ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಸಭೆ ಸೇರಿದ 'ಅರ್ಹ', ಅನರ್ಹ ಶಾಸಕರು

|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಉಪಚುನಾವಣೆ ಗೆದ್ದು ಅನರ್ಹ ಹಣೆಪಟ್ಟಿ ಕಳಚಿಕೊಂಡ ಬಿಜೆಪಿ ನೂತನ ಶಾಸಕರು ನಗರದ ಶಾಂಗ್ರಿಲಾ ಹೊಟೆಲ್‌ ನಲ್ಲಿ ಸಭೆ ನಡೆಸಿದ್ದಾರೆ.

ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಕೆ.ಸುಧಾಕರ್, ಮಹೇಶ್ ಕುಮಟಳ್ಳಿ, ಸೋಮಶೇಖರ್, ಗೋಪಾಲಯ್ಯ, ಬೈರತಿ ಬಸವರಾಜು, ನಾರಾಯಣಗೌಡ ಅವರುಗಳ ಜೊತೆಗೆ ಅನರ್ಹ ಶಾಸಕರಾದ ಆರ್.ಶಂಕರ್, ಮುನಿರತ್ನ ಹಾಗೂ ಸೋತ ಅಭ್ಯರ್ಥಿ ಎಚ್.ವಿಶ್ವನಾಥ್ ಸಭೆಯಲ್ಲಿದ್ದಾರೆ.

ಸಭೆಯಲ್ಲಿ ಕೊಳ್ಳೆಗಾಲ ಶಾಸಕ ಎನ್.ಮಹೇಶ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಸಹ ಹಾಜರಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಶ್ರೀಮಂತ ಪಾಟೀಲ್ ಸಭೆಗೆ ಗೈರಾಗಿದ್ದಾರೆ. ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್ ಹಾಗೂ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಸಹ ಸಭೆಗೆ ಗೈರಾಗಿದ್ದಾರೆ.

Newly Elected BJP MLAs Meeting In Bengaluru

ಸಚಿವ ಸ್ಥಾನ, ಖಾತೆ ಹಂಚಿಕೆ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ, ಪರಾಜಿತ ಅಭ್ಯರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿದ್ದು, ಸಭೆಯ ಬಳಿಕ ಗೆದ್ದ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಆಗಲಿದ್ದಾರೆ.

ಇಂದು ಮಧ್ಯಾಹ್ನವಷ್ಟೆ ಯಡಿಯೂರಪ್ಪ ಅವರು ಸೋತ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ, ತಮ್ಮೊಂದಿಗೆ ಪಕ್ಷ ಇರುವುದಾಗಿ ಭರವಸೆ ನೀಡಿದ್ದರು. ವಿಶ್ವನಾಥ್ ಅವರನ್ನು ಎಸ್‌.ಟಿ.ಸೋಮಶೇಖರ್ ಭೇಟಿ ಆಗಿ ಸಾಂತ್ವನ ಹೇಳಿದ್ದರು.

English summary
Newly elected BJP MLAs meeting in Bengaluru's hotel. Some other former MLAs were also present in the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X