ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಾಚರಣೆಗೆ ವಾಹನ ಸಂಚಾರದ ಮೇಲೂ ನಿರ್ಬಂಧ

|
Google Oneindia Kannada News

ಬೆಂಗಳೂರು, ಡಿಸೆಂಬರ್ 29: ಕೋವಿಡ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವ ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು,ಇದೀಗ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಸಂಚಾರದ ಮೇಲೂ ನಿರ್ಬಂಧ ವಿಧಿಸಿದ್ದಾರೆ. ನಗರದ 44 ಮೇಲ್ಸೇತುವೆಗಳ ಪ್ರವೇಶ ಕೂಡ ಬಂದ್ ಮಾಡಲಾಗುತ್ತಿದೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31 ರಾತ್ರಿ ಎಂಟು ಗಂಟೆಯಿಂದ ಜನವರಿ 1, 2021 ಬೆಳಗಿನ ಜಾವ ಎರಡು ಗಂಟೆ ವರೆಗೂ ವಾಹನ ಸಂಚಾರದ ಮೇಲಿನ ನಿರ್ಬಂಧಗಳು ಚಾಲನೆಯಲ್ಲಿರಲಿವೆ. ನಗರದ ಸುಮಾರು ಹದಿನೈದು ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಸಂಚಾರ ನಿರ್ಬಂಧದ ವಿವರಗಳು ಈ ಕೆಳಕಂಡಂತಿವೆ.

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಮೂಗುದಾರ ಹಾಕಿದ ಪೊಲೀಸ್ ಇಲಾಖೆ ! ಹೊಸ ವರ್ಷಾಚರಣೆ ಸಂಭ್ರಮಕ್ಕೆ ಮೂಗುದಾರ ಹಾಕಿದ ಪೊಲೀಸ್ ಇಲಾಖೆ !

ವಾಹನ ನಿಷೇಧ:

ವಾಹನ ನಿಷೇಧ:

ನಗರದ ಆರು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ತುರ್ತು ವಾಹನ ಹಾಗೂ ಪೊಲೀಸ್ ವಾಹನ ಹೊರತು ಪಡಿಸಿ ಉಳಿದ ಯಾವುದೇ ವಾಹನಗಳು ಈ ಕೆಳಕಂಡ ಆರು ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ವಾಹನ ಪ್ರವೇಶ ನಿರ್ಬಂಧದ ಸಮಯ. ಡಿಸೆಂಬರ್ 31 ರಾತ್ರಿ ಎಂಟು ಗಂಟೆಯಿಂದ ಜನವರಿ 01, 2021, ಬೆಳಗಿನ ಜಾವ 2 ಗಂಟೆ ವರೆಗೆ ವಾಹನ ನಿಷೇಧಿಸಲಾಗಿದೆ.

ಎಂ.ಜಿ. ರಸ್ತೆ- ಅನೀಲ್ ಕುಂಬ್ಳೆ ವೃತ್ತದಿಂದ ಮೇಯೋ ಹಾಲ್ ವರೆಗೆ, ಬ್ರಿಗೇಡ್ ರಸ್ತೆ- ಕಾವೇರಿ ಎಂಪೋರಿಯಂ ನಿಂದ ಅಫೇರಾ ಜಂಕ್ಷನ್ ವರೆಗೆ , ಚರ್ಚ್‌ ಸ್ಟ್ರೀಟ್- ಬ್ರಿಗೇಡ್ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ. ಮ್ಯೂಸಿಯಂ ರಸ್ತೆ- ಎಂ.ಜಿ. ರಸ್ತೆ ಜಂಕ್ಷನ್ ನಿಂದ ಹಳೇ ಪೋಸ್ಟ್ ಆಫೀಸ್‌. ರೆಸ್ಟ್ ಹೌಸ್ ಪಾರ್ಕ್- ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್ ವರೆಗೆ. ರೆಸಿಡೆನ್ಸಿ ರಸ್ತೆ- ಆಶೀರ್ವಾದ ಜಂಕ್ಷನ್ ನಿಂದ ಮೇಯೋ ಹಾಲ್ ವರೆಗೆ.

ಮೇಲ್ಸೇತುವೆ ವಾಹನ ಸಂಚಾರ ನಿಷೇಧ:

ಮೇಲ್ಸೇತುವೆ ವಾಹನ ಸಂಚಾರ ನಿಷೇಧ:

ಹೊಸ ವರ್ಷಾಚರಣೆ ವೇಳೆ ಹೆಚ್ಚು ಅಪಘಾತ ಸಂಭವಿಸುವ ಹಿನ್ನೆಲೆಯಲ್ಲಿ ಡಿಸೆಂಬರ್ 31 ರಾತ್ರಿ ಹತ್ತು ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆ ವರೆಗೂ ನಗರದ 44

ಮೇಲ್ಸೇತುವೆಗಳ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಮಡಿವಾಳ ಎಲಿವೇಟೆಡ್ ಮೇಲ್ಸೇತುವೆ ಯಿಂದ ಹಿಡಿದು ಎಲ್ಲಾ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬರುವ ಮೇಲ್ಸೇತುವೆ ಮೇಲಿನ ವಾಹನ ಸಂಚಾರ ರದ್ದು ಪಡಿಸಲಾಗಿದೆ.

ವಾಹನ ನಿಲುಗಡೆ ನಿಷೇಧ:

ವಾಹನ ನಿಲುಗಡೆ ನಿಷೇಧ:

ಇನ್ನು ನಗರದ ಹದಿನೈದು ರಸ್ತೆಗಳಲ್ಲಿ ಡಿಸೆಂಬರ್ 31 ಸಂಜೆ 4 ಗಂಟೆಯಿಂದ ಜನವರಿ 1 ರ ಬೆಳಗಿನ ಜಾವ 2 ಗಂಟೆ ವರೆಗೂ ಈ ಕೆಳಗಿನ 14 ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಎಂಜಿ. ರಸ್ತೆ, ಕಬ್ಬನ್ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್ ರಸ್ತೆ, ಇನ್ಫೆಂಟ್ರಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮಗರತ್ ರಸ್ತೆ, ಕಮೀಷನರೇಟ್ ರಸ್ತೆ, ಮಾರ್ಕನ್ ರಸ್ತೆ, ಡಿಸ್ಪೆನ್ಸರಿ ರಸ್ತೆ, ಇಂದಿರಾನಗರ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

Recommended Video

ಹೊನ್ನಾವರದ Eco Beachಗೆ Blue Flagಗ್‌‌ ಮಾನ್ಯತೆ, ಸಂತಸ ವ್ಯಕ್ತಪಡಿಸಿಸಿದ ಡಿಸಿ ಹರೀಶ್ ಕುಮಾರ್ |Oneindia Kannada
ಬದಲಿಮಾರ್ಗ :

ಬದಲಿಮಾರ್ಗ :

ಡಿಸೆಂಬರ್ 31 ರಾತ್ರಿ ಎಂಟು ಗಂಟೆಯಿಂದ ಜನವರಿ 1 ರ ಬೆಳಗ್ಗೆ ಎಂಜಿ. ರಸ್ತೆ ಮತ್ತು ಕ್ವೀನ್ಸ್ ರಸ್ತೆ ಕಡೆಯಿಂದ ಹಲಸೂರು ಮತ್ತು ಮುಂದಕ್ಕೆ ಹೋಗುವ ವಾಹನಗಳು ಅನೀಲ್ ಕುಂಬ್ಳೆ ವೃತ್ತದ ಬಳಿ ಎಡ ತಿರುವು ಪಡೆದು, ಬಿಆರ್ ವಿ ಜಂಕ್ಷನ್ ಮೂಲಕ ಎಂ.ಜಿ. ರಸ್ತೆ ತಲುಪಿ ಮುಂದೆ ಹೋಗಬೇಕು. ಟ್ರಿನಿಟಿ ವೃತ್ತದ ಕಡೆಯಿಂದ ಬರುವ ವಾಹನಗಳೂ, ವೆಬ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಮಣಿಪಾಲ್ ಬಳಿ ಎಡ ತಿರುವು ಪಡೆದು ಕಬ್ಬನ್ ರಸ್ತೆಯಲ್ಲಿ ಮುಂದೆ ಸಾಗಬಹುದು. ಹಲಸೂರು ಕಡೆಯಿಂದ ಕಂಟೋನ್ಮೆಂಟ್ ಕಡೆಗಳಿಗೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದ ಕಡೆಯಿಂದ ಬರುವ ವಾಹನಗಳು ಹಲಸೂರು ರಸ್ತೆ, ಡಿಕನ್ಸನ್ ರಸ್ತೆ ಮಾರ್ಗವಾಗಿ ಸಚರಿಸಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗಬಹುದು. ಹಳೇ ಪಿಎಸ್ ಮತ್ತು ಆಶೀರ್ವಾದಂ ವೃತ್ತದ ಮೂಲಕ ಬರುವ ವಾಹನಗಳು ಮ್ಯೂಸಿಯಂ ರಸ್ತೆ ಮೂಲಕ ಎಸ್‌ಬಿಐ ಜೆಂಕ್ಷನ್ ತಲುಪಿ, ಅನೀಲ್ ಕುಂಬ್ಳೆ ವೃತ್ತದ ಮೂಲಕ ಮುಂದೆ ಸಾಗಬಹುದು.

ಮೋಟಾರು ವಾಹನ ಕಾಯ್ಧೆ ನಿಯಮ ಹದಿನೈದರ ಅಡಿ ಈ ನಿರ್ಬಂಧ ವಿಧಿಸಿದ್ದು, ಹೊಸ ವರ್ಷಾಚರಣೆ ವೇಳೆ ಸಂಚಾರ ಸಮಸ್ಯೆ ಉಂಟಾಗದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ತಿಳಿಸಿದ್ದಾರೆ.

English summary
Bengaluru police have issued traffic regulations on New Year’s Eve: Here is the list of routes that will see restrictions on movement of vehicles and vehicular parking norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X