ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಬೀದಿ ನಾಯಿಗಳಿಗಾಗಿ ಶ್ವಾನ ಶಾಲೆ ನಿರ್ಮಾಣ: ಗಂಗಾಂಬಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಮಕ್ಕಳ ಮೇಲೆ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಬೆಂಗಳೂರಿನ ಹೊರವಲಯದಲ್ಲಿ ಶ್ವಾನಶಾಲೆ ನಿರ್ಮಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.

ಬೀದಿನಾಯಿಗಳನ್ನು ಈ ಶ್ವಾನಶಾಲೆಯಲ್ಲಿ ಕೂಡಿ ಹಾಕಿ ಸಂರಕ್ಷಣೆ ಮಾಡಲಾಗುವುದು, ಶೀಘ್ರದಲ್ಲೇ ಶ್ವಾನಶಾಲೆ ಆರಂಭವಾಗಲಿದೆ. ಲಿಂಗಾಯತ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭರವಸೆ ನೀಡಿದರು.

ಬೀದಿನಾಯಿಗಳ ನಿಯಂತ್ರಣ ಬಿಟ್ಟು ತಂತ್ರ ಕಲಿಸಲು ಮುಂದಾದ ಮೇಯರ್ ಬೀದಿನಾಯಿಗಳ ನಿಯಂತ್ರಣ ಬಿಟ್ಟು ತಂತ್ರ ಕಲಿಸಲು ಮುಂದಾದ ಮೇಯರ್

ಕಾರ್ಯಕ್ರಮದಲ್ಲಿ ಮೇಯರ್ ಗೆ ಬೆಂಗಳೂರು ನಾಗರಿಕರ ಪರವಾಗಿ ಕೆಲಸವು ಬೇಡಿಕೆಗಳನ್ನು ಸಲ್ಲಿಸಲಾಯಿತು. ಅವುಗಳೇನೆಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಅತ್ಯಂತ ಹೆಚ್ಚಾಗಿದೆ.ಇತ್ತೀಚೆಗಷ್ಟೇ ವಿಭೂತಿಪುರದಲ್ಲಿ 11 ವರ್ಷದ ಬಾಲಕನೊಬ್ಬ ಬೀದಿ ನಾಯಿ ಕಚ್ಚಿದ ಪರಿಣಾಮ ಮೃತಪಟ್ಟಿದ್ದ.ಇಂತಹ ಘಟನೆಗಳನ್ನು ತಪ್ಪಿಸಲು ಗೋಶಾಲೆಗಳ ಮಾದರಿಯಲ್ಲಿ ಶ್ವಾನಶಾಲೆಗಳನ್ನು ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ತೆರೆಯಬೇಕು ಎಂದು ಒತ್ತಾಯಿಸಿದರು.

New street dog care centre for Bengaluru

ಬೆಂಗಳೂರಿನಲ್ಲಿ ಬೀದಿ ನಾಯಿ ಸಮಸ್ಯೆಯೇ? ದೂರು ನೀಡುವುದು ಹೇಗೆ?ಬೆಂಗಳೂರಿನಲ್ಲಿ ಬೀದಿ ನಾಯಿ ಸಮಸ್ಯೆಯೇ? ದೂರು ನೀಡುವುದು ಹೇಗೆ?

ಈಗಾಗಲೇ ಬಿಬಿಎಂಪಿ ಬಜೆಟ್‌ನಲ್ಲಿ ನಾಯಿಗಳ ಸಂತಾನ ಶಕ್ತಿ ಹರಣ ಮಾಡುವುದಕ್ಕೆ ಕಾಯ್ದಿರಿಸಿರುವ ಹಣವೂ ಸೇರಿದಂತೆ ಹೆಚ್ಚಿನ ಹಣವನ್ನು ಇದಕ್ಕಾಗಿ ಕ್ರೋಢೀಕರಿಸಬೇಕು.ಶ್ವಾನಶಾಲೆಗಳ ನಿರ್ವಹಣೆಗೆ ಪ್ರಾಣಿದಯಾ ಸಂಘಗಳ ಕಾರ್ಯಕರ್ತರು ಮತ್ತು ಸಂಘ ಸಂಸ್ಥೆಗಳ ಸಹಾಯವನ್ನೂ ಪಡೆಯಬೇಕು‌ ಎಂದು ತಿಳಿಸಿದರು.

English summary
To control street dogs, bbmp is coming up with street dog centre. New mayor Gangambike announced this project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X