ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಆಸ್ಪತ್ರೆಯಲ್ಲಿ ಬಾಣಂತಿಯರಿಗಾಗಿ ಹೊಸ ಯೋಜನೆ

|
Google Oneindia Kannada News

ಬೆಂಗಳೂರು, ನವೆಂಬರ್ 8: ಬಿಬಿಎಂಪಿ ಆಸ್ಪತ್ರೆಗಳಲ್ಲಿ ಇನ್ನುಮುಂದೆ ಬಾಣಂತಿಯರಿಗೆ ಎರಡು ಹೊತ್ತು ಹಾಲು ಪೂರೈಸಲು ನಿರ್ಧರಿಸಿದ್ದಾರೆ.

ಬಿಬಿಎಂಪಿಯ 32 ಆಸ್ಪತ್ರೆಗಳಲ್ಲಿನ ಬಾಣಂತಿಯರಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಯೋಜನೆ ರೂಪಿಸಿರುವ ಅಧಿಕಾರಿಗಳು, ಪ್ರತಿದಿನ 500 ಎಂ.ಎಲ್. ಹಾಲು ಪೂರೈಸಲು ನಿರ್ಧರಿಸಿದ್ದಾರೆ.

ಮೂರು ತಿಂಗಳ ಕಂದಮ್ಮನನ್ನು ನಾಲೆಗೆ ಬಿಸಾಡಿದ ಹೆತ್ತವ್ವಮೂರು ತಿಂಗಳ ಕಂದಮ್ಮನನ್ನು ನಾಲೆಗೆ ಬಿಸಾಡಿದ ಹೆತ್ತವ್ವ

ಯೋಜನೆಗಾಗಿ ಸುಮಾರು 15 ಲಕ್ಷ ರೂ ಮೀಸಲಿಡಲಾಗಿದೆ. ವರ್ಷಕ್ಕೆ 11 ಸಾವಿರ ಹೆರಿಗೆ ಆಗಲಿದೆ ಎಂದು ಅಂದಾಜಿಸಲಾಗಿದ್ದು, ಸುಮಾರು 30 ಸಾವಿರ ಲೀಟರ್ ಹಾಲು ಬೇಕಾಗುತ್ತದೆ.

New Plan For Mothers In BBMP Hospital

ಬಿಬಿಎಂಪಿ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆ ಹೆಚ್ಚಿಸುವ ಸಲುವಾಗಿ ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಪಿಂಕ್ ಬೇಬಿ ಹೆಸರಿನಲ್ಲಿ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ 1 ಲಕ್ಷ ರೂ. ಬಾಂಡ್ ನೀಡಲಾಗುತ್ತಿದೆ. ಇದೀಗ ಹಾಲು ಯೋಜನೆ ಆರಂಭಿಸಲಿದೆ.

15 ಲಕ್ಷ ರೂ. ವೆಚ್ಚ: 10 ವರ್ಷಗಳ ಹಿಂದೆ ಬಾಣಂತಿಯರಿಗೆ ಹಾಲು ನೀಡುವ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ, ಕಾರಣಾಂತರಗಳಿಂದ ಅದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಹಾಲು ನೀಡುವುದನ್ನು ಆರಂಭಿಸಲಾಗುತ್ತಿದೆ. ವಾರ್ಷಿಕ 30 ಸಾವಿರ ಲೀಟರ್ ಹಾಲು ಬೇಕಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅದಕ್ಕಾಗಿ 15 ಲಕ್ಷ ರೂ. ವ್ಯಯಿಸಲು ನಿರ್ಧರಿಸಿದ್ದಾರೆ.

ಹಾಲು ವಿತರಣೆ ಹೇಗೆ?: ಹಾಲು ಪೂರೈಕೆ ಮಾಡುವ ಸಂಸ್ಥೆಯ ಡೇರಿಗಳಿಗೆ ಬಿಬಿಎಂಪಿ ಆಸ್ಪತ್ರೆಗಳಲ್ಲಾಗುವ ಹೆರಿಗೆಗಳು ಮತ್ತು ಬಾಣಂತಿಯರ ಸಂಖ್ಯೆಯನ್ನು ತಿಳಿಸಲಾಗುತ್ತದೆ. ಆ ದಿನ ಎಷ್ಟು ಹಾಲು ಪೂರೈಸಬೇಕು ಎಂಬುದನ್ನು ಅದರಲ್ಲಿ ಹೇಳಲಾಗುತ್ತದೆ. ಹೀಗೆ ಸಂಸ್ಥೆ ಪೂರೈಸುವ ಹಾಲನ್ನು ಆಸ್ಪತ್ರೆಗಳಲ್ಲಿ ಕಾಯಿಸಿ ಬಾಣಂತಿಯರಿಗೆ ನೀಡಲಾಗುತ್ತದೆ. ತಿಂಗಳಾಂತ್ಯಕ್ಕೆ ಪೂರೈಕೆಯಾದ ಹಾಲಿನ ಪ್ರಮಾಣವನ್ನು ಗಮನಿಸಿಕೊಂಡು ಹಣ ಬಿಡುಗಡೆ ಮಾಡಲಿದೆ.

English summary
BBMP is Ready To provide Two Time Milk To Mothers in BBMP Hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X