ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಟ್ಟುವಾಗಲೇ ಮಗುವಿನ ಬಾಯಲ್ಲಿ ಹಲ್ಲು, ವೈದ್ಯರು ಏನಂತಾರೆ?

|
Google Oneindia Kannada News

ಬೆಂಗಳೂರು, ಮೇ 16: ಆಗ ತಾನೆ ಹುಟ್ಟಿ ತಾಯಿಯ ಪಕ್ಕ ಮಲಗಿದ್ದ ಮಗು ಕಣ್ಣು ತೆರೆದು ಅತ್ತಿತ್ತು. ಆದರೆ ಎಲ್ಲರಿಗೂ ಆಶ್ಚರ್ಯ ಆಗಷ್ಟೇ ಹುಟ್ಟಿದ ಮಗುವಿನ ಬಾಯಲ್ಲಿ ಹಲ್ಲು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಆದರೆ ಇದು ಸಾವಿರದಲ್ಲಿ ಒಂದು ಮಗುವಿಗೆ ಇರುತ್ತದೆ. ಅದರಿಂದ ಏನೂ ತೊಂದರೆಯಿಲ್ಲ ಎಂದು ವೈದ್ಯರೂ ಹೇಳಿದರೂ ಹಿರಿಯರು ಆತಂಕ ಪಡುವುದು ಸಾಮಾನ್ಯ ಅವರ ನಂಬಿಕೆಯಂತೆ ಹುಟ್ಟುವಾಗಲೇ ಹಲ್ಲಿದೆ ರಾಕ್ಷಸ ಗುಣದವರು ಅಂತಾರೆ ಎಂದು ಜರಿಯುವುದು ಸಾಮಾನ್ಯ.

ಮೆಜೆಸ್ಟಿಕ್‌ನಲ್ಲಿ ಅಂಧ ದಂಪತಿಯ ಮಗುವನ್ನು ಕದ್ದೊಯ್ದ ಪ್ರಕರಣಕ್ಕೆ ತಿರುವು ಮೆಜೆಸ್ಟಿಕ್‌ನಲ್ಲಿ ಅಂಧ ದಂಪತಿಯ ಮಗುವನ್ನು ಕದ್ದೊಯ್ದ ಪ್ರಕರಣಕ್ಕೆ ತಿರುವು

ವೈದ್ಯರು ತಕ್ಷಣವೇ ಶಸ್ತ್ರ ಚಿಕಿತ್ಸೆ ಮಾಡಿ ಹಲ್ಲನ್ನು ತೆಗೆದಿದ್ದಾರೆ. ಹುಟ್ಟುವಾಗಲೇ ಹಲ್ಲಿದ್ದರೆ ಮಗುವಿಗೆ ಹಾಲುಣಿಸಲು ತಾಯಿಗೆ ಕಷ್ಟವಾಗುತ್ತದೆ. ಮಗುವಿನ ಬಾಯಲ್ಲಿ ಅಲ್ಸರ್ ಆಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ ಎಂದು ವೈದ್ಯರು ಹೇಳುತ್ತಾರೆ.

Newborn flashes 2 teeth, surgeons remove them

ತಾಯಿಯ ಗರ್ಭದಲ್ಲಿರುವಾಗಲೇ ಅಂದರೆ ಐದು ವಾರದ ಭ್ರೂಣವಿದ್ದಾಗಲೇ ಹಲ್ಲಿನ ರಚನೆ ಅಡಿಪಾಯ ಕ್ರಿಯೆ ಆರಂಭವಾಗುತ್ತದೆ. ಹಂತಹಂತವಾಗಿ ಅದು ಪೂರ್ಣಗೊಳ್ಳುತ್ತದೆ ಹಾಲು ಹಲ್ಲು ಮೊದಲ ಬಾರಿ ಮಗುವಿನ ಬಾಯಲ್ಲಿ ಕಾಣಿಸುವುದು ಹುಟ್ಟಿದ ಆರರಿಂದ ಒಂಬತ್ತು ತಿಂಗಳಲ್ಲಿ. ಅಪರೂಪಕ್ಕೆ ಎರಡರಿಂದ ಮೂರು ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ಹುಟ್ಟುವಾಗಲೇ ಹಲ್ಲು ಬಂದಿರುತ್ತದೆ. ಅದನ್ನು ನೇಟಲ್ ಟೀತ್ ಎಂದು ಕರೆಯುತ್ತಾರೆ.

ವೈರಲ್ ವಿಡೀಯೋ: ತಮಾಷೆಗಾಗಿ 7 ತಿಂಗಳ ಮಗುವನ್ನು ಅಡವಿಡಲು ಹೊರಟ ಅಪ್ಪವೈರಲ್ ವಿಡೀಯೋ: ತಮಾಷೆಗಾಗಿ 7 ತಿಂಗಳ ಮಗುವನ್ನು ಅಡವಿಡಲು ಹೊರಟ ಅಪ್ಪ

ಕಾರಣವೇನಿರಬಹುದು?: ವಂಶವಾಹಿನಿ-ಕುಟುಂಬದಲ್ಲಿ ಅಜ್ಜಿ, ಅಜ್ಜ, ತಂದೆ-ತಾಯಿ ಹತ್ತಿರದ ಸಂಬಂಧಿಗಳಿಗಿದ್ದರೆ.
-ಹಾರ್ಮೋನ್ ಏರುಪೇರುಗಳನ್ನು
-ಗರ್ಭಿಣಿಯಾಗಿದ್ದಾಗ ತಾಯಿಗೆ ಸೋಂಕು, ಅಪೌಷ್ಠಿಕತೆ
-ಸೀಳು ಅಂಗುಳು ಇರುವ ಮಕ್ಕಳು

English summary
A new mother was shocked to find her baby girl flashing two teeth immediately after birth. Concerned, she brought the unusual phenomenon to the notice of doctors, who suggested surgery. The rudimentary teeth were removed last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X