ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಂಗ್ಲಾ ಉಗ್ರರಿಗಾಗಿ ಬೆಂಗಳೂರಲ್ಲಿ ಪಿಜಿ ಹಡುಕಾಡಿದ ಎನ್‌ಐಎ

|
Google Oneindia Kannada News

ಬೆಂಗಳೂರು, ನವೆಂಬರ್ 22 : ಬಾಂಗ್ಲಾದೇಶ ಮೂಲದ ಉಗ್ರರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಆರೋಪದ ಮೇಲೆ ಎನ್‌ಐಎ ಹುಡುಕಾಟ ನಡೆಸಿದೆ. ವಿದ್ಯಾರ್ಥಿಗಳ ಸೋಗಿನಲ್ಲಿ ನಗರದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಇದೆ.

ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿರುವ ಪಿಜಿಯೊಂದರಲ್ಲಿ ಶುಕ್ರವಾರ ಎನ್ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಬಾಂಗ್ಲಾದೇಶ ಮೂಲದ ಅನ್ಸರುಲ್ಲಾ ಎಂಬ ಸಂಘಟನೆಯ ಇಬ್ಬರು ಉಗ್ರರು ನಗರದಲ್ಲಿದ್ದಾರೆ ಎಂಬ ಮಾಹಿತಿ ಹಿನ್ನಲೆ ಹುಡುಕಾಟ ನಡೆದಿದೆ.

ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ 30 ಬಾಂಗ್ಲಾ ಪ್ರಜೆಗಳ ಬಂಧನಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ 30 ಬಾಂಗ್ಲಾ ಪ್ರಜೆಗಳ ಬಂಧನ

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಎನ್‌ಐಎ ತಂಡ ಮೇಘಾಲಯದಲ್ಲಿ ಫರ್ಹಾನ್ ಎಂಬಾತನನ್ನು ಬಂಧಿಸಿತ್ತು. ವಿದ್ಯಾರ್ಥಿಗಳ ಸೋಗಿನಲ್ಲಿ ಬೆಂಗಳೂರು ನಗರದಲ್ಲಿ ಇಬ್ಬರು ನೆಲೆಸಿದ್ದಾರೆ ಎಂಬ ಮಾಹಿತಿಯನ್ನು ಆತ ನೀಡಿದ್ದ.

ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಬೇರೂರಿರುವ ಬಾಂಗ್ಲಾ ಉಗ್ರರುಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಬೇರೂರಿರುವ ಬಾಂಗ್ಲಾ ಉಗ್ರರು

NIA Carries Out Searches In Soladevanahalli Bengaluru

ಶುಕ್ರವಾರ ಎನ್‌ಐಎ ಅಧಿಕಾರಿಗಳಿ ಪಿಜಿಗೆ ಭೇಟಿ ನೀಡಿದ ಹುಡುಕಾಟ ನಡೆಸಿ, ಮಹಜರು ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ ಹಿಂದೆಯೇ ಕೂಡಾ ಬಾಂಗ್ಲಾ ಮೂಲದ ಉಗ್ರರನ್ನು ವಶಕ್ಕೆ ಪಡೆದುಕೊಂಡ ಉದಾಹರಣೆಗಳಿವೆ.

ಬೆಂಗಳೂರಲ್ಲಿ ಶೀಘ್ರ ಪ್ರತ್ಯೇಕ ಉಗ್ರ ನಿಗ್ರಹ ಪಡೆ ರಚನೆಬೆಂಗಳೂರಲ್ಲಿ ಶೀಘ್ರ ಪ್ರತ್ಯೇಕ ಉಗ್ರ ನಿಗ್ರಹ ಪಡೆ ರಚನೆ

ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ (ಜೆಎಂಬಿ) ಉಗ್ರಗಾಮಿ ಸಂಘಟನೆಯ ತನ್ನ ಜಾಲವನ್ನು ವಿಸ್ತರಿಸಿಕೊಳ್ಳಲು ಬೆಂಗಳೂರು ನಗರವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದರು.

ದಕ್ಷಿಣ ಭಾರತದಲ್ಲಿ ಜೆಎಂಬಿ ಸಂಘಟನೆ ವಿಸ್ತರಣೆ ಮಾಡಲು ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಬೆಂಗಳೂರನ್ನು ಕೇಂದ್ರವಾಗಿಸಿಕೊಳ್ಳಲು ಉಗ್ರರು ಬಯಸಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಹಿಂದೆ ಸಹ ಬೆಂಗಳೂರು, ರಾಮನಗರದಲ್ಲಿ ಕಾರ್ಯಾಚರಣೆ ನಡೆಸಿದ್ದ ಎನ್‌ಐಎ ಹಲವು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿತ್ತು.

English summary
A National Investigation Agency (NIA) team searched the paying guest in Soladevanahalli Bengaluru in alleged Bangladeshi terrorist stay in city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X