ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಮೂಗುದಾರ ಹಾಕಿದ ಪೊಲೀಸ್ ಇಲಾಖೆ !

|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಕರೋನಾ ವರ್ಷಕ್ಕೆ ಗುಡ್ ಬೈ ಹೇಳಿ 2021 ಹೊಸ ವರ್ಷವನ್ನು ಸ್ವೀಕರಿಸುವ ಸಂಭ್ರಮಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಕರೋನಾ ರೂಪಾಂತರ ಅಲೆ ಇರುವ ಹಿನ್ನೆಲೆಯಲ್ಲಿ ಸುರಕ್ಷತಾ ಭಾಗವಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 31 ರಾತ್ರಿ 8 ರಿಂದ ಮರು ದಿನ ಬೆಳಗ್ಗೆ 6 ಗಂಟೆ ವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಅನ್ವಯ ವಾಗುವಂತೆ ಆದೇಶ ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ಆದೇಶ ಮಾಡಿದ್ದಾರೆ.

ರಾಜ್ಯ ಹಾಗೂ ರಾಜಧಾನಿಯಲ್ಲಿ ಕರೋನಾ ಸೋಂಕು ಇದೆ. ಇದರ ಬೆನ್ನಲ್ಲೇ ರೂಪಾಂತರಿ ಕರೋನಾ ಸೋಂಕಿತರು ಬ್ರಿಟನ್‌ ನಿಂದ ಬೆಂಗಳೂರಿಗೆ ಬಂದಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸುರಕ್ಷತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ಕರೋನಾ ಸೋಂಕು ಹರಡದಂತೆ ಕೇಂದ್ರ ಸರ್ಕಾರ ಕೂಡ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಸಂಭ್ರಮ ಆಚರಣೆಗೆ ಅವಕಾಶ ನೀಡದೇ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ಆಯುಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಐಶರಾಮಿ ಹೋಟೆಲ್‌ ಗಳ ಪಾರ್ಟಿಗಳಿಗೆ, ಡಿಜೆ ಇವೆಂಟ್‌, ರಸ್ತೆಯಲ್ಲಿ ಮಾಸ್‌ ಆಚರಣೆ ಸೇರಿದಂತೆ ಸಾಮೂಹಿಕ ಆಚರಣೆ ನಿರ್ಬಂಧಿಸಲಾಗಿದೆ. ಹಾಗಂತ ಮನೆಯಲ್ಲಿಯೇ ಕೂತು ಆಚರಣೆ ಮಾಡಬೇಕೆಂದು ಇಲ್ಲ. ಕೆಲವು ಸಡಿಕೆಗಳನ್ನು ಸಹ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಆದೇಶದಲ್ಲಿ ಉಲ್ಲೇಖಿಸಿದಂತೆ ಬೆಂಗಳೂರು ಜನರು ಹೊಸ ವರ್ಷದಲ್ಲಿ ಏನು ಮಾಡಬೇಕು. ಏನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

New Year Celebration : Prohibition Order From Bengaluru Police Commissioner

ಪ್ರತಿ ವರ್ಷ ಬೆಂಗಳೂರಿನಲ್ಲಿ ಹೊಸ ವರ್ಷವನ್ನು ವಿನೂತನವಾಗಿ ಸಂಭ್ರಮಿಸಲಾಗುತ್ತಿತ್ತು. ಬ್ರಿಗೇಡ್ ರಸ್ತೆ, ಕೋರಮಂಗಲ, ಎಂ.ಜಿ. ರಸ್ತೆಯಲ್ಲಿ ಸಾವಿರಾರು ಜನ ಸೇರಿ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತಿದ್ದರು. ಅದೇ ರೀತಿ ಬೆಂಗಳೂರಿನಲ್ಲಿ ಬಹುದೊಡ್ಡ ಸಂಗೀತ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದ್ದವು. ಕರೋನಾ ಹೊಸ ವರ್ಷದ ಸಂಭ್ರಮವನ್ನು ಕಸಿದುಕೊಂಡಿದೆ. ಇನ್ನು ಹೊಸ ವರ್ಷದ ಆಚರಣೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹಾಕಿರುವ ನಿರ್ಬಂಧ ವಿವರ ಇಲ್ಲಿ ನೀಡಲಾಗಿದೆ.

1. ಸಾರ್ವಜನಿಕ ರಸ್ತೆ, ಪ್ರದೇಶದಲ್ಲಿ ಐದು ಜನಕ್ಕಿಂತಲೂ ಹೆಚ್ಚು ಮಂದಿ ಹೊಸ ವರ್ಷ ಆಚರಣೆ ಮಾಡುವಂತಿಲ್ಲ.

2. ಹೊಸ ವರ್ಷಾಚರಣೆಗೆಂದು ಸಾಮೂಹಿಕವಾಗಿ ಗುಂಪು ಸೇರಿ ಆಚರಣೆ ಮಾಡುವುದು ಸಂಪೂರ್ಣ ನಿಷೇಧ ಮಾಡಲಾಗಿದೆ.

3. ಪಾರ್ಕ್‌, ಮೈದಾನ, ಸಮುದಾಯ ಭವನ ದಂತಹ ಪ್ರದೇಶದಲ್ಲಿ ಯಾವುದೇ ರೀತಿಯಲ್ಲೂ ಜನರು ಸಾಮೂಹಿಕವಾಗಿ ಸೇರಿ ಹೊಸ ವರ್ಷ ಆಚರಣೆ ಮಾಡುವಂತಿಲ್ಲ.

4. ವಸತಿ ಸಮುಚ್ಛಯಗಳು ಮತ್ತು ಖಾಸಗಿ ಕ್ಲಬ್‌ ಗಳು ಯಾವುದೇ ಕಾರ್ಯಕ್ರಮ ಆಯೋಜಿಸದೇ ತನ್ನ ಸದಸ್ಯರು ಮಾತ್ರ ಹೊಸ ವರ್ಷ ಆಚರಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

5. ಹೋಟೆಲ್‌, ಮಾಲ್, ರೆಸ್ಟೋರೆಂಟ್‌, ಕ್ಲಬ್, ಪಬ್ ಕ್ಲಬ್‌ ಹೌಸ್‌ ಗಳಲ್ಲಿ ಡಿಜೆ ಕಾರ್ಯಕ್ರಮ ಆಯೋಜನೆ ಮೂಲಕ ಹೊಸ ವರ್ಷ ಆಚರಣೆ ಮಾಡುವಂತಿಲ್ಲ. ಸಂಗೀತ ಕಾರ್ಯಕ್ರಮವಗಲೀ, ಸಾಂಸ್ಕೃತಿಕ

6. ಕಾರ್ಯಕ್ರಮವಾಗಲೀ ಆಯೋಜನೆ ಮಾಡುವಂತಿಲ್ಲ. ಕೋವಿಡ್ ಮಾರ್ಗ ಸೂಚಿ ಅನ್ವಯ ದಿನ ನಿತ್ಯದ ವಹಿವಾಟು ನಡೆಸಲು ಹೋಟೆಲ್, ಮಾಲ್, ಪಬ್ ಹಾಗೂ ರೆಸ್ಟೋರೆಂಟ್ ಗಳಿಗೆ ಅವಕಾಶ ಕಲ್ಪಿಸಲಾಗಿದೆ.

7. ಹೋಟೆಲ್, ರೆಸ್ಟೋರೆಂಟ್ ಮಾಲೀಕರು ಅತಿಥ್ಯ ಕೊಠಡಿ ಬುಕ್ ಮಾಡಿ ತಂಗಿದ್ದರೆ, ಅಂತಹವರ ಗುರುತಿನ ಚೀಟಿ ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ಪಡೆಯಬೇಕು.

ಯಾವುದೇ ರೆಸ್ಟೋರೆಂಟ್, ಮಾಲ್, ಪಬ್ ಹೋಟೆಲ್‌ ಗಳಲ್ಲಿ ಜನರು ಹೊರಗೆ ಸಾಮೂಹಿಕವಾಗಿ ಸೇರಿ ಕಾಯುವಂತಾಗಬಾರದು. ಅಂತಹ ಜನ ಸಂದಣಿ ಕಂಡು ಬಂದರೆ ಸಂಬಂಧಪಟ್ಟ ಹೋಟೆಲ್, ರೆಸ್ಟೋರೆಂಟ್ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ.

8. ಹೋಟೆಲ್, ಮಾಲ್, ರೆಸ್ಟೋರೆಂಟ್ ಹಾಗೂ ಪಬ್ ಮಾಲೀಕರು ಕೋವಿಡ್ ಎಚ್ಚರಿಕೆ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾನೈಟೈಸ್ , ಮುಖಕ್ಕೆ ಗವುಸು ಧರಿಸುವ ಸಾಮಾನ್ಯ ನಿಯಮ ಕಡ್ಡಾಯವಾಗಿ ಪಾಲನೆ ಮಾಡಿರಬೇಕು. ಪೊಲೀಸ್ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

English summary
Bangalore City Police Commissioner, who has blocked the celebration of the New Year in Covid wake, has issued Prohibition order in Bangalore city police commissioner's jurisdiction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X