ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ; ತನಿಖೆ ಆರಂಭಿಸಲಿದೆ ಎನ್‌ಐಎ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರು ನಗರದ ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಬಗ್ಗೆ ಎನ್‌ಐಎ ತನಿಖೆ ನಡೆಯಲಿದೆ. ಸಿಸಿಬಿ ಪೊಲೀಸರು ಈ ಗಲಭೆಯ ತನಿಖೆ ಕೈಗೊಂಡಿದ್ದರು. 200ಕ್ಕೂ ಅಧಿಕ ಜನರನ್ನು ಬಂಧಿಸಿದ್ದರು.

ಕರ್ನಾಟಕ ಹೈಕೋರ್ಟ್‌ಗೆ ಎನ್‌ಐಎ ಈ ಕುರಿತು ಅಫಿಡೆವಿಟ್ ಸಲ್ಲಿಕೆ ಮಾಡಿದೆ. ಈ ಪ್ರಕರಣ ಎನ್‌ಐಎ ತನಿಖೆಗೆ ಸೂಕ್ತ ಎಂದು ನ್ಯಾಯಾಲಯ ಭಾವಿಸಿದರೆ ರಾಜ್ಯ ಪೊಲೀಸರ ಸಹಕಾರ ಪಡೆದು ತನಿಖೆ ನಡೆಸಲಾಗುತ್ತದೆ ಎಂದು ಎನ್‌ಐಎ ಹೇಳಿದೆ.

ಡಿ. ಜೆ. ಹಳ್ಳಿ ಗಲಭೆ; ಪ್ರಮುಖ ಆರೋಪಿ ಬಂಧಿಸಿದ ಸಿಸಿಬಿ ಡಿ. ಜೆ. ಹಳ್ಳಿ ಗಲಭೆ; ಪ್ರಮುಖ ಆರೋಪಿ ಬಂಧಿಸಿದ ಸಿಸಿಬಿ

ಈ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು. ಎನ್‌ಐಎಗೆ ಮೂಲ ಸೌಕರ್ಯ ಕಲ್ಪಿಸುವ ಕುರಿತು ರಾಜ್ಯ ಸರ್ಕಾರ ಗಮನಹರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ಬೆಂಗಳೂರು ಗಲಭೆ: ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಏನಿದೆ?ಬೆಂಗಳೂರು ಗಲಭೆ: ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಏನಿದೆ?

ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ನವೀನ್ ಒಂದು ಸಮುದಾಯದ ವಿರುದ್ಧ ಫೇಸ್‌ ಬುಕ್ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಆರಂಭವಾದ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಲಾಗಿತ್ತು.

ಬೆಂಗಳೂರು ಗಲಭೆ: ಮಾಹಿತಿ ಕೊಡುವಂತೆ ಮನವಿಬೆಂಗಳೂರು ಗಲಭೆ: ಮಾಹಿತಿ ಕೊಡುವಂತೆ ಮನವಿ

ಪಿಐಎಲ್ ಸಲ್ಲಿಕೆಯಾಗಿದೆ

ಪಿಐಎಲ್ ಸಲ್ಲಿಕೆಯಾಗಿದೆ

ಆಗಸ್ಟ್ 11ರಂದು ರಾತ್ರಿ ಡಿ. ಜೆ. ಹಳ್ಳಿ, ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಗಳ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯ ವಿಚಾರಣೆ ವೇಳೆ ಎನ್‌ಐಎ ತನಿಖೆ ನಡೆಸುವುದಾಗಿ ಹೇಳಿದೆ.

ರಾಜ್ಯ ಪೊಲೀಸರ ಸಹಕಾರ

ರಾಜ್ಯ ಪೊಲೀಸರ ಸಹಕಾರ

ಬೆಂಗಳೂರಿನಲ್ಲಿ ಎನ್‌ಐಎ ಕಚೇರಿ ಇದೆ. ಡಿವೈಎಸ್‌ಪಿ, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್ ಸೇರಿದಂತೆ ಐವರು ಸಿಬ್ಬಂದಿಗಳು ಮಾತ್ರ ಇದ್ದೇವೆ. ಇದು ಎನ್‌ಐಎ ತನಿಖೆಗೆ ಸೂಕ್ತ ಎಂದು ಭಾವಿಸಿದರೆ ರಾಜ್ಯ ಪೊಲೀಸರ ಸಹಕಾರದ ಮೂಲಕ ತನಿಖೆ ನಡೆಸಲಾಗುತ್ತದೆ ಎಂದು ಎನ್‌ಐಎ ಹೇಳಿದೆ.

ಮೂವರು ಮೃತಪಟ್ಟಿದ್ದರು

ಮೂವರು ಮೃತಪಟ್ಟಿದ್ದರು

ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಗಲಭೆ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದಾಗ ಮೂವರು ಮೃತಪಟ್ಟಿದ್ದರು. ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 200ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಲಾಗಿದೆ.

Recommended Video

Namma Metro ಕೊರೊನ ನಂತರ ಕೆಲವು ಮಹತ್ವದ ನಿರ್ಧಾರ ಕೈಗೊಂಡಿದೆ | Oneindia Kannada
ಎರಡು ಪ್ರಕರಣಗಳ ತನಿಖೆ

ಎರಡು ಪ್ರಕರಣಗಳ ತನಿಖೆ

ಪೊಲೀಸ್ ಠಾಣೆಗಳ ಮೇಲೆ ನಡೆದ ದಾಳಿ ಸಂಬಂಧ ಕಾನೂನು ಬಾಹಿರ ಅಪರಾಧ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ 2 ಪ್ರಕರಣಗಳ ತನಿಖೆಯನ್ನು ಎನ್‌ಐಎಗೆ ಕೇಂದ್ರ ಸರ್ಕಾರ ವಹಿಸಿದೆ. ಶೀಘ್ರವೇ ತನಿಖೆ ಆರಂಭವಾಗಲಿದೆ.

English summary
The National Investigation Agency (NIA) take up the August 11, 2020 violence case in Bengaluru DJ Halli and KG Halli police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X