ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

470 ಗ್ರಾಂ ತೂಕದ ಮಗುವಿಗೆ ಮರುಜೀವ ಕೊಟ್ಟ ವೈದ್ಯರು

|
Google Oneindia Kannada News

ಬೆಂಗಳೂರು, ಸೆ. 11 : ಮಣಿಪಾಲ್ ಆಸ್ಪತ್ರೆ ವೈದ್ಯರ ಮೂರು ತಿಂಗಳ ಶ್ರಮ ಫಲ ನೀಡಿದೆ. ಏಳು ತಿಂಗಳಿಗೆ ಹುಟ್ಟಿದ ಅಂಗೈನಷ್ಟು ಉದ್ದದ 470 ಗ್ರಾಂ ತೂಕದ ಮಗು ಬದುಕುಳಿದಿದೆ. ಮಗುವಿನ ತಾಯಿ ನಸ್ರೀನ್ ಬಾನು ಆರೋಗ್ಯವಂತಳಾಗಿ ಮಡಿಲಲ್ಲಿ ಮಲಗಿರುವ ಮಗುವಿನ ಭವಿಷ್ಯದ ಕನಸು ಕಾಣುತ್ತಿದ್ದಾರೆ.

ಬೆಂಗಳೂರಿನ ನಸ್ರೀನ್ ಬಾನು ಅವರು ಕಳೆದ ಮೇ ತಿಂಗಳಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜುಲೈ ತಿಂಗಳಿನಲ್ಲಿ ಅವರಿಗೆ ಹೆರಿಗೆ ಆಗಬೇಕಿತ್ತು. ಆದರೆ, ಮೂರು ತಿಂಗಳ ಮೊದಲೇ ಹುಟ್ಟಿದ ಮಗು ಕೇವಲ 470 ಗ್ರಾಂ ತೂಕವಿತ್ತು. ಮಗು ಬದುಕುವ ಯಾವ ಭರವಸೆಯೂ ಅವರಿಗೆ ಇರಲಿಲ್ಲ. ಆದ್ದರಿಂದ ಮಗುವನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು.

Child

ಅವಧಿಗೆ ಮೊದಲೇ ಜನಿಸಿದ ಮಗುಮಗುವನ್ನು ಬದುಕಿಸಬೇಕೆಂದು ಚಿಕಿತ್ಸೆ ಆರಂಭಿಸಿದ ಮಣಿಪಾಲ್ ಆಸ್ಪತ್ರೆ ವೈದ್ಯರು, ಮಗುವನ್ನು ತೀವ್ರನಿಗಾ ಘಟಕದಲ್ಲಿಟ್ಟು ಅದರ ಉಸಿರಾಟದ ಮಟ್ಟವನ್ನು ಸಹಜ ಸ್ಥಿತಿಗೆ ತಂದರು. ತಾಯಿಯ ಎದೆ ಹಾಲನ್ನು ಕುಡಿಯಲು ಆಗದಿದ್ದ ಮಗುವಿಗೆ ರಕ್ತನಾಳದ ಮೂಲಕ ನೇರವಾಗಿ ಪ್ರೋಟಿನ್, ಕೊಬ್ಬಿನ ದ್ರಾವಣಗಳನ್ನು ನೀಡಿದರು ಮೂರು ತಿಂಗಳ ಚಿಕಿತ್ಸೆ ಬಳಿಕ ಮಗು ಆರೋಗ್ಯವಾಗಿದೆ. [ಮಂಗಳೂರಿನ 'ಮೃತ್ಯುಂಜಯ' ನವಜಾತ ಶಿಶು ಮರಣ]

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಮಣಿಪಾಲ್ ಆಸ್ಪತ್ರೆಯ ವೈದ್ಯರಾದ ಡಾ.ಎನ್. ಕಾರ್ತಿಕ್ ನಾಗೇಶ್ ಮಗು ಆರೋಗ್ಯವಾಗಿದ್ದು, ತನ್ನ ವಯೋಮಾನದ ಎಲ್ಲಾ ಮಕ್ಕಳ ರೀತಿಯಲ್ಲಿ ಎಲ್ಲದಕ್ಕೂ ಸ್ಪಂದಿಸುತ್ತಿದೆ. ಮಗುವನ್ನು ತಾಯಿಗೆ ನೀಡುತ್ತಿದ್ದೇವೆ ಎಂದು ಹೇಳಿದ್ದು, ಮಗುವಿಗೆ ಮರು ಜೀವ ಕೊಟ್ಟಿದ್ದಾರೆ. [ಮಗು ರಕ್ಷಿಸಲು ಆಟೋ ಚಾಲಕರಾದ ಪೊಲೀಸರು!]

ಗರ್ಭಾವಸ್ಥೆಯಲ್ಲಿಯೇ ಮೊದಲ ಎರಡು ಮಕ್ಕಳನ್ನು ಕಳೆದುಕೊಂಡಿದ್ದ ನಸ್ರೀನ್ ಬಾನು ಮೂರನೇ ಮಗು ಬದುಕಿ ಬಂದಿದ್ದಕ್ಕೆ ಸಂತಸಗೊಂಡಿದ್ದಾರೆ. ಮಗು ನನ್ನ ನೋಡಿ ನಗುತ್ತಿದೆ. ನನಗೆ ಜೀವನದಲ್ಲಿ ಹೊಸ ಬೆಳಕು ಸಿಕ್ಕಂತಾಗಿದೆ ಎಂದು ಸಂಸತ ಹಂಚಿಕೊಂಡಿದ್ದಾರೆ.

English summary
A baby weighing just 470 gram at the time of birth about three months ago, was saved and get good health now. Its big achievement of Manipal Hospital Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X