• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಮ್ಹಾನ್ಸ್ ಕಾರ್ಯಾಚರಣೆ ಪೂರ್ಣ, ಕೈದಿ ವಿಶ್ವನಾಥ್ ಅಂತ್ಯ

By Mahesh
|

ಭಾನುವಾರಕ್ಕೂ ಮುನ್ನ

ಬೆಂಗಳೂರು, ಆಗಸ್ಟ್ 16: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಆವರಣದಲ್ಲಿ ಭಾನುವಾರ ಸಂಜೆ ಭಾರಿ ಗೊಂದಲ, ಭಯದ ವಾತಾವರಣ ನಿರ್ಮಾಣವಾಗಿತ್ತು. ಮಾನಸಿಕ ಅಸ್ವಸ್ಥನಾಗಿರುವ ಕೈದಿಯೊಬ್ಬನ ಕೈಗೆ ಬಂದೂಕು ಸಿಕ್ಕಿದ್ದು, ಮನಬಂದಂತೆ ಗುಂಡು ಹಾರಿಸಿದ್ದ ಘಟನೆ ನಡೆಯಿತು. ಆದರೆ, ಕಮಾಂಡೋ ಕಾರ್ಯಾಚರಣೆಯಿಂದ ಕೈದಿಯ ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ಕೊಲೆ ಪ್ರಕರಣವೊಂದರ ಆರೋಪಿಯಾಗಿರುವ 22 ವರ್ಷ ವಯಸ್ಸಿನ ವಿಶ್ವನಾಥ್ (ಕೈದಿ ನಂಬರ್ 1623) ದೆಸೆಯಿಂದ ನಿಮ್ಹಾನ್ಸ್ ನಲ್ಲಿ ಆತಂಕ ಸೃಷ್ಟಿಯಾಗಿತ್ತು.ಜುಲೈ 24ರಿಂದ ಜೈಲು ವಾರ್ಡಿನಲ್ಲಿರುವ ವಿಶ್ವನಾಥ್ ಗೆ ಚಿಕಿತ್ಸೆಗಾಗಿ ನಿಮ್ಹಾನ್ಸ್ ಗೆ ಕರೆದುಕೊಂಡು ಬರಲಾಗಿತ್ತು.

ಬಾತ್ ರೂಮಿಗೆ ಹೋಗಬೇಕು ಎಂದು ಹೇಳಿದ ವಿಶ್ವನಾಥ್ ಮಾರ್ಗ ಮಧ್ಯದಲ್ಲಿ ಗಾರ್ಡ್ ರೂಮಿನ ಬಳಿ ಬಂದಾಗ ಭದ್ರತಾ ಸಿಬ್ಬಂದಿ ಬಳಿ ಇದ್ದ ಬಂದೂಕನ್ನು ಕಸಿದುಕೊಂಡ ವಿಶ್ವನಾಥ್ ಗುಂಡು ಹಾರಿಸುತ್ತಾ ಓಡಿದ್ದಾನೆ.

ನಿಮ್ಹಾನ್ಸ್ ನ ವಾರ್ಡ್ ವೊಂದರಲ್ಲಿ ಸೇರಿಕೊಂಡ ವಿಶ್ವನಾಥ್ ಕೆಲ ಗಂಟೆಗಳಿಂದ ಅಲ್ಲೇ ಇದ್ದಾನೆ. ಹೊರಗಡೆಯಿಂದ ಬೀಗ ಹಾಕಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮಾರು 8 ರಿಂದ 10 ಸುತ್ತಿನ ಗುಂಡು ಹಾರಿಸಿದ್ದಾನೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿತ್ತು. ಅದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರು ಸುಮಾರು 23 ಸುತ್ತಿನ ಗುಂಡು ಹಾರಿಸಲಾಗಿದೆ ಎಂದಿದ್ದಾರೆ.

ಗೊರಗುಂಟೆ ಪಾಳ್ಯದ ನಿವಾಸಿಯಾಗಿರುವ ವಿಶ್ವನಾಥ್ ಕೆಲ ತಿಂಗಳುಗಳಿಂದ ತುಂಬಾ ಮೌನಿಯಾಗಿದ್ದ. ಸಹ ಕೈದಿಗಳು ಮಾತನಾಡಿಸಲು ಬಂದರೆ ಜಗಳವಾಡುತ್ತಿದ್ದ. ಭಾನುವಾರಕ್ಕೂ ಮುನ್ನ ಜುಲೈ 24ರಂದು ಚಿಕಿತ್ಸೆ ಪಡೆದುಕೊಂಡಿದ್ದ. ಕಳೆದ ಮೂರು ವರ್ಷಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಆತನ ಬಳಿ . 303 ಎಸ್ ಎಲ್ ಆರ್ ಬಂದೂಕು ಇದೆ. ಜೊತೆಗೆ ಬುಲೆಟ್ ಬೆಲ್ಟ್ ಬಾಕ್ಸ್ ಸಹ ಕಸಿದುಕೊಂಡಿದ್ದಾನೆ. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಪೊಲೀಸರು ಹಾಗೂ ಕ್ಷಿಪ್ರ ಕಾರ್ಯ ಪಡೆ ಕಾರ್ಯಾಚರಣೆ ನಡೆಸಿದ್ದಾರೆ. ಅದರೆ, ಕೊನೆ ಗಳಿಗೆಯಲ್ಲಿ ಮಾತು ಕೇಳದ ವಿಶ್ವನಾಥ್ ಮೇಲೆ ಗರುಡಾ ಪಡೆ ಕಮಾಂಡೋಗಳು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಗಾಯಗೊಂಡ ವಿಶ್ವನಾಥ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ .

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vishwanath -A mentally ill patient who opened fire inside a guard room at the National Institute of Mental Health and Neuroscience, Bengaluru was shot dead by security forces. The patient also an undertrial prisoner opened fire after snatching away a rifle of a police man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more