ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗಲಭೆ: ಪಿಎಫ್ಐ, ಎಸ್‌ಡಿಪಿಐ ಕಚೇರಿ ಸೇರಿ 43 ಕಡೆ ಎನ್‌ಐಎ ದಾಳಿ

|
Google Oneindia Kannada News

ಬೆಂಗಳೂರು, ನವೆಂಬರ್ 18: ರಾಷ್ಟ್ರ ಮಟ್ಟದಲ್ಲಿ ಬೆಚ್ಚಿ ಬೀಳಿಸಿದ್ದ ರಾಜಧಾನಿಯ ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಎನ್‌ಐಎ ಎಂಟ್ರಿ ಕೊಟ್ಟಿದೆ. ಡಿ.ಹೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ಸೋಸಿಯಲ್ ಡೆಮಾಟ್ರಿಕ್ ಪಾರ್ಟಿ ಆಫ್ ಇಂಡಿಯಾ ಎಸ್‌ಡಿಪಿಐ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿ ಸೇರಿದಂತೆ 43 ಕಡೆ ಶೋಧ ನಡೆಸಿದ್ದಾರೆ.

ಎನ್‌ಐಎ ಅಧಿಕಾರಿಗಳ ದಾಳಿ ವೇಳೆ ಎಸ್‌ಡಿಪಿಐಎಗೆ ಸಂಬಂಧಿಸಿದ ಹಲವು ದಾಖಲೆಗಳು ಪಿಎಫ್ಐ ಕಚೇರಿಗಳಲ್ಲಿ ಕತ್ತಿ, ಚಾಕು ಮತ್ತಿತರ ಮಾರಕಾಸ್ತ್ರಗಳ ಪತ್ತೆಯಾಗಿದ್ದು, ಅವನ್ನು ವಶಪಡಿಸಿಕೊಂಡಿದ್ದಾರೆ. ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 124 ಆರೋ ಆರೋಪಿಗಳನ್ನು ಬಂಧಿಸಲಾಗಿದೆ. ಕೆ.ಜಿ. ಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 169 ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಸಯ್ಯದ್ ಸಾಧಿಕ್ ಆಲಿ ಎಂಬಾತನನ್ನು ಬಂಧಿಸಿತ್ತು.

ಬೆಂಗಳೂರು ಗಲಭೆ: 2 ದಿನ ಸಿಸಿಬಿ ವಶಕ್ಕೆ ಸಂಪತ್ ರಾಜ್ಬೆಂಗಳೂರು ಗಲಭೆ: 2 ದಿನ ಸಿಸಿಬಿ ವಶಕ್ಕೆ ಸಂಪತ್ ರಾಜ್

ಗಲಭೆಗೆ ಸಂಬಂಧಿಸಿದಂತೆ ಡಿಜೆಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ಬೆಂಗಳೂರು ಪೊಲೀಸರು ಎರಡು ಪ್ರಕರಣ ದಾಖಲಿಸಿದ್ದರು. ಆ ಎರಡು ಪ್ರಕರಣಗಳನ್ನು ಎನ್‌ಐಎ ದೆಹಲಿ ಘಟಕದ ಅಧಿಕಾರಿಗಳು ಎರಡು ಪ್ರಕರಣ ದಾಖಲಿಸಿದ್ದಾರೆ. ಮಾರಕಾಸ್ತ್ರಗಳನ್ನು ಬಳಸಿ ದೊಡ್ಡ ಗಲಭೆ ಸೃಷ್ಟಿಸಿದ್ದಲ್ಲದೇ ಪೊಲೀಸರ ಮೇಲೂ ಸಹ ದಾಳಿ ನಡೆದಿತ್ತು. ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಗೂ ನಷ್ಟವುಂಟು ಮಡಲಾಗಿತ್ತು. ಪೊಲೀಸ್‌ ಠಾಣೆ ಹಾಗೂ ಸಾರ್ವಜನಿಕ ವಾಹನಗಳಿಗೆ ಬೆಂಕಿ ಇಟ್ಟು ಸುಟ್ಟು ಭಸ್ಮ ಮಾಡಲಾಗಿತ್ತು. ಸಮಾಜದಲ್ಲಿ ಭೀತಿ ಹುಟ್ಟಿಸುವುದು ಭಯೋತ್ಪಾದನೆಯ ಒಂದು ಭಾಗವಾಗಿದ್ದು, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಎನ್‌ಐಎ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

NIA conducts Searches in Bengaluru Riots case

ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಈಶಾನ್ಯ ಮತ್ತು ಉತ್ತರ ಹಾಗೂ ಪೂರ್ವ ವಿಭಾಗದಿಂದಲೂ ದುಷ್ಕರ್ಮಿಗಳು ಬಂದಿದ್ದರು. ಬಂಧಿತರಲ್ಲಿ 30ಕ್ಕೂ ಹೆಚ್ಚು ಮಂಧಿಗೆ ಉಗ್ರರೊಂದಿಗೆ ನಂಟು ಹೊಂದಿರುವುದು ಎನ್‌ಐಎ ವಿಚಾರಣೆ ವೇಳೆ ಬೆಳಕಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಇದಕ್ಕೂ ಮೊದಲು ನಡೆದ ದಾಳಿಯಲ್ಲಿ ಶಾರ್ಪ್ ವೆಪನ್ಸ್ , ಏರ್‌ ಗನ್, ಕಬ್ಬಿಣದ ರಾಡ್ ಮತ್ತಿತರ ವಸ್ತುಗಳನ್ನು ವಶಫಡಿಸಿಕೊಂಡಿದ್ದರು.

English summary
NIA officials conducted Searches at 43 locations in Bengaluru city including SDPI and PFI office locations Relating to rioting and violence attacks on D J Halli and K.J halli police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X