ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈಕೊಂಡ್ರಹಳ್ಳಿ ಕೆರೆ: ಗೋದ್ರೇಜ್ ಕಂಪನಿಗೆ ನೀಡಿದ್ದ ಅನುಮತಿ ರದ್ದು

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ಕೈಕೊಂಡ್ರಹಳ್ಳಿ ಕೆರೆಯ ಬಫರ್ ಝೋನ್‌ನಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್‌ಮೆಂಟ್ ಕಾಮಗಾರಿಗೆ ಪರಿಸರ ಇಲಾಖೆ ನೀಡಿದ್ದ ಅನುಮತಿಯನ್ನು ರದ್ದು ಮಾಡಿ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ ಹೊರಡಿಸಿದೆ.

ನಿರ್ಮಾಣ ಹಂತದಲ್ಲಿರುವ ಎರಡು ಗೋದ್ರೇಜ್ ಲೇಕ್ ಗಾರ್ಡನ್ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ನೀಡಲಾಗಿರುವ ಪರಿಸರ ಅನುಮತಿಯನ್ನು ರದ್ದುಮಾಡಲಾಗಿದೆ. ಒಟ್ಟು 655 ಫ್ಲಾಟ್‌ಗಳ ನಿರ್ಮಾಣ ಮಾಡುವ ಉದ್ದೇಶವನ್ನು ಬಿಲ್ಡರ್ಸ್ ಹೊಂದಿದ್ದರು.

ಮೈದುಂಬಿದ ಬಾಗಲೂರು ಕೆರೆ; ಕಣ್ಮನ ಸೆಳೆಯುವ ಚಿತ್ರಗಳುಮೈದುಂಬಿದ ಬಾಗಲೂರು ಕೆರೆ; ಕಣ್ಮನ ಸೆಳೆಯುವ ಚಿತ್ರಗಳು

ಗೋದ್ರೇಜ್ ಕಂಪನಿ ವಿರುದ್ಧವಾಗಿ ಸ್ಥಳೀಯರಾದ ಎಚ್‌ಪಿ ರಾಜಣ್ಣ ಅವರು ಹಸಿರು ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು.ಸರ್ಜಾಪುರ ರಸ್ತೆಯ ಕೈಕೊಂಡ್ರಹಳ್ಳಿ ರಾಜಕಾಲುವೆಯ ಮೇಲೆ ಎರಡು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ.

NGT Quashes Clearance For Godrej Properties Project Near Bengaluru Lake

ಕೈಕೊಂಡ್ರಹಳ್ಳಿ ಕೆರೆ ಪಕ್ಕದಲ್ಲಿ , ಒಂದು ಸಮಯದಲ್ಲಿ ಸಂಪದ್ಭರಿತವಾಗಿ ತುಂಬಿ ತುಳುಕುತ್ತಿದ್ದ ಕೆರೆ ಜಾಗದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲು ಮುಂದಾಗಿದ್ದರು. ಆ ಪ್ರದೇಶ ಈಗಲೂ ಹಸಿರಿನಿಂದ ತುಂಬಿದ್ದು, ಶುದ್ಧ ಗಾಳಿ ದೊರೆಯುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

2018ರ ಜನವರಿ 10ರಂದು ಎಸ್‌ಇಐಎಎ( ಸ್ಟೇಟ್ ಎನ್‌ವಿರಾನ್‌ಮೆಂಟ್ ಪೊಲ್ಯುಷನ್ ಕಂಟ್ರೋಲ್ ಬೋರ್ಡ್) ನೀಡಿದ್ದ ಅನುಮತಿಯನ್ನು ರಾಜಣ್ಣ ಚಾಲೆಂಜ್ ಮಾಡಿದ್ದರು.

ಬಫರ್ ಝೋನ್ ನಿಯಮವನ್ನು ಉಲ್ಲಂಘಿಸಿ ಅಪಾರ್ಟ್‌ಮೆಂಟ್ ನಿರ್ಮಿಸಲು ಹೊರಟಿರುವ ಗೋದ್ರೇಜ್‌ಗೆ ಯಾವುದೇ ಕಾರಣಕ್ಕೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ ಎಂದು ಪೀಠ ತಿಳಿಸಿದೆ.

English summary
The National Green Tribunal (NGT) has quashed the environmental clearance granted to a high-rise luxury project by Godrej Properties Ltd and Wonder Projects Development Pvt. Ltd in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X