ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಎನ್‌ಐಎಯಿಂದ ಇಬ್ಬರು ಶಂಕಿತ ಉಗ್ರರ ಬಂಧನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬೆಂಗಳೂರಿನಲ್ಲಿ ಇಂದು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದೆ.

ತಮಿಳುನಾಡು ಮೂಲದ ಅಹಮದ್ ಅಬ್ದುಲ್ ಖಾದರ್ (40) ಹಾಗೂ ಬೆಂಗಳೂರಿನ ಫ್ರೆಜರ್ ಟೌನ್ ವಾಸಿ ಇರ್ಫಾನ್ ನಾಸಿರ್ (33) ಎನ್ನುವ ಇಬ್ಬರನ್ನು ಎನ್ಐಎ ಬಂಧಿಸಿದೆ. ಇದರಲ್ಲಿ ಬೆಂಗಳೂರಿನ ಇರ್ಫಾನ್ ಅಕ್ಕಿ ವ್ಯಾಪಾರ ನಡೆಸಿದ್ದರೆ ಬ್ದುಲ್ ಖಾದರ್ ಚೆನ್ನೈನ ಬ್ಯಾಂಕ್ ಒಂದರಲ್ಲಿ ಉದ್ಯೋಗದಲ್ಲಿದ್ದ.

ಬೆಂಗಳೂರಲ್ಲಿ ದಾಳಿಗೆ ಸಂಚು ರೂಪಿಸಿದ್ದ ಇನ್ನೊಬ್ಬ ಉಗ್ರನ ಬಂಧನಬೆಂಗಳೂರಲ್ಲಿ ದಾಳಿಗೆ ಸಂಚು ರೂಪಿಸಿದ್ದ ಇನ್ನೊಬ್ಬ ಉಗ್ರನ ಬಂಧನ

ಇಬ್ಬರ ಮನೆಗಳಿಂದ ಕೆಲವಷ್ಟು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸುವ ಸಂಚಿನ ಹಿನ್ನೆಲೆ ಅವರ ಬಂಧನವಾಗಿದ್ದು ತನಿಖೆಯಿಂದ ಇನ್ನಷ್ಟು ವಿವರ ಹೊರಬರಲಿದೆ" ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

NIA Arrests Two Suspected Terrorist Linked To Bengaluru-Based ISIS Module

2013-14 ರಲ್ಲಿ ಸಿರಿಯಾಗೆ ಹೋಗಿ ಬಂದಿದ್ದ ಶಂಕಿತ ಉಗ್ರರು ಕುರಾನ್ ಸರ್ಕಲ್ ಎಂಬ ಗುಂಪು ಕಟ್ಟಿಕೊಂಡಿದ್ದರು. ಅದರ ಮೂಲಕವೇ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಸಿಎಎ ಪ್ರತಿಭಟನೆ ವೇಳೆಯೂ ದೆಹಲಿಯಲ್ಲಿ ಸ್ಫೋಟ ಮಾಡಲು ಸಂಚು ರೂಪಿಸಿದ್ದರು. ಆದರೆ ವಿಫಲರಾಗಿದ್ದರು. ಮುಸ್ಲಿಂ ಯುವಕರನ್ನು ಸೆಳೆದು ಐಎಸ್‌ಐಎಸ್‌ಗೆ ಸೇರಿಸುವ ಕೆಲಸವನ್ನೂ ಇವರು ಮಾಡುತ್ತಿದ್ದರು.

Recommended Video

Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

ಆರೋಪಿ ಇರ್ಫಾನ್ ಅಕ್ಕಿ ವ್ಯಾಪಾರಿಯಾಗಿದ್ದ, ಅಬ್ದುಲ್ ಖಾದರ್, ಚೆನ್ನೈನ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ, ನಗರದ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಬ್ದುಲ್ ರೆಹಮಾನ್ ಎಂಬಾತನನ್ನು ಎನ್‌ಐಎ ಬಂಧಿಸಿತ್ತು. ಆತನ ನೀಡಿದ್ದ ಮಾಹಿತಿಯಂತೆ ಗುರಪ್ಪನಪಾಳ್ಯ ಹಾಗೂ ಫ್ರೇಜರ್‌ಟೌನ್ ನಲ್ಲಿ ಕಾರ್ಯಾಚರಣೆ ನಡೆಸಿದಾಗ ಈ ಇಬ್ಬರು ಸಿಕ್ಕಿಬಿದ್ದಿದ್ದಾರೆ.

English summary
The National Investigation Agency (NIA) has arrested two men from Tamil Nadu and Karnataka for allegedly recruiting for Islamic State (IS) and for funding the travel of the recruits to Syria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X