ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್ ಪಾರ್ಕ್, ಲಾಲ್ ಬಾಗ್ ನಲ್ಲಿ ರಾತ್ರಿ ಮನರಂಜನೆ ಬೇಕಾ?

ಬೆಂಗಳೂರಿನ ಆಕರ್ಷಣೆಯ ಕೇಂದ್ರ ಬಿಂದು ಎನ್ನಿಸಿರುವ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಎರಡು ಉದ್ಯಾನವನಗಳಲ್ಲಿ ರಾತ್ರಿ ಮನರಂಜನೆಗೆ ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 19: ಇಂದಿನ ಕಾಂಕ್ರೀಟ್ ಕಾಲದಲ್ಲೂ ಉದ್ಯಾನ ನಗರಿಗೆ ಆ ಹೆಸರು ಉಳಿಯುವಂತೆ ಮಾಡಿದ ಕೀರ್ತಿ ಇಲ್ಲಿನ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಗೆ ಸಲ್ಲುತ್ತದೆ. ಬೆಂಗಳೂರಿನ ಆಕರ್ಷಣೆಯ ಕೇಂದ್ರ ಬಿಂದು ಎನ್ನಿಸಿರುವ ಈ ಎರಡು ಉದ್ಯಾನವನಗಳಲ್ಲಿ ರಾತ್ರಿ ಮನರಂಜನೆಗೆ ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಕೊಂಡಿದ್ದು, ಪರಿಸರ ಪ್ರೇಮಿಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವುದಲ್ಲದೆ, ಈ ನಿರ್ಧಾರವನ್ನು ಸರ್ಕಾರ ಜಾರಿಗೆ ತಂದಲ್ಲಿ ಸ್ಟೀಲ್ ಬ್ರಿಡ್ಜ್ ಹೋರಾಟದಂತೆ ಉಗ್ರ ಹೋರಾಟ ನಡೆಸುವುದಾಗಿ ಪರಿಸರ ಪ್ರೇಮಿಗಳು ಎಚ್ಚರಿಕೆ ನೀಡಿದ್ದಾರೆ.[ಬೆಂಗಳೂರಿನಲ್ಲಿ ಆರಂಭವಾಗಲಿದೆ ಪ್ರತ್ಯೇಕ ಬಸ್ ಲೇನ್!]

Night entertainment in Lalbhag and Cubbon park: environmentalists oppose

ರಾತ್ರಿ ಮನರಂಜನೆಯ ಈ ಯೋಜನೆ ಜಾರಿಯಾದಲ್ಲಿ, ಈ ಎರಡು ಸಸ್ಯಕಾಶಿಗಳಲ್ಲಿರುವ ಅಪರೂಪದ ಜೀವ ಸಂಕುಲಕ್ಕೆ ತೊಂದರೆಯಾಗುತ್ತದೆ. ಈ ಎರಡು ಪಾರ್ಕ್ ಗಳಲ್ಲಿ ಹಗಲು ಸಮಯದಲ್ಲೇ ಸರಿಯಾಗಿ ಭದ್ರತಾ ಸಿಬ್ಬಂದಿಗಳಿಲ್ಲದೆ, ಹಲವು ಅಹಿತಕರ ಘಟನೆ ನಡೆದಿರುವಾಗ, ರಾತ್ರಿ ಸಮಯದಲ್ಲೂ ಇಲ್ಲಿಗೆ ಪ್ರವೇಶಕ್ಕೆ ಅನುಮತಿ ನೀಡಿ, ಮನರಂಜನಾ ಕಾರ್ಯಕ್ರಮ ಆರಂಭಿಸಿಸದರೆ ಗತಿ ಏನು ಎಂಬುದು ಅವರ ಪ್ರಶ್ನೆ.
ಸರ್ಕಾರದ ಹೊಸ ಯೋಚನೆಯ ಬಗ್ಗೆ ನೀವೇನಂತೀರಾ..?

Night entertainment in Lalbhag and Cubbon park: environmentalists oppose
English summary
To attract tourists Government of Karnataka is thinking to start entertainment programmes in Lalbhag and Cubbon park in night. But environmentalists are opposing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X