ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್

|
Google Oneindia Kannada News

Recommended Video

ವಾಹನದಲ್ಲಿ DL, RC ಒರಿಜಿನಲ್ಲೇ ಬೇಕಾ? ಇಲ್ಲಾಂದ್ರೆ ದಂಡ ಬೀಳುತ್ತಾ? | Oneindia Kannada

ಬೆಂಗಳೂರು, ಸೆ 7: ಈಗ ಎಲ್ಲೆಲ್ಲೂ ಹೊಸ ಸಂಚಾರಿ ನಿಯಮಾವಳಿ ಉಲ್ಲಂಘನೆಯ ದಂಡದ ಬಗ್ಗೆಯೇ ಮಾತು. ಸೆಪ್ಟಂಬರ್ ಐದರಿಂದ ಆರಂಭವಾಗಿರುವ ಹೊಸ ಕಾನೂನಿನಿಂದ, ಮೊದಲ ದಿನ ಬೆಂಗಳೂರು ಪೊಲೀಸರು ಈಗಾಗಲೇ ಭರ್ಜರಿ ಭೇಟೆ ಆಡಿಯಾಗಿದೆ.

ವಿವಿಧ ಹಂತದ ಕಾನೂನು ಉಲ್ಲಂಘನೆಗೆ ದಂಡದ ಸ್ವರೂಪ ಬೇರೆಬೇರೆಯಾಗಿರುತ್ತದೆ. ಕೆಲವೊಂದು ದಾಖಲೆಗಳ ಜೆರಾಕ್ಸ್ ಪ್ರತಿ ಇದ್ದರೂ ಹಿಂದೆ ನಡೆಯುತ್ತಿತ್ತು. ಆದರೆ, ಬೆಂಗಳೂರು ಪೊಲೀಸರು ಅತ್ಯಂತ ಸ್ಪಷ್ಟವಾಗಿ ಹೊಸ ಆದೇಶವೊಂದನ್ನು ಹೊರಡಿಸಿದ್ದಾರೆ.

ಶಾಕ್ ಆಯ್ತಾ, ಶಾಕ್ ಆಗ್ಲೇ ಬೇಕೂಂತ ತಾನೇ ಟ್ರಾಫಿಕ್ ಫೈನ್ ಹಾಕಿರೋದು..ಶಾಕ್ ಆಯ್ತಾ, ಶಾಕ್ ಆಗ್ಲೇ ಬೇಕೂಂತ ತಾನೇ ಟ್ರಾಫಿಕ್ ಫೈನ್ ಹಾಕಿರೋದು..

ಚಾಲನಾ ಪರವಾನಿಗೆ (ಡಿಎಲ್) ಜೆರಾಕ್ಸ್ ಪ್ರತಿಯನ್ನು ಬಹುತೇಕ ಎಲ್ಲರೂ ಜೇಬಿನಲ್ಲೋ, ಢಿಕ್ಕಿಯಲ್ಲೋ ಇಟ್ಟುಕೊಂಡಿರುತ್ತಾರೆ. ಯಾಕೆಂದರೆ, ಟ್ರಾಫಿಕ್ ಪೊಲೀಸರು ಕೇಳುವ ಮೊದಲ ದಾಖಲೆಯೇ ಇದು.

New Traffic Fine: All Need To Carry Four Documents In Original To Avoid Huge Fine

ಆದರೆ, ಇನ್ನು ಮುಂದೆ ಡಿಎಲ್, ಜೆರಾಕ್ಸ್ ನಡೆಯುವುದಿಲ್ಲ, ಒರಿಜಿನಲ್ ಇಟ್ಟುಕೊಂಡಿಲ್ಲ ಎಂದರೆ ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ಹೇಳಿದೆ.

ಇದಲ್ಲದೇ, ವಾಯುಮಾಲಿನ್ಯ ತಪಾಸಣಾ ಪ್ರಮಾಣ ಪತ್ರ ( ಎಮಿಷನ್ ಟೆಸ್ಟ್), ವಿಮಾ ಪ್ರಮಾಣಪತ್ರ (ಇನ್ಸೂರೆನ್ಸ್) ಮತ್ತು ರಹದಾರಿ ಪ್ರಮಾಣ ಪತ್ರ (ಆರ್ ಸಿ ಬುಕ್), ಈ ಎಲ್ಲಾ ದಾಖಲೆಗಳನ್ನೂ ಒರಿಜಿನಲ್ ಇಟ್ಟುಕೊಂಡಿರ ಬೇಕಾಗಿ, ಟ್ರಾಫಿಕ್ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಟ್ರಾಫಿಕ್ ನಿಯಮ ಉಲ್ಲಂಘನೆ: ಬೆಂಗಳೂರಿನ ಯುವಕನಿಗೆ 17000 ರೂ. ದಂಡ!ಟ್ರಾಫಿಕ್ ನಿಯಮ ಉಲ್ಲಂಘನೆ: ಬೆಂಗಳೂರಿನ ಯುವಕನಿಗೆ 17000 ರೂ. ದಂಡ!

ಎಲ್ಲಾ ಮೂಲ ದಾಖಲೆಗಳನ್ನು ಕೊಂಡೊಯ್ಯುವ ಬದಲು, ಪೊಲೀಸ್ ಇಲಾಖೆ ಪರ್ಯಾಯ ಮಾರ್ಗವನ್ನು ಸೂಚಿಸಿದೆ. "DigiLocker" ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ಅಗತ್ಯವಿರುವ ನೊಂದಣಿ ಸಂಖ್ಯೆಯನ್ನು ದಾಖಲಿಸಬೇಕು.

ಇದಾದ ನಂತರ, ಎಲ್ಲಾ ಮೂಲ ದಾಖಲೆಗಳನ್ನು ಇದರಲ್ಲಿ ಸೇವ್ ಮಾಡಿಕೊಂಡರೆ, ತಪಾಸಣೆಯ ವೇಳೆ, ಈ ಆಪ್ ಮೂಲಕ, ಪೊಲೀಸರಿಗೆ ತೋರಿಸಬಹುದು.

English summary
New Traffic Fine: All Need To Carry Four Documents In Original To Avoid Huge Fine. That is DL, Insurance, Emmission Test and RC Book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X