ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆಂಗ್ಯೂ ಮಾದರಿಯ ಮತ್ತೊಂದು ಸೋಂಕು ಪತ್ತೆ, ಜನತೆಗೆ ಆತಂಕ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ನಗರದಲ್ಲಿ ಡೆಂಗ್ಯೂ ಮಾದರಿಯ ಮತ್ತೊಂದು ಸೋಂಕು ಪತ್ತೆಯಾಗಿದೆ.

ಈ ಪೈಕಿ ಥ್ರಂಬೋಸೈಟೋಪೆನಿಯಾ- ಪ್ಲೇಟ್ ಲೆಟ್ ಸಂಖ್ಯೆ ಕುಸಿತ ಕಾಣುವ ಸ್ಥಿತಿಯೊಂದಿಗೆ ವೈರಾಣು ಜ್ವರ ಇರುವುದು ಹೆಚ್ಚು ವರದಿಯಾಗುತ್ತಿರುವ ಪ್ರಕರಣಗಳಾಗಿವೆ.

ಕಟ್ಟಡ ನಿರ್ಮಾಣಕ್ಕೆ ಹತ್ತಿರವಿರುವ ಪ್ರದೇಶಗಳು ಕೈಗಾರಿಕಾ ಪ್ರದೇಶಗಳ ಬಳಿ ಇರುವವರು ಈ ರೀತಿಯ ವೈರಲ್ ಜ್ವರಕ್ಕೆ ಹೆಚ್ಚು ದುರ್ಬಲರಾಗಿರುತ್ತಾರೆ ಹಾಗೂ ಹರಡುವ ಸಾಮರ್ಥ್ಯ ಹೊಂದಿರುತ್ತವೆ.

New Viral Infection Bug Mimics Dengue In Bengaluru

ಈ ರೀತಿಯ ಜ್ವರವನ್ನು ಹಲವು ಮಂದಿ ಡೆಂಗ್ಯೂ ಎಂದು ತಪ್ಪಾಗಿ ಭಾವಿಸುವುದುಂಟು ಆದರೆ ಡೆಂಗ್ಯೂಗೆ ಟೆಸ್ಟ್ ಮಾಡಿಸಿದರೆ ನೆಗೆಟಿವ್ ವರದಿ ಬರುತ್ತದೆ.

ಕೊಲಂಬಿಯಾ ಏಷ್ಯಾ, ಹೆಬ್ಬಾಳ (ಮಣಿಪಾಲ್ ಹಾಸ್ಪೆಟಲ್ಸ್) ನ ಸಲಹೆಗಾರರಾಗಿರುವ ಡಾ.ಇರ್ಫಾನ್ ಜಾವೀದ್ ಖಾಜಿ, ತಾವು ಪ್ರತಿ 5 ರೋಗಿಗಳ ಪೈಕಿ ಒಬ್ಬರಲ್ಲಿ ಈ ರೀತಿಯ ಕಡಿಮೆ ಪ್ಲೇಟ್ ಲೆಟ್ ಇರುವ ವೈರಲ್ ಫೀವರ್ ಇರುವ ಪ್ರಕರಣಗಳನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ.

ಸಾಮಾನ್ಯವಾದ ರೋಗಲಕ್ಷಣಗಳೆಂದರೆ ಮೈಯಾಲ್ಜಿಯಾ, ಜ್ವರ, ತಲೆನೋವು, ಕೆಲವೊಮ್ಮೆ ಮೇಲ್ಭಾಗದ ಶ್ವಾಸೇಂದ್ರಿಯ ಸೋಂಕು ಮತ್ತು GI ರೋಗಲಕ್ಷಣಗಳೊಂದಿಗೆ ಸಂಬಂಧಿಸಿದೆ.

ವೈರಸ್‌ಗಳೊಂದಿಗೆ ಕಲುಷಿತ ನೀರು ಥ್ರಂಬೋಸೈಟೋಪೆನಿಯಾದೊಂದಿಗೆ ವೈರಲ್ ಜ್ವರಕ್ಕೆ ಕಾರಣವಾಗಬಹುದು, ಮಕ್ಕಳಿಂದ 70 ವರ್ಷದವರವರೆಗೂ ಈ ಜ್ವರ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಡಾ.ಖಾಜಿ

ಜನತೆ ಈ ರೀತಿಯ ಜ್ವರ ಬಂದಲ್ಲಿ ಅದನ್ನು ಕೋವಿಡ್-19 ಎಂದು ಗೊಂದಲಕ್ಕೀಡಲು ಪ್ರಾರಂಭಿಸಿದ್ದಾರೆ ಎನ್ನುತ್ತಾರೆ ಏಸ್ತರ್ ಆರ್ ವಿ ಆಸ್ಪತ್ರೆಯ ಆಂತರಿಕ ವೈದ್ಯ ವಿಭಾಗದ ಡಾ. ಎಸ್ ಎನ್ ಅರವಿಂದ ಹೇಳಿದ್ದಾರೆ.

ಋತು ಬದಲಾವಣೆಯಾಗಿರುವುದು, ವೀಕೆಂಡ್ ಗಳಲ್ಲಿ ಜನತೆ ಸಣ್ಣಪುಟ್ಟ ಪಾರ್ಟಿಗಳಿಗೆ ತೆರಳುವುದು ಈ ವೈರಾಣು ಜ್ವರ ಹರಡುವುದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅರವಿಂದ ತಿಳಿಸಿದ್ದಾರೆ.

ಸಾಮಾನ್ಯವಾಗಿ ವೈರಲ್ ಜ್ವರಕ್ಕೆ ನೀಡುವ ಚಿಕಿತ್ಸೆಯನ್ನೇ ಈ ವೈರಾಣು ಜ್ವರ ಎದುರಿಸುತ್ತಿರುವವರಿಗೂ ನೀಡಲಾಗುತ್ತದೆ. ಈ ವೈರಾಣು ಜ್ವರದಿಂದ ಶ್ವಾಸಕೋಶ, ಕಿಡ್ನಿ, ಲಿವರ್ ಗೆ ಹಾನಿಯಾಗಿದ್ದರೆ ಮಾತ್ರ ಚಿಕಿತ್ಸೆಯ ವಿಧಾನ ಬದಲಾವಣೆಯಾಗುತ್ತದೆ.

ಹೀಗಾಗುವುದರಿಂದ ಹಲವು ರೋಗಿಗಳು ಗೊಂದಲಕ್ಕೀಡಾಗಿ ಆತಂಕಕ್ಕೊಳಗಾಗುತ್ತಾರೆ ಎನ್ನುತ್ತಾರೆ ವೈದ್ಯರು. ಏಸ್ತರ್ ಸಿಎಂಐ ಆಸ್ಪತ್ರೆಯ ಆಂತರಿಕ ವೈದ್ಯ ವಿಭಾಗದ ಸಲಹೆಗಾರರಾಗಿರುವ ಡಾ. ಬೃಂದ ಈ ಮಾದರಿಯ ಹೊಸ ವೈರಾಣು ಜ್ವರದ ಬಗ್ಗೆ ಮಾತನಾಡಿದ್ದು, "ಕಡಿಮೆ ಪ್ಲೇಟ್ ಲೆಟ್ ಸಂಖ್ಯೆ ಎಂದಾಕ್ಷಣ ಅದು ಡೆಂಗ್ಯು ಆಗಿರಬೇಕೆಂದೇನೂ ಇಲ್ಲ. ಇತರ ವೈರಲ್ ಸೋಂಕಿನಿಂದಲೂ ಪ್ಲೇಟ್ ಲೆಟ್ ಗಳು ಕುಸಿತ ಕಾಣಬಹುದು, ನಿರ್ವಹಣೆಯೂ ಡೆಂಗ್ಯು ಮಾದರಿಯದ್ದೇ ಆಗಿರುತ್ತದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್‌' ಗೆಳಿಸಿದ್ದಾರೆ.

Recommended Video

ವಿರಾಟ್ ನಂತರ ಈ ಮೂವರಲ್ಲಿ ಯಾರಾಗ್ತಾರೆ RCB ನಾಯಕ? | Oneindia kannada

ಹಿಮೋಗ್ರಾಮ್ (ರಕ್ತ ಎಣಿಕೆ ಪರೀಕ್ಷೆ) ಡೆಂಗ್ಯು ಎನ್ಎಸ್1 ಆಂಟಿಜೆನ್ ಟೆಸ್ಟ್ ಗಳನ್ನು ಮಾಡಿಸಬೇಕಾಗುತ್ತದೆ. ಈ ರೀತಿ ಮಾಡಿಸಿದ ಪರೀಕ್ಷೆಯಲ್ಲಿ ಪಾಸಿಟೀವ್ ವರದಿ ಬಂದರೆ ಅದು ಡೆಂಗ್ಯು ಎನ್ನುವುದು ದೃಢವಾಗುತ್ತದೆ ಎನ್ನುತ್ತಾರೆ ಬೃಂದ.

English summary
With a change in season, doctors are seeing a high number of cases of viral infection, many of these are viral fever along with thrombocytopenia, a condition in which the platelet count drops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X