ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್ ಮೆಟ್ರೋ ಮಾರ್ಗದಲ್ಲಿ ಹೊಸ ನಿಲ್ದಾಣಗಳು

|
Google Oneindia Kannada News

ಬೆಂಗಳೂರು, ಜುಲೈ 26: ಕೆಂಪೇಗೌಡ ಅಂತಾರಾಷ್ಟ್ರೀ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗದಲ್ಲಿ ಹೊಸ ನಿಲ್ದಾಣಗಳು ತಲೆ ಎತ್ತಲಿವೆ.

ಬಾಗಲೂರು ಕ್ರಾಸ್ ಮತ್ತು ಟ್ರಂಪೆಟ್ ಜಂಕ್ಷನ್ ಮಧ್ಯೆ ಬೆಟ್ಟದಹಲಸೂರು ಹೊಸ ಮೆಟ್ರೋ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ

ಮೊದಲು ಯೋಜನೆ ಮಾಡಿದಂತೆ ಕಸ್ತೂರಿ ನಗರ ಮತ್ತು ಚನ್ನಸಂದ್ರ ಮೆಟ್ರೊ ನಿಲ್ದಾಣವನ್ನು ಒಟ್ಟು ಸೇರಿಸಿದೆ.ಹೊಸ ಮೆಟ್ರೊ ನಿಲ್ದಾಣಗಳ ಸ್ಥಾಪನೆಯಿಂದ ಉತ್ತರ ಯಲಹಂಕ ಭಾಗ ಇನ್ನಷ್ಟು ಅಭಿವೃದ್ಧಿಯಾಗಲಿದೆ.

New Station Will Constructed In Airport Metro Lane

ಕಸ್ತೂರಿ ನಗರ, ಚನ್ನಸಂದ್ರ, ಹೊರಮಾವು, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್, ಕೊಗಿಲು ಕ್ರಾಸ್, ಬಾಗಲೂರು, ಪಿಆರ್ ಆರ್ ಕ್ರಾಸ್, ಟ್ರಂಪೆಟ್ ಜಂಕ್ಷನ್, ಸ್ಕೈ ಗಾರ್ಡನ್,ಬಾಬುಸಾಹೇಬಪಾಳ್ಯ, ಕಲ್ಯಾಣ ನಗರ, ಎಚ್ ಬಿಆರ್ ಲೇ ಔಟ್, ಏರ್ ಪೋರ್ಟ್ ಟರ್ಮಿನಲ್ ಉದ್ದೇಶಿತ ಹೊಸ ಮೆಟ್ರೊ ನಿಲ್ದಾಣಗಳಾಗಿವೆ.

ಇನ್ನು ನಾಲ್ಕು ಮೆಟ್ರೊ ನಿಲ್ದಾಣಗಳನ್ನು ಮರು ನಾಮಕರಣ ಮಾಡುವ ಮೆಟ್ರೊ ರೈಲು ನಿಗಮದ ಪ್ರಸ್ತಾವನೆಗೆ ಕಳೆದ 20ರಂದು ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಅಂದಾಜು ಮಾಡಿದಂತೆ 10 ಸಾವಿರ 584.15 ಕೋಟಿ ವೆಚ್ಚದಲ್ಲಿ 38 ಕಿಲೋ ಮೀಟರ್ ಉದ್ದದ ವಿಮಾನ ನಿಲ್ದಾಣ ಮಾರ್ಗದಲ್ಲಿ 17 ಮೆಟ್ರೊ ನಿಲ್ದಾಣಗಳನ್ನು ಖಾಸಗಿ ಹೂಡಿಕೆಯೊಂದಿಗೆ ನಿರ್ಮಿಸಲಾಗುತ್ತದೆ. ಮುಂದಿನ ಅಕ್ಟೋಬರ್ ಹೊತ್ತಿಗೆ ಕಾಮಗಾರಿಕೆ ಮೆಟ್ರೊ ನಿಗಮ ಟೆಂಡರ್ ಕರೆಯಲಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದ್ದಾರೆ.

English summary
New Station Will Constructed In Kempegowda International Airport Metro Lane , New 17 metro station will be built in airport lane with the help of private investors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X