ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.31ರಂದು ತಡರಾತ್ರಿ 2 ಗಂಟೆವರೆಗೂ ಪಾರ್ಟಿಗೆ ಅವಕಾಶ

|
Google Oneindia Kannada News

Recommended Video

ನ್ಯೂ ಇಯರ್ ಪಾರ್ಟಿ ಮಾಡೋರಿಗೊಂದು ಸುದ್ದಿ | Oneindia Kannada

ಬೆಂಗಳೂರು, ಡಿಸೆಂಬರ್ 28: ಹೊಸ ವರ್ಷದಂದು ಪಬ್‌, ಬಾರ್‌ ಗಳಲ್ಲಿ ತಡರಾತ್ರಿ 2 ಗಂಟೆಯವರೆಗೂ ಪಾರ್ಟಿ ಮಾಡಲು ಅವಕಾಶ ನೀಡಲಾಗಿದೆ.

ಈ ನಡುವೆ ಹೊಸ ವರ್ಷದ ಭದ್ರತೆಗಾಗಿ ಹಿರಿಯ ಅಧಿಕಾರಿಗೂ ಸೇರಿದಂತೆ 11 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮಹಿಳೆಯರ ಜೊತೆ ಅನುಚಿತ ವರ್ತನೆ, ಕಿಡಿಗೇಡಿ ಕೆಲಸ ಅಪರಾಧ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಹೊಸ ವರ್ಷ ಆಚರಣೆ: ಬೆಂಗಳೂರಲ್ಲಿ ಪೊಲೀಸರ ಬಂದೋಬಸ್ತ್ ಹೇಗಿದೆ? ಹೊಸ ವರ್ಷ ಆಚರಣೆ: ಬೆಂಗಳೂರಲ್ಲಿ ಪೊಲೀಸರ ಬಂದೋಬಸ್ತ್ ಹೇಗಿದೆ?

ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಇತರೆ ಆಯಕಟ್ಟಿನ ರಸ್ತೆಗಳಲ್ಲಿ ಗುಂಪು-ಗುಂಪಾಗಿ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ. ಈ ರಸ್ತೆಗಳಲ್ಲಿ ವಿಶೇಷ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗುತ್ತದೆ. ಸಿಸಿ ಕ್ಯಾಮರಾ ಅಳವಡಿಸಿ ಎಲ್‌ಇಡಿ ಪರದೆಯಲ್ಲಿ ಚಲನಚಲನ ಗಮನಿಸಲಾಗುತ್ತದೆ.

New year celebration party allowed to 2am

ಮಹಿಳೆಯರ ರಕ್ಷಣೆಗೆ ವಿಶೇಷ ದಳ ರಚನೆ, ಜನರ ಒಡನಾಟ ನಿಯಂತ್ರಣಕ್ಕೆ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ ಬ್ಯಾರಿಕೇಡ್ ಮತ್ತು ಗ್ಯಾಂಗ್ ವೇ ಅಳವಡಿಸಿ ಜನರು ಸಾಲಾಗಿ ತೆರಳಲು ವ್ಯವಸ್ಥೆ ಮಾಡಲಾಗುತ್ತದೆ.

ನ್ಯೂ ಇಯರ್ ಪಾರ್ಟಿ: ಪಬ್, ಬಾರ್‌ಗಳಲ್ಲಿ ಲೇಡಿ ಬೌನ್ಸರ್ ಕಡ್ಡಾಯ ನ್ಯೂ ಇಯರ್ ಪಾರ್ಟಿ: ಪಬ್, ಬಾರ್‌ಗಳಲ್ಲಿ ಲೇಡಿ ಬೌನ್ಸರ್ ಕಡ್ಡಾಯ

ಪಾರ್ಟಿ ನೆಪದಲ್ಲಿ ಮಾದಕ ವಸ್ತುಗಳ ಮಾರಾಟ, ಸೇವನೆ ಮೇಲೆ ಸಿಸಿಬಿ ಪೊಲೀಸರ ತಂಡಗಳು ನಿಗಾ ಇರಿಸಲಿವೆ. ನಗರಾದ್ಯಂತ 270 ಹೊಯ್ಸಳ ವಾಹನ ಹಾಗೂ 1200 ಚೀತಾ ಬೈಕ್‌ಗಳಲ್ಲಿ ಪೊಲೀಸರು ಗಸ್ತು ತಿರುಗಲಿದ್ದಾರೆ.

English summary
Bengaluru police commissioner gave permission to have new year till 2 am. But they gave strict directions to follow rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X