• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಎಲ್ಎಕ್ಸ್ ನಲ್ಲಿ ಮಾರಿಬಿಡಿ ಎಂಬ ನೈಜೀರಿಯನ್ ಸೆರೆ

By Mahesh
|

ಬೆಂಗಳೂರು, ಜೂ.28: ಒಎಲ್ಎಕ್ಸ್ ನಲ್ಲಿ ಕಾರು ಮಾರಾಟಕ್ಕಿದೆ ಎಂದು ನಕಲಿ ಜಾಹಿರಾತು ನೀಡುವ ಮೂಲಕ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬೆಂಗಳೂರಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅತಿ ದೊಡ್ಡ ಜಾಹೀರಾತು ದಂಧೆ ಬೆಳಕಿಗೆ ಬಂದಿದ್ದು, ಇಹಿಭಿ ಇಹಿಸ್ ಎಂಬ ನೈಜೀರಿಯಾದ ಪ್ರಜೆ ಹಾಗೂ ಸ್ಥಳೀಯ ಗೆಳತಿ ಸಾಧನಾ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. [ಟೆಕ್ಕಿಗಳ ಅಕೌಂಟಿಗೆ ಕನ್ನ ಹಾಕಿದ ಐನಾತಿ ಹ್ಯಾಕರ್!]

ನಕಲಿ ಜಾಹೀರಾತು ನೀಡಿ ಕ್ವಿಕರ್(quickr), ಒಎಲ್ ಎಕ್ಸ್(olx) ವೆಬ್ ಸೈಟ್ ಬಳಸಿಕೊಂಡು ಜನರಿಗೆ ಮಂಕುಬೂದಿ ಹಾಕುತ್ತಿದ್ದರು. ಸುಮಾರು 13ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇವರಿಬ್ಬರು ಬೇಕಾಗಿದ್ದರು. ಈ ಗ್ಯಾಂಗಿನಲ್ಲಿ ಇನ್ನೂ ಮೂವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗಾಗಿ ಹುಡುಕಾಟ ಜಾರಿಯಲ್ಲಿದೆ ಎಂದು ಪೊಲೀಸ್ ಕಮಿಷನರ್ ಎಂಎನ್ ರೆಡ್ಡಿ ಹೇಳಿದರು.[ಕಿವೀಸ್ ಮಹಿಳೆ ವಂಚನೆ ಜಾಲ ಬೆಂಗಳೂರಲ್ಲಿ ಬಯಲು]

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? : ದಿನಾಂಕ: 16.06.2015 ರಂದು ಶ್ರೀನಿವಾಸ ಬಾಬುರವರು ತಮ್ಮ ಮೊಬೈಲ್ ಇಂಟರ್ನೆಟ್ olx.com ನಲ್ಲಿ ಹೋಂಡಾ ಕಾರು ರೂ. 3.5 ಲಕ್ಷಗಳಿಗೆ ಮಾರಾಟಕ್ಕಿದೆ ಎಂದು ಜಾಹಿರಾತಿನಲ್ಲಿ ನೋಡಿದ್ದಾರೆ.[ಉಗ್ರರ ಮುಂದೆ ಶೀಲ ಒತ್ತೆಯಿಟ್ಟ ಗಾಯಕಿ]

ಪಾಲ್ ಎಂಬಾತನ ಮೊಬೈಲಿಗೆ ಕರೆ ಮಾಡಿದಾಗ ‘ತಾನು ಕಾರನ್ನು ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿದ್ದು, ತುರ್ತು ಕೆಲಸದ ನಿಮಿತ್ತ ದೆಹಲಿಗೆ ಹೋಗಬೇಕಾಗಿದ್ದು, ಕಾರು ಕಸ್ಟಮ್ಸ್ ಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಿದ್ದು, ತನ್ನ ಸಹಾಯಕಿ ಸಾಧನಾ ಎಂಬುವರ ಮೊಬೈಲ್ ನಂಬರಿಗೆ ಮಾತನಾಡುವಂತೆ' ತಿಳಿಸಿರುತ್ತಾನೆ. ಮುಂದೇನಾಯ್ತು ಓದಿ...

ಕಸ್ಟಮ್ಸ್ ಅಧಿಕಾರಿ ಎಂದ ಸಾಧನಾ

ಕಸ್ಟಮ್ಸ್ ಅಧಿಕಾರಿ ಎಂದ ಸಾಧನಾ

ನಂತರ ಸಾಧನಾ ಎಂಬುವರ ಮೊಬೈಲಿಗೆ ಕರೆ ಮಾಡಿದಾಗ ‘ತಾನು ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವುದಾಗಿ, ಕಾರಿನ ಎಲ್ಲಾ ದಾಖಲಾತಿ ಮತ್ತು ಕೀ ತನ್ನ ಬಳಿ ಇರುವುದಾಗಿ ಹಾಗೂ ಕಸ್ಟಮ್ಸ್ ಕ್ಲಿಯರೆನ್ಸ್ ಗಾಗಿ ರೂ.95,000/- ಗಳನ್ನು ಕಟ್ಟಬೇಕೆಂದು' ತಿಳಿಸಿದ್ದಳು.

ಎರಡು ಬ್ಯಾಂಕ್ ಗಳಲ್ಲಿ ಹಣ ಜಮಾವಣೆ

ಎರಡು ಬ್ಯಾಂಕ್ ಗಳಲ್ಲಿ ಹಣ ಜಮಾವಣೆ

ಅವಳ ಮಾತನ್ನು ನಂಬಿ, ದಿನಾಂಕ:17.06.2015 ರಂದು ಕೆನರಾ ಬ್ಯಾಂಕಿನ ಕಂಟೋನ್ಮೆಂಟ್ ಶಾಖೆ ಖಾತೆ ಮತ್ತು ವಸಂತನಗರ ಶಾಖೆ ಖಾತೆಗಳಿಗೆ ಕ್ರಮವಾಗಿ ರೂ. 49,000/- ಮತ್ತು ರೂ. 46,000/- ಒಟ್ಟು ರೂ.95,000/-ಗಳನ್ನು ಸಹಕಾರನಗರದ ಕೆನರಾ ಬ್ಯಾಂಕ್ ಶಾಖೆ ಮೂಲಕ ಜಮಾ ಮಾಡಿರುತ್ತಾರೆ.

ಹಣ ಕಟ್ಟಿ ಕೆಟ್ಟ ಶ್ರೀನಿವಾಸ

ಹಣ ಕಟ್ಟಿ ಕೆಟ್ಟ ಶ್ರೀನಿವಾಸ

ತದನಂತರ ಅವರ ಮೊಬೈಲ್ ಗಳಿಗೆ ಕರೆ ಮಾಡಲಾಗಿ ಸ್ವಿಚ್ಡ್ ಆಫ್ ಆಗಿರುತ್ತದೆ. ಆಗ ದೂರುದಾರರಿಗೆ ತಾನು ಮೋಸ ಹೋಗಿರುವುದು ಖಚಿತವಾಗಿದೆ.

ದಿನಾಂಕ:24.06.2015 ರಂದು ಈ ಬಗ್ಗೆ ಕಾನೂನು ಕ್ರಮಕ್ಕಾಗಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೊ.ಸಂ. 191/2015 ಕಲಂ 420 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ.

ವಂಚಕರನ್ನು ಪತ್ತೆಮಾಡಲು ಕೊಡಿಗೇಹಳ್ಳಿ ಪೊಲೀಸರು ಮತ್ತು ಡಿಸಿಪಿ ಈಶಾನ್ಯ ವಿಭಾಗರವರ ವಿಶೇಷ ಪತ್ತೆ ದಳ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ಒಂದು ವಿಶೇಷ ತಂಡ ರಚಿಸಿದ್ದಾರೆ

ಪ್ರಕರಣದ ಆರೋಪಿಗಳು

ಪ್ರಕರಣದ ಆರೋಪಿಗಳು

1) A-1 Ehibhi Ehis S/o Odigie, 27 ವರ್ಷ (ನೈಜೀರಿಯನ್ ಪ್ರಜೆ), ವಾಸ: ನವೀನ್ ರವರ ಬಾಡಿಗೆ ಮನೆ, 3ನೇ ಮಹಡಿ, 4ನೇ ಕ್ರಾಸ್, ಬೈರತಿ ಕ್ರಾಸ್, ಕೊತ್ತನೂರು, ಬೆಂಗಳೂರು.

2) A3 ಕು|| ಇಂದ್ರಾಣಿ @ ಸಾಧನಾ @ ಡಾಲಿ @ ಇಂದು ಬಿನ್ ನಾರಾಯಣಸ್ವಾಮಿ, 25ವರ್ಷ, ವಾಸ ನಂ. 88, ಮಂಜುಶ್ರೀ ಆಸ್ಪತ್ರೆ ಹತ್ತಿರ, ಕಾವಲ್ ಬೈರಸಂದ್ರ, ಆರ್.ಟಿ ನಗರ ಅಂಚೆ, ಬೆಂಗಳೂರು-32.

ಪ್ರಕರಣದ ಉಳಿದ ಆರೋಪಿಗಳು

ಪ್ರಕರಣದ ಉಳಿದ ಆರೋಪಿಗಳು

1) A-2 ಜೋಸೆಪ್, ಯಲಹಂಕ, ಬೆಂಗಳೂರು (ನೈಜೀರಿಯನ್ ಪ್ರಜೆ).

2) A-4 ಸೋಪಿಯಾ ಕೋಂ ಮುರಳೀಧರನ್, 21ವರ್ಷ, ವಾಸ ನಂ.317, ಕಲ್ಕೆರೆ ಪಾರ್ಕ್ ಹಿಂಭಾಗ, ಹೊರಮಾವು, ಬೆಂಗಳೂರು-43.

3) A-5 ಮುರಳೀಧರ್ ಬಿನ್ ಜಯಶೀಲನ್, 23ವರ್ಷ, ವಾಸ ನಂ.317, ಕಲ್ಕೆರೆ ಪಾರ್ಕ್ ಹಿಂಭಾಗ, ಹೊರಮಾವು, ಬೆಂಗಳೂರು-43. ರವರು ತಲೆ ಮರೆಸಿಕೊಂಡಿದ್ದು, ಅವರ ಇರುವಿಕೆ ಬಗ್ಗೆ ಮಾಹತಿಯಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು.

ಪ್ರಮುಖ ಆರೋಪಿ ಮೇಲೆ ಮರ್ಡರ್ ಕೇಸ್

ಪ್ರಕರಣದ ಆರೋಪಿ - 1 ಆದ ನೈಜೀರಿಯಾದ ಪ್ರಜೆ Ehibhi Ehis ರವರ ರಹದಾರಿ ಅವಧಿಯು ಮುಗಿದಿದ್ದು, ಈ ಬಗ್ಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕೊಲೆ ಪ್ರಕರಣದ ದಾಖಲಾಗಿರುತ್ತದೆ.

ಬಂಧಿತರಿಂದ ನಗದು ಹಣ ವಶ

ಈ ವಂಚಕರಿಂದ ಪ್ರಕರಣಕ್ಕೆ ಬಳಸುತ್ತಿದ್ದ ಒಂದು ಡೆಲ್ ಕಂಪನಿಯ ಲ್ಯಾಪ್ ಟ್ಯಾಪ್, ಮೂರು ಸ್ಯಾಂಸಂಗ್ ಕಂಪನಿಯ ಮೊಬೈಲ್ ಫೋನ್ ಗಳು, ಐದು ವಿವಿಧ ಕಂಪನಿಗಳ ಸಿಮ್ ಕಾರ್ಡ್ ಗಳು, ರೂ. 8,000/- ನಗದು ಮತ್ತು ಒಂದು ಪಾಸ್ ಪೋರ್ಟ್ ಎಲ್ಲಾ ಸೇರಿ ಒಟ್ಟು ರೂ.90,000/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುತ್ತದೆ.

ಈ ವಂಚಕರು 13ಕ್ಕೂ ಹೆಚ್ಚು ಇಂತಹ ಪ್ರಕಣಗಳಲ್ಲಿ ಭಾಗಿರುವ ಬಗ್ಗೆ ಮಾಹಿತಿ ಇದ್ದು, ತನಿಖೆ ಮುಂದುವರೆದಿರುತ್ತದೆ.

ಪೊಲೀಸರಿಗೆ ಅಭಿನಂದನೆಗಳು

ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾರ್ಗದರ್ಶನದಲ್ಲಿ ಯಲಹಂಕ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಿ.ಎಂ..ನಾರಾಯಣಸ್ವಾಮಿರವರ ನೇತೃತ್ವದಲ್ಲಿ ಕೊಡಿಗೇಹಳ್ಳಿ ಠಾಣೆ ಪಿ.ಐ. ಕೆ.ಜಿ.ಸತೀಶ್, ಪಿ.ಎಸ್.ಐ. ಲಕ್ಷ್ಮಯ್ಯ ಮತ್ತು ಸಿಬ್ಬಂದಿ, ಡಿಸಿಪಿ ಈಶಾನ್ಯ ವಿಭಾಗದ ವಿಶೇಷ ಪತ್ತೆ ದಳದ ಪಿ.ಎಸ್.ಐ. ವರುಣ್ ಕುಮಾರ್, ಗಂಗರುದ್ರಯ್ಯ, ಸಿಬ್ಬಂದಿಗಳಾದ ರಮೇಶ್, ಚರಣ್, ಆನಂದ್ ಮತ್ತು ಆಂಜಿನಪ್ಪ ತಂಡ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bengaluru city police arrested a Nigerian national and his accomplice who are allegedly part of a major online advertisement racket. The Bengaluru city police commissioner, M N Reddi informed that Ehibhi Ehis a Nigerian national and Sadhana who is his accomplice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more