ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 10: ಕೊರೋನಾ ಎರಡನೇ ಅಲೆ ಹೆಚ್ಚಳ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ನೈಟ್‌ ಕರ್ಫ್ಯೂ ನಿಯಮಗಳ ಜಾರಿಗೆ ಕ್ಷಣಗಣನೆ ಆರಂಭವಾಗಿದೆ. ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಚೆಕ್ ಪಾಯಿಂಟ್ ಮಾಡಿಕೊಂಡು ರಾತ್ರಿ ಹತ್ತು ಗಂಟೆ ಮೇಲೆ ಅನಾವಶ್ಯಕವಾಗಿ ಓಡಾಟ ನಡೆಸುವರ ಮೇಲೆ ದಂಡ ಪ್ರಯೋಗ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಜನ ಜಾಗೃತಿ: ರಾತ್ರಿ ಕರ್ಫ್ಯೂ ಪಶ್ಚಿಮ ವಿಭಾಗದ ಪೊಲೀಸರು ಜನ ಜಾಗೃತಿ ಮೂಡಿಸುತ್ತಿದ್ದಾರೆ. ಡಿಸಿಪಿ ಸಂಜೀವ ಎಂ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣೆವಾರು ಹೊಯ್ಸಳ ವಾಹನದಲ್ಲಿ ಜನರಿಗೆ ಎಚ್ಚರಿಕೆ ನೀಡಿದರು. ನೈಟ್ ಕರ್ಫ್ಯೂ ನಿಯಮಗಳ ಬಗ್ಗೆ ವಾಣಿಜ್ಯ ಪ್ರದೇಶಗಳ್ಲಿ ಅರಿವು ಮೂಡಿಸಿದ್ದಾರೆ. ಪಶ್ಚಿಮ ವಿಭಾಗದಲ್ಲಿ 51 ಕಡೆ ಬ್ಯಾರಿಕೇಡ್ ಹಾಕಲಾಗಿದೆ. 19 ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹದಿನಾರು ದ್ವಿಮುಖ ರಸ್ತೆಗಳನ್ನು ಏಕಮುಖ ಸಂಚಾರ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ಎರಡು ಕಡೆ ತಪಾಸಣೆ ಕೇಂದ್ರ ಹಾಕಲಾಗಿದೆ. ಈ ಮೂಲಕ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಮೊದಲ ಸಾಲಿನಲ್ಲಿ ನಿಂತಿದ್ದಾರೆ.

ಏ.10ರಿಂದ ನೈಟ್ ಕರ್ಫ್ಯೂ: ಯಾವುದಕ್ಕೆಲ್ಲಾ ಅನುಮತಿ?ಏ.10ರಿಂದ ನೈಟ್ ಕರ್ಫ್ಯೂ: ಯಾವುದಕ್ಕೆಲ್ಲಾ ಅನುಮತಿ?

ಅದೇ ರೀತಿ ದಕ್ಷಿಣ ವಿಭಾಗದಲ್ಲೂ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ನೈಟ್ ಕರ್ಪ್ಯೂ ಜಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಡಿಸಿಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 20 ದ್ವಿಮುಖ ರಸ್ತೆಗಳನ್ನು ಏಕಮುಖ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. 24 ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ. 42 ಸಣ್ಣ ರಸ್ತೆಗಳನ್ನು ರದ್ದು ಮಾಡಲಾಗಿದೆ. 36 ಕಡೆ ಪರಿಶೀಲನಾ ಕೇಂದ್ರಗಳನ್ನು ತೆರೆಯಲಾಗಿದೆ. ನಾಲ್ಕು ಅಂತರ ಜಿಲ್ಲಾ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಇದೇ ರೀತಿ ಎಲ್ಲಾ ವಿಭಾಗದಲ್ಲೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

Night curfew in Bengaluru: Police Closed these main roads

10 ಗಂಟೆಗೆ ಆರಂಭವಾಗುತ್ತೆ ಕಠಿಣ ನೈಟ್ ಕರ್ಫ್ಯೂ

ರಾತ್ರಿ 10 ಗಂಟೆ ಒಳಗೆ ಎಲ್ಲರೂ ಮನೆ ಸೇರಿಕೊಳ್ಳಬೇಕಾಗುತ್ತೆ

9 ಗಂಟೆಗೆ ಅಂಗಡಿ ಮುಂಗಟ್ಟುಗಳು ಕ್ಲೋಸ್ ಮಾಡ್ಬೇಕು

ಅಗತ್ಯ ಸೇವೆಗಳುನ್ನು ಹೊರತು ಪಡಿಸಿ ಎಲ್ಲಾ ಸೇವೆಗಳು ಬಂದ್

ಬೆಳಗಿನ ಜಾವ 5 ಗಂಟೆವರೆಗೂ ಇರುತ್ತೆ ನೈಟ್ ಕರ್ಫ್ಯೂ

ರಾತ್ರಿ ವೇಳೆ ಅನಗತ್ಯ ಓಡಾಟಕ್ಕೆ ಬ್ರೇಕ್ ಬಿಳುತ್ತೆ

ಆಕಸ್ಮಿಕ ಓಡಾಡಿದ್ರೆ ಅಂಥವರ ವಿರುದ್ಧ ಕಠಿಣ ಕ್ರಮ

ರಾತ್ರಿಪಾಳಿ ಕೆಲಸಗಾರರು 10 ಗಂಟೆ ಒಳಗೆ ಸೇರಿಕೊಳ್ಳಬೇಕು

ಅಗತ್ಯ ಬಿದ್ದಲ್ಲಿ ಸಂಸ್ಥೆಯ ಐಟಿ ಕಾರ್ಡ್ ತೋರಿಸಿ ತೆರಳಬೇಕು

ಇನ್ನು ಅನಗತ್ಯ ವಾಹನ ಸಂಚಾರ ಮಾಡಿದ್ರೆ ಲೈಸನ್ಸ್ ರದ್ದು

ಪದೇ ಪದೇ ತಿರುಗಾಡಿದ್ರೆ ವಾಹನ ಜಪ್ತಿ

ನಗರದ ಎಲ್ಲಾ ಫ್ಲೈ ಓವರ್‌ ನಲ್ಲಿ ವಾಹನ ಸಂಚಾರ ಬಂದ್

ರಸ್ತೆಗಳಲ್ಲಿ ವ್ಹೀಲಿಂಗ್ ಮಾಡಿದ್ರೆ ಕ್ರಿಮಿನಲ್ ಕೇಸ್

Recommended Video

ಈ ದೇಶದಲ್ಲಿ ಕೊರೊನ ರೋಗಿಗೆ ಬೆಡ್ ಇಲ್ವಂತೆ !! | Oneindia Kannada

English summary
Corona Curfew in Bengaluru: Night curfew has been issued in the wake of covid's second wave, main roads closed by police. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X