯುತ್ತಿದೆ. ನಿತ್ಯಾನಂದ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರತಿ ರಾವ್ ಆರೋಪಿಸಿದ್ದಾರೆ. ಆದರೆ, ತನಗೆ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಿಲ್ಲ ಎಂಬುದು ನಿತ್ಯಾನಂದನ ಸ್ವಾಮಿಯವಾದ. ಈ ಹಿನ್ನಲೆಯಲ್ಲಿ ಪರೀಕ್ಷೆ ನಡೆಯುತ್ತಿದೆ.

ಸಮಯ 11.20 : ನಿತ್ಯಾನಂದ ಸ್ವಾಮಿಯನ್ನು ಮಡಿವಾಳಕ್ಕೆ ಕರೆದೊಯ್ಯಲು ಸಿಐಡಿ ಅಧಿಕಾರಿಗಳ ಸಿದ್ಧತೆ. ನಿತ್ಯಾನಂದ ಸ್ವಾಮಿಗೆ ಸೇರಿದ ಎರಡು ಕಾರುಗಳನ್ನು ಸಿದ್ಧಪಡಿಸಲಾಗಿದೆ. ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಿತ್ಯಾನಂದ ಸ್ವಾಮಿಯ ಧ್ವನಿ ಪರೀಕ್ಷೆ ನಡೆಸಲಾಗುತ್ತದೆ.

ಸಮಯ 10.30 : ನಿತ್ಯಾನಂದ ಸ್ವಾಮಿಗೆ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಧ್ವನಿ ಪರೀಕ್ಷೆ ನಡೆಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಬೆಳಗ್ಗೆ 11 ಗಂಟೆಗೆ ಧ್ವನಿ ಪರೀಕ್ಷೆಗಾಗಿ ನಿತ್ಯಾನಂದ ಸ್ವಾಮಿಯನ್ನು ಕರೆದುಕೊಂಡು ಹೋಗಲಾಗುತ್ತದೆ.

Swami Nithyananda

ಸಮಯ 9. 30 : ನಿತ್ಯಾನಂದ ಸ್ವಾಮಿ ರಕ್ತವನ್ನು ವೈದ್ಯರು ಪಡೆದಿದ್ದು ನಂತರ ಅವರಿಗೆ ಉಪಹಾರ ಸೇವಿಸಲು ಅವಕಾಶ ನೀಡಿದ್ದಾರೆ. ಆಶ್ರಮದಿಂದ ತಂದ ಉಪಹಾರವನ್ನು ಆಸ್ಪತ್ರೆಯಲ್ಲಿ ನಿತ್ಯಾನಂದ ಸೇವಿಸಿದ್ದಾರೆ.

ಹಿಂದಿನ ಸುದ್ದಿ : ರಾಸಲೀಲೆ ಪ್ರಕರಣದ ಆರೋಪಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆಗಾಗಿ ಸೋಮವಾರ ಬೆಳಗ್ಗೆ 7.40ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಪರೀಕ್ಷೆ ನಡೆಯಲಿದೆ.

ಬಿಡದಿಯ ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆಗೆ ಒಳಪಡಲೇಬೇಕು ಎಂದು ಸುಪ್ರೀಂಕೋರ್ಟ್ ಈಗಾಗಲೇ ತಿರ್ಪು ನೀಡಿತ್ತು. ಆದ್ದರಿಂದ ಸೆ.8ರ ಸೋಮವಾರ ಬೆಳಗ್ಗೆ 9 ಗಂಟೆಗೆ ವೈದ್ಯಕೀಯ ಪರೀಕ್ಷೆ ನಡೆಸಲು ಸಿಐಡಿ ಪೊಲೀಸರು ತೀರ್ಮಾನ ಕೈಗೊಂಡಿದ್ದರು. [ನಿತ್ಯಾನಂದ ಸ್ವಾಮಿಗೆ ಪುರುಷತ್ವ ಪರೀಕ್ಷೆ]

victoria hospital

ಭಾನುವಾರ ಮಧ್ಯಾಹ್ನ ಬಿಡದಿ ಆಶ್ರಮಕ್ಕೆ ತೆರಳಿದ್ದ ಸಿಐಡಿ ಪೊಲೀಸರು ಪುರುಷತ್ವ ಪರೀಕ್ಷೆಗೆ ಹಾಜರಾಗುವಂತೆ ನಿತ್ಯಾನಂದ ಸ್ವಾಮಿಗೆ ನೋಟಿಸ್ ಜಾರಿಗೊಳಿಸಿದ್ದರು. ವೈದ್ಯರ ಸೂಚನೆಯನ್ನು ಸ್ವಾಮೀಜಿಗೆ ತಿಳಿಸಿಕೊಟ್ಟಿದ್ದರು. ಅಗತ್ಯವಿದ್ದರೆ, ಬಿಡದಿ ಧ್ಯಾನಪೀಠದಿಂದ ಆಗಮಿಸಲು ಪೊಲೀಸ್ ಭದ್ರತೆ ನೀಡುವುದಾಗಿ ತಿಳಿಸಿದ್ದರು. ಆದರೆ, ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ಹಾಜರಾಗುವುದಾಗಿ ನಿತ್ಯಾನಂದ ಸ್ವಾಮಿ ಪೊಲೀಸರಿಗೆ ಹೇಳಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಗೆ ಆಗಮಿಸುವಂತೆ ಪೊಲೀಸರು ಸೂಚನೆ ನೀಡಿದ್ದರು. ಆದರೆ, ಇಂದು ಬೆಳಗ್ಗೆ 7.40ಕ್ಕೆ ನಿತ್ಯಾನಂದ ಸ್ವಾಮಿ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದ್ದಾರೆ. ಆಸ್ಪತ್ರೆಯ ನಾಲ್ವರು ವೈದ್ಯರ ತಂಡ ನಿತ್ಯಾನಂದ ಸ್ವಾಮಿಗೆ ಪುರುಷತ್ವ ಪರೀಕ್ಷೆ ನಡೆಸಲಿದೆ.

ಮಾಧ್ಯಮಗಳ ಕಣ್ಣುತಪ್ಪಿಸಿ ಬಂದ ನಿತ್ಯಾನಂದ : ಬಿಡದಿ ಆಶ್ರಮದಿಂದ ಬೆಳಗ್ಗೆ 7.30ಕ್ಕೆ ನಾಲ್ಕು ಕಾರುಗಳು ಒಟ್ಟಿಗೆ ಹೊರಬಂದವು ಯಾವುದರಲ್ಲಿ ನಿತ್ಯಾನಂದ ಸ್ವಾಮಿ ಇದ್ದಾನೆ ಎಂದು ಮಾಧ್ಯಮದವರು ಹುಡುಕುವಷ್ಟರಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ನಿತ್ಯಾನಂದ ಸ್ವಾಮಿ ಆಗಮಿಸಿದ್ದರು. ಬಿಡದಿ ಆಶ್ರಮದದಿಂದ ಹೊರಟ ಕಾರಿನಲ್ಲಿ ಅವರ ಶಿಷ್ಯರು ಮಾತ್ರ ಇದ್ದರು.

ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ನಿತ್ಯಾನಂದ ಸ್ವಾಮಿ ಇಂತಹ ಉಪಾಯ ಮಾಡಿದರೂ ವಿಕ್ಟೋರಿಯಾ ಆಸ್ಪತ್ರೆ ಬಳಿ ಇದ್ದ ಕ್ಯಾಮರಾಗಳ ಕಣ್ಣಿಗೆ ಸಿಕ್ಕಿಬಿದ್ದರು. ಮೂವರು ಶಿಷ್ಯರ ಜೊತೆ ಟೊಯೋಟಾ ಕರೋಲಾ ಕಾರಿನಲ್ಲಿ ನಿತ್ಯಾನಂದ ಸ್ವಾಮಿ ಆಸ್ಪತ್ರೆಗೆ ಆಗಮಿಸಿದರು. ತಕ್ಷಣ ಅವರನ್ನು ಸಿಐಡಿ ಅಧಿಕಾರಿಗಳು ಆಸ್ಪತ್ರೆಯೊಳಗೆ ಕರೆದುಕೊಂಡು ಹೋದರು.

English summary
As directed by Supreme Court CID police will take self-proclaimed godman Nityananda Swamy to Victoria Hospital for a potency test on Monday, September 8. Nityananda Swamy arrived for Victoria Hospital at 7.40 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X