ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶವಂತಪುರ ರೈಲು ನಿಲ್ದಾಣಕ್ಕೆ, ವಿಮಾನ ನಿಲ್ದಾಣ ಮಾದರಿಯ ಲುಕ್

|
Google Oneindia Kannada News

ಬೆಂಗಳೂರು, ಜನವರಿ 11: ಯಶವಂತಪುರ ರೈಲು ನಿಲ್ದಾಣಕ್ಕೆ ವಿಮಾನ ನಿಲ್ದಾಣ ಮಾದರಿಯ ಲುಕ್ ನೀಡಲಾಗುತ್ತಿದೆ.

ವಿಮಾನ ನಿಲ್ದಾಣ ಮಾದರಿಯಲ್ಲಿ ಈ ನಿಲ್ದಾಣವನ್ನು ಮರುವಿನ್ಯಾಸಗೊಳಿಸುವ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದುನಿಂತಿದೆ.

ಕಾಮಗಾರಿ ಪೂರ್ಣಗೊಂಡ ಬಳಿಕ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ಬಂದಂತಹ ಅನುಭವವಾಗಲಿದೆ. ಟಿಕೆಟ್‌ ಕೌಂಟರ್‌ನಿಂದ ಹಿಡಿದು ಶೌಚಾಲಯದವರೆಗೂ ಎಲ್ಲವೂ ಹೈಟೆಕ್ ಆಗಿರಲಿದೆ ಎಂದು ನೈಋತ್ಯ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Sankranthi Special: ಬೆಂಗಳೂರಿಗೆ ಬರಲು ಹೊಸ 12 ರೈಲು; ವೇಳಾಪಟ್ಟಿ Sankranthi Special: ಬೆಂಗಳೂರಿಗೆ ಬರಲು ಹೊಸ 12 ರೈಲು; ವೇಳಾಪಟ್ಟಿ

ರೈಲಿಗಾಗಿ ಕಾಯುವ ಪ್ರಯಾಣಿಕರು ವಿಶ್ರಾಂತಿ ಪಡೆದುಕೊಳ್ಳಲು ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. ಊಟ ಮತ್ತು ಉಪಾಹಾರಕ್ಕೆಅತ್ಯಾಧುನಿಕ ಕ್ಯಾಂಟೀನ್‌ಗಳ ನಿರ್ಮಾಣ ಮಾಡಲಾಗುತ್ತಿದೆ.

2017ರಲ್ಲಿ ರೈಲ್ವೆ ಇಲಾಖೆ ಯೋಜನೆ ರೂಪಿಸಿತ್ತು

2017ರಲ್ಲಿ ರೈಲ್ವೆ ಇಲಾಖೆ ಯೋಜನೆ ರೂಪಿಸಿತ್ತು

ದೇಶದ 400 ರೈಲು ನಿಲ್ದಾಣಗಳನ್ನು ಮರು ವಿನ್ಯಾಸ ಯೋಜನೆಯಡಿ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ರೈಲ್ವೆ ಇಲಾಖೆಯು 2017ರಲ್ಲಿ ಯೋಜನೆಯನ್ನು ರೂಪಿಸಿತ್ತು. ಮೊದಲ ಹಂತದಲ್ಲಿ 23 ನಿಲ್ದಾಣಗಳ ಮರು ವಿನ್ಯಾಸಕ್ಕೆ ಕ್ರಮ ಕೈಗೊಂಡಿತ್ತು. ಈ ಪಟ್ಟಿಯಲ್ಲಿ ಯಶವಂತಪುರ ರೈಲು ನಿಲ್ದಾಣವೂ ಸ್ಥಾನಪಡೆದುಕೊಂಡಿತ್ತು.

ಏನೇನು ಹೊಸತಿದೆ

ಏನೇನು ಹೊಸತಿದೆ

ಶೌಚಾಲಯ, ನೀರಿನ ಕೂಲರ್‌ಗಳು, ಉಚಿತ ಮತ್ತು ರಿಯಾಯಿತಿ ದರದಲ್ಲಿ ವೈಫೈ, ಫ್ಯಾನ್‌ಗಳ ಅಳವಡಿಕೆ, ಎಟಿಎಂಗಳು, ಟಿವಿಯನ್ನು ಒಳಗೊಂಡ ವಿಶ್ರಾಂತಿ ಕೊಠಡಿಗಳು, ಧೂಮಪಾನಕ್ಕೆ ಪ್ರತ್ಯೇಕ ಕೊಠಡಿ, ಎಸ್ಕಲೇಟರ್‌ಗಳು, ಆಟೋ ಮತ್ತು ಟ್ಯಾಕ್ಸಿಗಳ ನಿಲುಗಡೆಗೆ ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ.

2018ರಲ್ಲಿ ಕಾಮಗಾರಿಗೆ ಅನುಮೋದನೆ

2018ರಲ್ಲಿ ಕಾಮಗಾರಿಗೆ ಅನುಮೋದನೆ

2018ರಲ್ಲಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆಯಿತು, 20 ಎಕರೆ ಜಾಗ ಹೊಂದಿರುವ ಯಶವಂತಪುರ ರೈಲು ನಿಲ್ದಾಣದಲ್ಲಿ ನವೀಕರಣ ಕಾಮಗಾರಿ ವೇಗವಾಗಿ ಸಾಗಿದೆ.

ಕಾಮಗಾರಿ ಯಾವ ಹಂತದಲ್ಲಿದೆ?

ಕಾಮಗಾರಿ ಯಾವ ಹಂತದಲ್ಲಿದೆ?

ಕಮಾನುಗಳ ನಿರ್ಮಾಣ, ಗಾಜಿನ ಮೇಲ್ಛಾವಣಿ ಕಂಬಿಗಳನ್ನು ಜೋಡಿಸುವ ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ. ಅದಕ್ಕೆ ತಕ್ಕಂತೆ ಗಾಜು ಜೋಡಣೆ ಕೆಲಸ ನಡೆಯುತ್ತಿದೆ. ನಿಲ್ದಾಣದ ಮುಂಭಾಗದ ಜಾಗದಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ರೂಪಿಸಲಾಗುತ್ತಿದೆ.

Recommended Video

ಬೆಂಗಳೂರು: ಇಂದಿನಿಂದ ನೂತನ ಬಿಬಿಎಂಪಿ ಕಾಯ್ದೆ ಜಾರಿ, ಇಲ್ಲಿದೆ ಪ್ರಮುಖಾಂಶಗಳು | Oneindia Kannada

English summary
Yeswanthpur Railway Station is giving an airport-like look,The airport's redesign of the station has almost come to an end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X