ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಲ್ ಗೇಟ್ಸ್ ದಾನ ಅಭಿಯಾನಕ್ಕೆ ನಿಲೇಕಣಿ ದಂಪತಿ ಸಾಥ್

By Mahesh
|
Google Oneindia Kannada News

ಬೆಂಗಳೂರು, ಜೂನ್ 01: ಜಗತ್ತಿನ ಅತ್ಯಂತ ಶ್ರೀಮಂತರ ಪೈಕಿ ಒಬ್ಬರಾದ ಬಿಲ್ ಗೇಟ್ಸ್ ಅವರ ಸ್ಥಾಪನೆಯ 'ಗಿವಿಂಗ್ ಪ್ಲೆಡ್ಜ್ ' ದಾನ ದತ್ತಿ ಅಭಿಯಾನಕ್ಕೆ ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಮುಖ್ಯಸ್ಥ ನಂದನ್ ನಿಲೇಕಣಿ ಹಾಗೂ ಅವರ ಪತ್ನಿ ರೋಹಿಣಿ ನಿಲೇಕಣಿ ಸೇರಿದಂತೆ ಭಾರತದ ಮೂವರು ಬಿಲಿಯನ್ನರ್ ಗಳು ಸೇರ್ಪಡೆಗೊಂಡಿದ್ದಾರೆ.

ಭಗವದ್ಗೀತೆಯ ಶ್ಲೋಕವೊಂದನ್ನು ಉಲ್ಲೇಖಿಸಿ, ದಾನ ಪ್ರತಿಜ್ಞೆ ಪತ್ರಕ್ಕೆನಿಲೇಕಣಿ ದಂಪತಿ ಸಹಿ ಹಾಕಿದ್ದಾರೆ. ಇವರ ಜತೆಗೆ ಅನಿಲ್ ಮತ್ತು ಅಲ್ಲಿಸನ್ ಭುಸ್ರಿ, ಶಂಷೀರ್ ಮತ್ತು ಶಬೀನಾ ವಯಲಿಲ್, ಬಿ.ಆರ್.ಶೆಟ್ಟಿ ಮತ್ತು ಪತ್ನಿ ಚಂದ್ರಕುಮಾರಿ ರಘುರಾಮ್ ಶೆಟ್ಟಿ ಕೂಡಾ ಈ ಅಭಿಯಾನಕ್ಕೆ ಜತೆಯಾಗಿದ್ದಾರೆ.

Nilekanis, 3 PIOs to donate over half of wealth

2010 ರಲ್ಲಿ ಅಮೆರಿಕ ಮೂಲದ 40 ಕೋಟ್ಯಧೀಶರು ಗಿವಿಂಗ್​ ಪ್ಲೆಡ್ಜ್​ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಪ್ರಸ್ತುತ 32 ರಿಂದ 94 ವಯೋಮಾನದ 22 ದೇಶಗಳ 183 ಕೋಟ್ಯಧೀಶರು ಅಭಿಯಾನಕ್ಕೆ ಕೈಜೋಡಿದ್ದಾರೆ. ಭಾರತದ ಮಹಾನ್ ದಾನಿಗಳ ಪೈಕಿ ನಿಲೇಕಣಿ ದಂಪತಿಗಳು ಅಗ್ರಗಣ್ಯರಾಗಿದ್ದಾರೆ.

English summary
Infosys co-founder and chairman Nandan Nilekani, his wife Rohini Nilekani and three Indian-origin billionaires have joined the philanthropic initiative created by philanthropists Bill and Melinda Gates and Warren Buffett, pledging to commit more than half of their wealth to charitable causes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X