ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಜೆಸ್ಟಿಕ್‌ನಲ್ಲಿ ಅಂಧ ದಂಪತಿಯ ಮಗುವನ್ನು ಕದ್ದೊಯ್ದ ಪ್ರಕರಣಕ್ಕೆ ತಿರುವು

|
Google Oneindia Kannada News

ಬೆಂಗಳೂರು, ಮೇ 15: ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಅಂಧ ದಂಪತಿಯಿಂದ ಮಗುವನ್ನು ಕದ್ದೊಯ್ದ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.

ಮಗು ರಕ್ಷಣೆ ಮಾಡಿದ್ದ ಮಹಿಳೆಯೇ ಆರೋಪಿ ಎಂದು ತಿಳಿದುಬಂದಿದೆ. ಕೆಂಗೇರಿಯ ಪಾರ್ವತಮ್ಮಗೆ ಪತಿ ಮತ್ತು ಮಕ್ಕಳು ಇರಲಿಲ್ಲ. ಇದರಿಂದಾಗಿ ಖಿನ್ನತೆಗೆ ಒಳಗಾಗಿದ್ದರು.

ಮೆಜೆಸ್ಟಿಕ್‌ನಲ್ಲಿ ಅಂಧ ದಂಪತಿಯ 8 ತಿಂಗಳ ಹಸುಗೂಸು ಅಪಹರಣ ಮೆಜೆಸ್ಟಿಕ್‌ನಲ್ಲಿ ಅಂಧ ದಂಪತಿಯ 8 ತಿಂಗಳ ಹಸುಗೂಸು ಅಪಹರಣ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪಾರ್ವತಮ್ಮಗೆ ಮಗು ಸಾಕಬೇಕೆಂಬ ಹಂಬಲವಿತ್ತು. ಈ ನಡುವೆ ಕೆಲಸ ನಿಮಿತ್ತ ಚಿತ್ರದುರ್ಗಕ್ಕೆ ಹೋಗಿದ್ದ ಪಾರ್ವತಮ್ಮ, ಏ 27ರಂದು ಮೆಜೆಸ್ಟಿಕ್‌ಗೆ ಬಂದಿದ್ದರು. ಇದೇ ವೇಳೆ ಅಂಧ ದಂಪತಿ ರಾಯಚೂರಿನಿಂದ ಬೆಳಗ್ಗೆ 7ಕ್ಕೆ ಬಂದಿದ್ದರು.

New twist in Baby kidlap case in Majastic

ನೀರು ತರಲು ಅಂಧ ಮಹಿಳೆ ಹೊರಟಾಗ ತಾನು ಸಹಾಯ ಮಾಡುತ್ತೀನಿ, ಮಗುವನ್ನು ಎತ್ತಿಕೊಳ್ಳುತ್ತೇನೆ ಎಂದು ಹೇಳಿ ಕರೆದೊಯ್ದು ಬಳಿಕ ಅಲ್ಲಿಂದ ಮಗುವನ್ನು ಅಪಹರಿದ್ದಳು. ಇದರ ಮಧ್ಯೆ ಪಾರ್ವತಮ್ಮನ ತಾಯಿ ಹಾಗೂ ಸಹೋದರಿ ಸೇರಿ ಮಗುವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ಅಂಧ ದಂಪತಿಗಳು ಮಗುವನ್ನು ಭಿಕ್ಷೆ ಬೇಡಲು ಬಳಸುತ್ತಾರೆ, ಇಷ್ಟು ಚೆನ್ನಾಗಿರುವ ಮಗುವನ್ನು ಅಪಹರಿಸಿದರೆ ಯಾರೂ ಕೇಳುವುದಿಲ್ಲ, ತಾನೇ ಸಾಕಬಹುದು ಎಂದು ಭಾವಿಸಿ ಮಗುವನ್ನು ಅಪಹರಿಸಿದ್ದಳು.

English summary
There is a new twist in blind couple baby's kidnapping case. Kidnapper and rescued lady are one and the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X