ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೇರವಾಗಿ ವೇದಿಕೆ ಏರಿ ಕುಮಾರಸ್ವಾಮಿ ಕಾಲಿಗೆ ಬಿದ್ದ 9ರ ಬಾಲಕ: ಔದಾರ್ಯ ಮೆರೆದಿದ್ದ ಎಚ್ಡಿಕೆ

|
Google Oneindia Kannada News

ಬೆಂಗಳೂರು, ಜೂನ್ 20: ನಾನೊಬ್ಬ ಭಾವನಾತ್ಮಕ ಜೀವಿ ಎಂದು ಹಲವು ವೇದಿಕೆಯಲ್ಲಿ ಹೇಳಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ, ನಗರದ ಕಾರ್ಯಕ್ರಮವೊಂದರಲ್ಲಿ ಭಾವನಾತ್ಮಕ ಸನ್ನಿವೇಶ ಎದುರಿಸಬೇಕಾಗಿ ಬಂತು.

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ನಿರ್ಮಿಸಿರುವ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಉದ್ಘಾಟಿಸಿದ ನಂತರ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿಗಳು, ಇನ್ಫೋಸಿಸ್ ಫೌಂಡೇಶನ್ ನ ಸುಧಾಮೂರ್ತಿ, ಮೇಯರ್, ಡಾ. ಸಿ ಎನ್ ಮಂಜುನಾಥ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಬಿಜೆಪಿಯಿಂದ 10 ಕೋಟಿ ಆಮಿಷಕ್ಕೊಳಗಾದ ಜೆಡಿಎಸ್ ಶಾಸಕ ಯಾರು?ಬಿಜೆಪಿಯಿಂದ 10 ಕೋಟಿ ಆಮಿಷಕ್ಕೊಳಗಾದ ಜೆಡಿಎಸ್ ಶಾಸಕ ಯಾರು?

ಆಗ, ನೇರ ವೇದಿಕೆಗೆ ಆಗಮಿಸಿದ ಸೃಜನ್ ಎನ್ನುವ ಒಂಬತ್ತು ವರ್ಷದ ಬಾಲಕ, ಮುಖ್ಯಮಂತ್ರಿಗಳ ಮತ್ತು ಸುಧಾಮೂರ್ತಿಯವರ ಕಾಲಿಗೆ ಬಿದ್ದು ನಮಸ್ಕರಿಸಿ, ನಂತರ ಸಿಎಂಗೆ 'ಥ್ಯಾಂಕ್ಸ್ ಅಂಕಲ್' ಎಂದು ಹೇಳಿದ್ದಾನೆ.

Nine year boy taken blessing of CM Kumaraswamy. HDK helped boy for his disease

ಹುಡುಗನಲ್ಲಿ ಮಾಹಿತಿ ಪಡೆದುಕೊಂಡು, ನಂತರ ಆರೋಗ್ಯ ವಿಚಾರಿಸಿದ ಕುಮಾರಸ್ವಾಮಿ, ದೇವರು ಒಳ್ಳೆದು ಮಾಡ್ಲಪ್ಪಾ.. ಎಂದು ಬೆನ್ನು ತಟ್ಟಿ, ಸೆಲ್ಫಿ ತೆಗೆಸಿಕೊಂಡು ಕಳುಹಿಸಿಕೊಟ್ಟ ಘಟನೆ ನಡೆದಿದೆ.

ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ

ಸೃಜನ್ ಹದಿನಾರು ತಿಂಗಳ ಮಗುವಾಗಿದ್ದಾಗ ರಕ್ತದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ. ಹುಡುಗನ ತಂದೆ ಕುಮಾರಸ್ವಾಮಿಯವರನ್ನು ಭೇಟಿಯಾಗಿ, ಚಿಕಿತ್ಸೆ ಕೊಡಿಸಿ, ನನ್ನ ಮಗನನ್ನು ಉಳಿಸಿಕೊಡಿ ಎಂದು ಮನವಿ ಮಾಡಿದ್ದರು.

ಅಲ್ಲಿಂದ, ಸುಮಾರು ಆರು ವರ್ಷಗಳ ಕಾಲ ಹುಡುಗನಿಗೆ ಸಿಎಂ ಕುಮಾರಸ್ವಾಮಿ ಚಿಕಿತ್ಸೆ ಕೊಡಿಸಿ ಔದಾರ್ಯ ಮೆರೆದಿದ್ದರು. ಹುಡುಗ ಮತ್ತು ಆತನ ತಂದೆ, ಇಬ್ಬರೂ ಕುಮಾರಸ್ವಾಮಿ ಕಾಲಿಗೆ ಬಿದ್ದು, ಧನ್ಯವಾದ ಸಲ್ಲಿಸಿದ್ದಾರೆ.

English summary
Nine year boy taken blessing of CM Kumaraswamy. HDK helped that boy for his blood cancer disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X