ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಸಂಗ್ರಹಕ್ಕೆ ಬಿಬಿಎಂಪಿ ಹೊಸ ವ್ಯವಸ್ಥೆ; ಸೆ. 20ರಿಂದ ಜಾರಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸ ವಿಲೇವಾರಿ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿದೆ. ನಗರದ 38 ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬರಲಿದೆ.

ಬಿಬಿಎಂಪಿ ಹೊಸದಾಗಿ ಜಾರಿಗೊಳಿಸುತ್ತಿರುವ ಕಸ ಸಂಗ್ರಹಣೆ ಪ್ರಕ್ರಿಯೆಗೆ ಟೆಂಡರ್ ಅಂತಿಮಗೊಳಿಸಿದೆ. 198 ವಾರ್ಡ್‌ಗಳ ಪೈಕಿ 38 ವಾರ್ಡ್‌ಗಳಲ್ಲಿ ಸೆಪ್ಟೆಂಬರ್ 20ರಿಂದ ಹೊಸ ಮಾದರಿಯಲ್ಲಿ ಕಸ ಸಂಗ್ರಹಣೆ ನಡೆಯಲಿದೆ.

ಕಸ ಸಂಗ್ರಹ ಮಾಡುವ ಕಾರ್ಮಿಕನ ಮೇಲೆ ಹೂಮಳೆ ಸುರಿದ ನಾಗರಿಕರು ಕಸ ಸಂಗ್ರಹ ಮಾಡುವ ಕಾರ್ಮಿಕನ ಮೇಲೆ ಹೂಮಳೆ ಸುರಿದ ನಾಗರಿಕರು

ಬಿಬಿಎಂಪಿ ಆಯುಕ್ತಾದ ಎನ್. ಮಂಜುನಾಥ ಪ್ರಸಾದ್ ಹೊಸದಾಗಿ ಜಾರಿಗೊಳಿಸುತ್ತಿರುವ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸೂಚನೆಗಳನ್ನು ನೀಡಿದ್ದಾರೆ.

ಕಸ ವಿಲೇವಾರಿ ಟೆಂಡರ್; ಬಿಬಿಎಂಪಿಗೆ ಪ್ರತಿ ತಿಂಗಳು 2 ಕೋಟಿ ನಷ್ಟ ಕಸ ವಿಲೇವಾರಿ ಟೆಂಡರ್; ಬಿಬಿಎಂಪಿಗೆ ಪ್ರತಿ ತಿಂಗಳು 2 ಕೋಟಿ ನಷ್ಟ

ಎಲ್ಲಾ 38 ವಾರ್ಡ್‌ಗಳಲ್ಲಿ ಶೇ 100ರಷ್ಟು ಕಸ ವಿಂಗಡನೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಹೊಸ ಮಾದರಿ ಕಸ ಸಂಗ್ರಹ ವಾಗುವ ವಾರ್ಡ್‌ನಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಎಚ್ಚರವಹಿಸಲಾಗುತ್ತದೆ. ಇದಕ್ಕಾಗಿ ಮಾರ್ಷಲ್‌ಗಳ ಸಹಾಯ ಪಡೆಯಲಾಗುತ್ತಿದೆ.

ಬೆಂಗಳೂರಿಗೂ ಬಂತು ಯಾಂತ್ರಿಕ ಕಸ ಗುಡಿಸುವ ವಾಹನ...ಬೆಂಗಳೂರಿಗೂ ಬಂತು ಯಾಂತ್ರಿಕ ಕಸ ಗುಡಿಸುವ ವಾಹನ...

ಪ್ರತ್ಯೇಕವಾಗಿ ಕಸ ಸಂಗ್ರಹ

ಪ್ರತ್ಯೇಕವಾಗಿ ಕಸ ಸಂಗ್ರಹ

ಹೊಸ ಮಾದರಿ ಪ್ರಕಾರ 38 ವಾರ್ಡ್‌ಗಳಲ್ಲಿ ಪ್ರತ್ಯೇಕವಾಗಿ ಹಸಿ ಮತ್ತು ಒಣ ಕಸವನ್ನು ಸಂಗ್ರಹ ಮಾಡಲಾಗುತ್ತದೆ. ವಾರ್ಡ್‌ನ 700 ಮನೆಗೆ 1 ಬ್ಲಾಕ್ ಎಂದು ಗುರುತಿಸಲಾಗುತ್ತದೆ. ಕಸ ಸಂಗ್ರಹಿಸುವ ವಾಹನಗಳಿಗೆ GPS ಅಳವಡಿಕೆ ಮಾಡಲಾಗುತ್ತದೆ. ಧ್ವನಿ ವರ್ಧಕದ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಕಸವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡಿ ವಿಲೇವಾರಿ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದ್ದಾರೆ.

ಪ್ರತಿ ದಿನ ಕಸ ಸಂಗ್ರಹ

ಪ್ರತಿ ದಿನ ಕಸ ಸಂಗ್ರಹ

38 ವಾರ್ಡ್‌ಗಳಲ್ಲಿ ಹಸಿ ಮತ್ತು ಸ್ಯಾನಿಟರಿ ಕಸವನ್ನು ಪ್ರತ್ಯೇಕವಾಗಿ ಪ್ರತಿ ದಿನ ಸಂಗ್ರಹ ಮಾಡಲಾಗುತ್ತದೆ. ಒಣ ಕಸವನ್ನು ವಾರಕ್ಕೆ ಎರಡು ಬಾರಿ ಸಂಗ್ರಹ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಕಸವನ್ನು ವಿಂಗಡನೆ ಮಾಡದೆ ನೀಡುವಂತಿಲ್ಲ.

ನಿಯಮ ಉಲ್ಲಂಘಿಸಿದರೆ ದಂಡ

ನಿಯಮ ಉಲ್ಲಂಘಿಸಿದರೆ ದಂಡ

ಕಸ ಸಂಗ್ರಹಣೆ, ವಿಲೇವಾರಿ ಸಮಯದಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ಆರೋಗ್ಯಾಧಿಕಾರಿಗಳು ಮತ್ತು ಮಾರ್ಷಲ್‌ಗಳು ಇದರ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕಲಿದ್ದಾರೆ.

Recommended Video

ಚಳಿಗಾಲದಲ್ಲು ಯುದ್ಧ ಮಾಡೋಕೆ Ready ..China ನಾ ಸುಮ್ನೆ ಬಿಡಲ್ಲಾ | Oneindia Kannada
78 ವಾರ್ಡ್‌ಗಳಿಗೆ ವಿಸ್ತರಣೆ

78 ವಾರ್ಡ್‌ಗಳಿಗೆ ವಿಸ್ತರಣೆ

ಸೆಪ್ಟೆಂಬರ್ 20ರಿಂದ ನೂತನ ಮಾದರಿಯಲ್ಲಿ 38 ವಾರ್ಡ್‌ಗಳಲ್ಲಿ ಕಸ ಸಂಗ್ರಹ ಮಾಡಲಾಗುತ್ತದೆ. ಈ ವಾರ್ಡ್‌ಗಳಲ್ಲಿ ಎಲ್ಲಿಯೂ ಬ್ಲಾಕ್‌ ಸ್ಪಾಟ್ ನಿರ್ಮಾಣವಾಗದಂತೆ ಎಚ್ಚರ ವಹಿಸಲಾಗುತ್ತದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ 78 ವಾರ್ಡ್‌ಗಳಿಗೆ ಈ ಯೋಜನೆ ವಿಸ್ತರಣೆ ಮಾಡುವ ಗುರಿ ಇದೆ.

English summary
Bruhat Bengaluru Mahanagara Palike (BBMP) implementing new waste disposal system in city. New system will come up in 38 wards from September 20, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X