ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2ನೇ ಪಿಯುಸಿ ಫೇಲಾದವರಿಗೆ ಭರವಸೆ ಬೆಳಕು

By Mahesh
|
Google Oneindia Kannada News

ಬೆಂಗಳೂರು, ಮೇ 25: 12ನೇ ತರಗತಿ ಅಥವಾ ದ್ವಿತೀಯ ಪಿಯು ಪರೀಕ್ಷೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮುಂದೇನು ಎಂದು ಇನ್ನು ಚಿಂತಿಸಬೇಕಿಲ್ಲ. ಅವರೆಲ್ಲಾ ನ್ಯೂ ಶೋರ್ಸ್ ಇಂಟರ್ನ್ಯಾಷನಲ್ ಕಾಲೇಜಿನ ಮೂಲಕ, ಸರ್ಕಾರದ ಮಾನ್ಯತೆ ಪಡೆದಿರುವ ಪೂರ್ಣಾವಧಿ ಪದವಿ ತರಗತಿಗೆ ಸೇರಬಹದು. ತಮ್ಮ ಓದನ್ನು ಅಡೆತಡೆಯಿಲ್ಲದಂತೆ ಮುಂದುವರಿಸಬಹುದು.

'ಒಳಗೊಳ್ಳುವ ಶಿಕ್ಷಣ ಕಾರ್ಯಕ್ರಮ' (Inclusive Education Program) ತಮ್ಮ ಫಲಿತಾಂಶಗಳಿಗಾಗಿ ಕಾಯುತ್ತಿರುವ ಮತ್ತು ಅನುತ್ತೀರ್ಣರಾಗಿರುವ ವಿಷಯಗಳ ಪರೀಕ್ಷೆಯನ್ನು ಮತ್ತೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಕನಸುಗಳನ್ನು ನನಸಾಗಿಸುವತ್ತ ಯಾವುದೇ ಅಡೆತಡೆ ಮುಂದುವರಿಯಲು ಒಂದು ಸಮಾನ ಅವಕಾಶ ಕಲ್ಪಿಸುತ್ತದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಇಂಟರ್ನ್ಶಿಪ್ ಮಾಡಬಲ್ಲಂಥ ಅಪರೂಪದ ಅವಕಾಶವನ್ನು ನೀಡುತ್ತದೆ.[ದ್ವಿತೀಯ ಪಿಯುಸಿ ಪರೀಕ್ಷೆ 2016 ಫಲಿತಾಂಶ ಪ್ರಕಟ]

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಬೇಸಿಗೆ ಕಾರ್ಯಕ್ರಮದ ವಿದ್ಯಾರ್ಥಿಯಾಗಿ ವಿಶೇಷ ವಿಷಯವೊಂದರ ಮೇಲೆ ಅಧ್ಯಯನ ಮಾಡುವ ಅವಕಾಶ ದೊರೆಯುತ್ತದೆಯಲ್ಲದೆ, ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಲ್ಲಿ ಪ್ರತಿಷ್ಠಿತ ಸಂಸ್ಥೆಯಿಂದ ಪ್ರಮಾಣಪತ್ರವೂ ದೊರೆಯುತ್ತದೆ. [2ನೇ ಪಿಯುಸಿ ಫಲಿತಾಂಶ: ಯಾವ ಜಿಲ್ಲೆ ಯಾವ ಸ್ಥಾನದಲ್ಲಿದೆ?]

New Shores International College NIOS drop out(2nd PU failed/) or working students

'ವಿಭಿನ್ನ ಪ್ರತಿಭೆಯುಳ್ಳ ಆದರೆ ಶೈಕ್ಷಣಿಕವಾಗಿ ಹಿಂದಿರುವ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿ ಶಿಕ್ಷಣ ವ್ಯವಸ್ಥೆಯತ್ತ ತರಲು ಒಳಗೊಳ್ಳುವ ಶಿಕ್ಷಣ ಕಾರ್ಯಕ್ರಮವನ್ನು ನಾವು ಪರಿಚಯಿಸಿದ್ದೇವೆ. ಈ ಯೋಜನೆಯಲ್ಲಿ ನಮಗೆ NIOS ಸರಿಯಾದ ಜೊತೆಗಾರರಾಗಿದ್ದಾರೆ. ಏಕೆಂದರೆ, NIOS ಮೂಲಕ ದ್ವಿತೀಯ ಪಿಯು ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಯಶಸ್ವಿಯಾಗಿ ಸರ್ಕಾರಿ ವಿಶ್ವವಿದ್ಯಾಲಯಗಳ ಔಪಚಾರಿಕ ಪದವಿ ಶಿಕ್ಷಣಕ್ಕೆ ಸೇರಿಕೊಳ್ಳಬಹುದು " ಎನ್ನುತ್ತಾರೆ ಸಂಸ್ಥೆಯ ಸ್ಥಾಪಕ ನಿರ್ದೇಶಕ, ಶಶಿಧರ ಚಿರಾನ್. [ಬಳ್ಳಾರಿಯ ಅನಿತಾಗೆ ಐಎಎಸ್ ಮಾಡುವ ಕನಸು]

NIOS ವಿದ್ಯಾರ್ಥಿಗಳು ಐಐಟಿ-ಜೆಇಇ, AIEEE ಮತ್ತು PMT (NEET) ನಂತಹ ಅಖಿಲ ಭಾರತ ಪ್ರವೇಶ ಪರೀಕ್ಷೆಗಳು ಹಾಗೂ ಎಲ್ಲಾ ರಾಜ್ಯಗಳ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಇತರ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಹರಾಗಿದ್ದಾರೆ.

ಯಾವಾಗಬೇಕಾದರೂ ಪರೀಕ್ಷೆ ಬರೆಯಿರಿ: NIOS ಯಲ್ಲಿರುವ ಆನ್ ಡಿಮಾಂಡ್ ಎಕ್ಸಾಮಿನೇಷನ್ (ODE) ವ್ಯವಸ್ಥೆಯಿಂದಾಗಿ ಅಭ್ಯರ್ಥಿಗಳು ವರ್ಷವಿಡೀ ಯಾವಾಗ ಬೇಕಿದ್ದರೂ ಪರೀಕ್ಷೆ ತೆಗೆದುಕೊಳ್ಳಬಹುದು ಮತ್ತು ಅಭ್ಯರ್ಥಿಗಳು ಮೂರು ಅಥವಾ ಹೆಚ್ಚು ವಿಷಯಗಳ ಪರೀಕ್ಷೆ ತೆಗೆದುಕೊಳ್ಳಬಹುದು. ಇದು ಮುಕ್ತ ಮತ್ತು ದೂರ ಶಿಕ್ಷಣದ ಕಾರ್ಯಸಾಧ್ಯತೆ, ಅನುಕೂಲತೆ ಮತ್ತು ನಮ್ಯತೆಯ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆ, " ಎನ್ನುತ್ತಾರೆ NIOS ಪ್ರಾದೇಶಿಕ ನಿರ್ದೇಶಕರಾದ ಎಸ್ ಚಂದ್ರಶೇಖರ್. [ದ್ವಿತೀಯ ಪಿಯುಸಿ ಫಲಿತಾಂಶ 2016: ಹೈಲೈಟ್ಸ್ ]

ನ್ಯೂ ಶೋರ್ಸ್ ಇಂಟರ್ನ್ಯಾಷನಲ್ ಕಾಲೇಜಿನ ಕುರಿತು:

ನ್ಯೂ ಶೋರ್ಸ್ ಇಂಟರ್ನ್ಯಾಷನಲ್ ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಪದವಿಪೂರ್ವ ಮಂಡಳಿಯಿಂದ ಅಂಗೀಕೃತಗೊಂಡಿದೆ. ಇಲ್ಲಿ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ನೀಡಲಾಗುತ್ತಿದೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ AICTE ಮತ್ತು ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ (NAAC) ಮಾನ್ಯತೆ ಪಡೆದಿದೆ.

New Shores International College,
Kalyan Nagar-Banaswadi Road,
Bangalore 560043, Tele Phone: +91 80 6673 1100
http://www.newshores.in/

English summary
New Shores International College joined with NIOS (National Institute of Open School) to give helping hands to drop out(2nd PU failed/) or working students to complete their education successfully.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X