ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಕೈದಿಗಳಿಗೆ ಥಳಿತ: ಮಾನವ ಹಕ್ಕು ಆಯೋಗದಿಂದ ರಾಜ್ಯಕ್ಕೆ ನೋಟಿಸ್

ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕೈದಿಗಳಿಗೆ ಹಿಂಸೆ. ಕೇಂದ್ರ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್. ರಾಜ್ಯ ಪೊಲೀಸ್ ಮಹಾ ನಿರ್ದೇಶಕ, ಬಂಧೀಖಾನೆಯ ಇನ್ಸ್ ಪೆಕ್ಟರ್ ಜನರಲ್ ಗೆ ನೋಟಿಸ್ ಜಾರಿ.

|
Google Oneindia Kannada News

ಬೆಂಗಳೂರು, ಜುಲೈ 18: ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರೀಯ ಕಾರಾಗೃಹದಲ್ಲಿನ ಪೊಲೀಸರಿಂದ ಕೈದಿಗಳ ಮೇಲೆ ಇತ್ತೀಚೆಗೆ ಹಿಂಸೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ ಸಿ) ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಹಾಗೂ ಕಾರಾಗೃಹ ಇಲಾಖೆಯ ಇನ್ಸ್ ಪೆಕ್ಟರ್ ಜನರಲ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ.

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ನೀಡಿದ ದೂರಿನ ಆಧಾರದ ಮೇರೆಗೆ ಎನ್ಎಚ್ಆರ್ ಸಿ ಈ ನೋಟಿಸ್ ಜಾರಿಗೊಳಿಸಿದೆ.

ಪರಪ್ಪನ ಅಗ್ರಹಾರದಲ್ಲಿ ಇದ್ದಕ್ಕಿದ್ದಂತೆ ಕೈದಿಗಳಿಂದ ಪ್ರತಿಭಟನೆಪರಪ್ಪನ ಅಗ್ರಹಾರದಲ್ಲಿ ಇದ್ದಕ್ಕಿದ್ದಂತೆ ಕೈದಿಗಳಿಂದ ಪ್ರತಿಭಟನೆ

NHRC sends notices to Parappana Agrahara prison authorities over torture, inhuman treatment

ಕೇಂದ್ರೀಯ ಕಾರಾಗೃಹದಲ್ಲಿನ ಅಕ್ರಮಗಳನ್ನು ಬಯಲಿಗೆಳೆದ ಪೊಲೀಸ್ ಅಧಿಕಾರಿ ಡಿ. ರೂಪಾ ಅವರನ್ನು ಬೆಂಬಲಿಸಿ ಜುಲೈ 15ರಂದು ಅಲ್ಲಿನ ಕೈದಿಗಳು ಪ್ರತಿಭಟನೆ ನಡೆಸಿದ್ದರು.

ರೂಪಾ ಮೌದ್ಗೀಲ್ ತಪ್ಪುಗಳನ್ನು ತೆರೆದಿಟ್ಟ ಸಂಗ್ರಾಮ್ ಸಿಂಗ್ ಸಂದರ್ಶನರೂಪಾ ಮೌದ್ಗೀಲ್ ತಪ್ಪುಗಳನ್ನು ತೆರೆದಿಟ್ಟ ಸಂಗ್ರಾಮ್ ಸಿಂಗ್ ಸಂದರ್ಶನ

ಈ ಪ್ರತಿಭಟನೆಯನ್ನು ಹತ್ತಿಕ್ಕಲು ಉಗ್ರ ಕ್ರಮ ಕೈಗೊಂಡ ಪೊಲೀಸರು ಪ್ರತಿಭಟನೆಗೆ ಇಳಿದಿದ್ದ 32 ಕೈದಿಗಳಿಗೆ ಲಾಠಿ ಪೆಟ್ಟು ಕೊಟ್ಟು (ಥರ್ಡ್ ಡಿಗ್ರಿ ಟ್ರೀಟ್ ಮೆಂಟ್) ನೀಡಿ, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ರಾತ್ರೋರಾತ್ರಿ ಮೈಸೂರು, ಬೆಳಗಾವಿ, ಬಳ್ಳಾರಿ ಹಾಗೂ ದಾವಣಗೆರೆ ಜೈಲುಗಳಿಗೆ ರವಾನಿಸಿದ್ದರು.

ಡಿ ರೂಪಾ ವರ್ಗಾವಣೆ: ಕುಮಾರಸ್ವಾಮಿಯವರೇ ನಾಲಿಗೆ ಒಂದಿರಲಿ!ಡಿ ರೂಪಾ ವರ್ಗಾವಣೆ: ಕುಮಾರಸ್ವಾಮಿಯವರೇ ನಾಲಿಗೆ ಒಂದಿರಲಿ!

ಜುಲೈ 15ರ ರಾತ್ರಿ ಪೊಲೀಸರಿಂದ ಥಳಿತಕ್ಕೊಳಗಾಗಿದ್ದ ಕೈದಿಗಳ ಪಾಡು ಹೇಗಿತ್ತೆಂದರೆ, ಬೇರೆ ಜೈಲುಗಳಿಗೆ ರಾತ್ರೋ ರಾತ್ರಿ ರವಾನೆಗೊಂಡ ಕೈದಿಗಳಿಗೆ ಅಲ್ಲಿ ಪೊಲೀಸ್ ವ್ಯಾನಿನಿಂದ ಇಳಿಯಲೂ ಶಕ್ತಿಯಿರಲಿಲ್ಲ. ನಿಧಾನವಾಗಿ ಇಳಿದೇ ಕುಂಟುತ್ತಾ, ಏದುಸಿರು ಬಿಡುತ್ತಾ ಆ ಜೈಲುಗಳಿಗೆ ಹೋಗುತ್ತಿದ್ದ ಅವರ ಪರಿಸ್ಥಿತಿ ಎಂಥವರಿಗೂ ಕರುಣೆ ಉಕ್ಕಿಸುವಂತಿತ್ತು.

ಛಲಬಿಡದ ರೂಪಾರಿಂದ ಮತ್ತೊಂದು ವರದಿ ಸಲ್ಲಿಕೆ!ಛಲಬಿಡದ ರೂಪಾರಿಂದ ಮತ್ತೊಂದು ವರದಿ ಸಲ್ಲಿಕೆ!

ಈ ವಿಚಾರವನ್ನು ದೂರಿನ ಮುಖೇನ ಎನ್ಎಚ್ಆರ್ ಸಿಗೆ ಗಮನಕ್ಕೆ ತಂದಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಜೈಲು ಅಕ್ರಮಗಳ ವಿರುದ್ಧ ಪ್ರತಿಭಟಿಸಿದ್ದಕ್ಕೆ ಕೈದಿಗಳಿಗೆ ಮನಬಂದಂತೆ ಥಳಿಸಿದ್ದಲ್ಲದೆ, ಸಂಬಂಧಿಕರಿಗೆ ಆ ಕೈದಿಗಳ ಭೇಟಿಯಾಗದಂತೆ ಅವರನ್ನು ನಾನಾ ಜೈಲುಗಳಿಗೆ ರವಾನಿಸಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ, ಎನ್ಎಚ್ಆರ್ ಸಿ ನೋಟಿಸ್ ಜಾರಿಗೊಳಿಸಿದೆ.

English summary
Taking cognizance of a complaint about inhuman treatment meted out to the 32 prisoners at Parappana Agrahara Bangalore, the National Human Rights Commission (NHRC) sent notices to Director General of Police and Inspector General (Prisons).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X