ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಪಾಹ್ ವೈರಸ್ ಭೀತಿ, ಕರ್ನಾಟಕದ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

|
Google Oneindia Kannada News

ಬೆಂಗಳೂರು, ಜೂನ್ 6: ಕೇರಳದಲ್ಲಿ ನಿಪಾಹ್ ವೈರಸ್ ಇರುವುದು ದೃಢಪಟ್ಟಿದ್ದು, ಕರ್ನಾಟಕದ 8 ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಒಂದು ಪ್ರಕರಣ ದೃಢ ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಒಂದು ಪ್ರಕರಣ ದೃಢ

ಮಲೇಶಿಯಾದಲ್ಲಿ ನಿಪಾಹ್ ವೈರಸ್ ಮೊದಲು ಕಂಡುಬಂದಿದ್ದು, 1988ರಿಂದ ಇಲ್ಲಿಯವರೆಗೆ 477 ಮಂದಿಯಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದು, 248 ಮಂದಿ ಮೃತಪಟ್ಟಿದ್ದಾರೆ. 2018ರಲ್ಲಿ 18 ಪ್ರಕರಣಗಳ ಪೈಕಿ 17 ಮಂದಿ ಕೋಳಿಕ್ಕೋಡ ಹಾಗೂ ಮಲಪ್ಪುರಂನಲ್ಲಿ ಮೃತಪಟ್ಟಿದ್ದರು.

Nipah virus Health department issued circular in Karnataka

ಇದೀಗ 23ವರ್ಷದ ವಿದ್ಯಾರ್ಥಿಯಲ್ಲಿ ಸೋಂಕು ಇರುವುದು ದೃಢಪಟ್ಟಿರುವ ಕಾರಣ ಕರ್ನಾಟಕದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

ಜಿಲ್ಲಾಮಟ್ಟದಲ್ಲಿ ನಡೆಯಬೇಕಾದ ಕಾರ್ಯಕ್ರಮಗಳಾವುವು: ಕೋ-ಆರ್ಡಿನೇಷನ್ ಕಮಿಟಿ ಸಭೆ ಕರೆದು, ವೆಟನರಿ ಇಲಾಖೆ, ಐಎಂಎ, ಐಎಪಿ ಒಳಗೊಂಡ ಸಭೆ ನಡೆಸಬೇಕು.
-ಪ್ರತಿ ಆಸ್ಪತ್ರೆಯಲ್ಲಿ ಕನಿಷ್ಠ ಎರಡು ಬೆಡ್‌ಗಳನ್ನು ಮೀಸಲಿರಿಸಬೇಕು
-ಯಾವುದೇ ರೋಗಿಗೆ ಜ್ವರ ಕಾಣಿಸಿಕೊಂಡಲ್ಲಿ ತಕ್ಷಣ ಎಲ್ಲಾ ಪರೀಕ್ಷೆಯನ್ನು ಮಾಡಿಸಲೇಬೇಕು.
- ತುರ್ತು ಸಂದರ್ಭಗಳಿಗಾಗಿ ಐಸಿಯು ಹಾಗೂ ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.
-ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿತ್ಯ ವರದಿ ಪಡೆಯಲೇಬೇಕು.

English summary
Nipah Virus one case confirmed in Ernakulam so Health department issued circular to Karnatakas 8 districts like chamarajanagar, Mysuru, Kodagu, Shivamogga, Chikkamagalur, Dakshina Kannada, Uttarakannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X