ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಕೋನಟ್ ಗ್ರೋವ್ ಹೋಟೆಲ್‌ನಲ್ಲೇ ಬಾಂಬ್ ಇಡಬೇಕಿತ್ತು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 29 : ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಬಾಂಬ್ ಇಟ್ಟಿದ್ದ ರಫೀಕ್‌ನನ್ನು ಬಂಧಿಸಿದೆ. ಹೋಟೆಲ್‌ವೊಳಗೆ ಬಾಂಬ್ ಇಡಲು ರಫೀಕ್ ಪ್ರಯತ್ನ ನಡೆಸಿದ್ದ. ಆದರೆ, ಹೋಟೆಲ್ ಸಿಬ್ಬಂದಿಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ ಎಂದು ತನಿಖೆ ವೇಳೆ ಆತ ಒಪ್ಪಿಕೊಂಡಿದ್ದಾನೆ.

2014ರ ಡಿಸೆಂಬರ್ 28ರಂದು ಚರ್ಚ್‌ಸ್ಟ್ರೀಟ್‌ನಲ್ಲಿನ ಕೋಕೋನಟ್ ಗ್ರೋವ್ ಹೋಟೆಲ್‌ ಬಳಿ ರಾತ್ರಿ 8.30ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿತ್ತು. ಬೆಂಗಳೂರು ಪೊಲೀಸರು ಮೊದಲು ಸ್ಫೋಟದ ತನಿಖೆ ಕೈಗೊಂಡರು. ಕೆಲವು ದಿನಗಳ ನಂತರ ಎನ್‌ಐಎಗೆ ತನಿಖೆಯನ್ನು ಹಸ್ತಾಂತರ ಮಾಡಲಾಗಿತ್ತು. [Church Street ಸ್ಫೋಟಕ್ಕೆ ಒಂದು ವರ್ಷ]

church street

ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬೆಂಗಳೂರಿನ ಪರಪ್ಪನ ಅಗ್ರಹಾರ ಬಳಿ ರಫೀಕ್ ಅಲಿಯಾಸ್ ಅಫ್ರಿದಿಯನ್ನು ಕಳೆದ ವಾರ ಬಂಧಿಸಿದೆ. ಚರ್ಚ್‌ಸ್ಟ್ರೀಟ್‌ನಲ್ಲಿ ತಾನು ಬಾಂಬ್ ಇಟ್ಟಿದ್ದೆ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ. [ಬೆಂಗಳೂರು : ಬಾಂಬ್ ಇಟ್ಟವನ ಗುರುತು ಪತ್ತೆ?]

5 ವರ್ಷದಿಂದ ನಾಪತ್ತೆಯಾಗಿದ್ದ : ರಫೀಕ್ ಸುಮಾರು 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ರಾಷ್ಟ್ರೀಯ ತನಿಖಾ ದಳ ರಫೀಕ್ ಬಗ್ಗೆ ಮಾಹಿತಿ ನೀಡಿದವರಿಗೆ 3 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ಕಳೆದ ಮೂರು ವರ್ಷಗಳಿಂದ ಬೆಂಗಳೂರು ನಗರದ ಹೊರವಲಯದಲ್ಲಿ ವಾಸವಾಗಿದ್ದ ರಫೀಕ್ ಎಸಿ ರಿಪೇರಿ ಮಾಡಿಕೊಂಡು ಜೀವನ ನಡೆಸುತ್ತಿದ್ದ.

ಹೋಟೆಲ್‌ನಲ್ಲೇ ಬಾಂಬ್ ಇಡಬೇಕೆಂದಿದ್ದ : ರಫೀಕ್ ಕೋಕೋನಟ್ ಗ್ರೋವ್ ಹೋಟೆಲ್‌ನಲ್ಲಿಯೇ ಬಾಂಬ್ ಇಡಲು ನಿರ್ಧರಿಸಿದ್ದ. ಆದರೆ, ಹೋಟೆಲ್‌ ಸಿಬ್ಬಂದಿಗಳು ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸುತ್ತಿದ್ದರಿಂದ ಹೋಟೆಲ್ ಗೇಟ್‌ಬಳಿ ಬಾಂಬ್ ಇಟ್ಟು ಪರಾರಿಯಾಗಿದ್ದ.

2013ರಲ್ಲಿ ಬಿಹಾರದ ಗಾಂಧಿ ಮೈದಾನದಲ್ಲಿ ನಡೆದ ಸ್ಫೋಟ, ಬೆಂಗಳೂರು ಗೌಹಾತಿ ರೈಲಿನಲ್ಲಿ ನಡೆ ಸ್ಫೋಟಕ್ಕೆ ಬಳಸಿದ ಮಾದರಿಯ ವಸ್ತುಗಳನ್ನು ಚರ್ಚ್‌ಸ್ಟ್ರೀಟ್ ಸ್ಫೋಟಕ್ಕೂ ಬಳಸಲಾಗಿತ್ತು. ರಫೀಕ್ 2008ರ ಅಹಮದಾಬಾದ್ ಬಾಂಬ್ ಸ್ಫೋಟದಲ್ಲಿಯೂ ಪಾಲ್ಗೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ರಫೀಕ್ ಚರ್ಚ್‌ಸ್ಟ್ರೀಟ್‌ ಬಳಿ ಓಡಾಡುತ್ತಿರುವ ವಿಡಿಯೋ

English summary
The National Investigating Agency has arrested Mohmmad Rafeeq alias Alam Jeb Afridi for his involvement in the Church Street Blast Case, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X