ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿನ್ನಾಭರಣ ಕದ್ದವ ನಾಲ್ಕೇ ಗಂಟೆಯಲ್ಲಿ ಸಿಕ್ಕಿಬಿದ್ದ

|
Google Oneindia Kannada News

ಬೆಂಗಳೂರು, ಸೆ. 3: ವಿಶೇಷ ಸಾಫ್ಟ್‌ವೇರ್‌ ತಂತ್ರಜ್ಞಾನದ ಮೂಲಕ ಕಳ್ಳತನ ಪ್ರಕರಣವನ್ನು ಕೇವಲ 4 ಗಂಟೆಯಲ್ಲಿ ಭೇದಿಸಲಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸ್ವತಃ ಬೆಂಗಳೂರು ಪೊಲೀಸ್‌ ಆಯುಕ್ತ ಎಂಎನ್‌ ರೆಡ್ಡಿ ಬರೆದುಕೊಂಡಿದ್ದಾರೆ.

ಅತ್ಯಾಧುನಿಕ ಬೆರಳಚ್ಚು ಪತ್ತೆ ಯಂತ್ರದ ಸಹಾಯದಿಂದ ಹತ್ತು ಲಕ್ಷ ರೂ. ಕಳ್ಳತನ ಪ್ರಕರಣದ ಆರೋಪಿಯನ್ನು ಪತ್ತೆಮಾಡಲಾಯಿತು. ಇದರ ಎಲ್ಲ ಶ್ರೇಯ ಅಪರಾಧ ವಿಭಾಗದ ಪೊಲೀಸರಿಗೆ ಸಲ್ಲುತ್ತದೆ ಎಂದು ಟ್ವೀಟಿಸಿದ್ದಾರೆ.

mn reddy


ಮನೆ ಬೀಗ ಮುರಿದು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಲಾಗಿದೆ ಎಂದು ಸಂಜಯನಗರ ಟಿಚರ್ಸ್‌ ಕಾಲೋನಿ ನಿವಾಸಿ ಶಿವಕುಮಾರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಗಣೇಶ ಹಬ್ಬಕ್ಕೆಂದು ಊರಿಗೆ ತೆರಳಿದ್ದಾಗ ದುಷ್ಕರ್ಮಿಗಳು ಬಾಗಿಲು ಮುರಿದು ಕಳ್ಳತನ ಮಾಡಿದ್ದರು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯ ಬೆರಳಚ್ಚು ಸಂಗ್ರಹಿಸಿದ್ದರು. ಹೊಸ ರೀತಿಯ ಸಾಫ್ಟ್‌ವೇರ್‌ ಅಳವಡಿಸಿರುವ ಅತ್ಯಾಧುನಿಕ ಬೆರಳಚ್ಚು ಪತ್ತೆ ಯಂತ್ರದಲ್ಲಿ(ಎಎಫ್‌ಐಎಸ್‌) ಇದನ್ನು ಪರೀಕ್ಷಿಸಿದಾಗ ವೃತ್ತಿಪರ ಕಳ್ಳನೊಬ್ಬನ ಬೆರಳಚ್ಚಿಗೆ ಹೊಂದಾಣಿಕೆಯಾಗಿದೆ. ತಕ್ಷಣ ಕಾರ್ಯನಿರತರಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರಿಗೆ ಅತಿ ಸಹಾಯಕಾರಿಯಾದ ಯಂತ್ರಗಳಲ್ಲಿ ಇದು ಒಂದು ಎಂದು ಹಿರಿಯ ಅಧಿಕಾರೊಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏನಿದು ಎಎಫ್‌ಐಎಸ್‌
ಹೆಸರೆ ಸೂಚಿಸುವಂತೆ ಎಏಫ್‌ಐಎಸ್‌ ಅಂದರೆ 'ಆಟೋಮೇಟೆಡ್‌ ಫಿಂಗರ್‌ ಪ್ರಿಂಟ್‌ ಐಡೆಂಟಿಫಿಕೇಶನ್‌ ಸಿಸ್ಟಮ್‌' ಅಂದರೆ ಬೆರಳಚ್ಚು ಪತ್ತೆ ಯಂತ್ರ. ಇತ್ತೀಚಿನ ದಿನಗಳಲ್ಲಿ ಪೊಲೀಸರಿಗೆ ಬಹುಮುಖ್ಯವಾದ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಅಪರಾಧಿಗಳ ಪತ್ತೆಗೆ ನೆರವಾಗುವುದರೊಂದಿಗೆ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಲು ನೆರವಾಗುತ್ತಿದೆ.

ವಿವಿಧ ಆರೋಪಗಳ ಅಡಿ ಬಂಧಿಸಿರುವವರ ಬೆರಳಚ್ಚನ್ನು ಪೊಲೀಸರು ಪಡೆದು ದಾಖಲಿಸಿಟ್ಟುಕೊಂಡಿರುತ್ತಾರೆ. ಅಲ್ಲದೇ ಯಂತ್ರಕ್ಕೂ ಅಳವಡಿಸಲಾಗಿರುತ್ತದೆ. ಅನುಮಾನ ಬಂದಾಗ ಯಂತ್ರದಲ್ಲಿ ಪರೀಕ್ಷೆಗೊಳಪಡಿಸಲಾಗುವುದು. ಪರೀಕ್ಷಿಸಿದ ಬೆರಳಚ್ಚು ದಾಖಲಾದ ಬೆರಳಚ್ಚಿಗೆ ಹೊಂದಾಣಿಕೆಯಾದರೆ ಯಂತ್ರ ಮಾಹಿತಿ ನೀಡುತ್ತದೆ.

English summary
Bangalore police commissioner MN Reddi turned his Twitter handle into a trumpet, announcing that his boys had cracked a house break-in case within four hours of it being reported, using a new software. "The culprit's identity was traced through Police Automated Fingerprint Identification System (AFIS) within 4 hours of theft of Rs 10 lakh property," he tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X