ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಕೊನೆಗೂ ಇಳಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 15: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಏರಿಕೆಗೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಶುಲ್ಕವನ್ನು ಇಳಿಕೆ ಮಾಡಲಾಗಿದೆ.

ದ್ವಿಚಕ್ರ ವಾಹನ ನಿಲುಗಡೆಗೆ ಏರಿಕೆ ಮಾಡಿದ್ದ ಶುಲ್ಕ 232 ರೂ.ನಿಂದ 120 ರೂ.ಗೆ ಇಳಿಕೆ ಮಾಡಲಾಗಿದೆ. ಶುಲ್ಕ ಹೆಚ್ಚಳಕ್ಕೆ ಪ್ರಯಾಣಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪಾರ್ಕಿಂಗ್ ಶುಲ್ಕ ದಿನಕ್ಕೆ 80 ರೂ. ಇತ್ತು. ಅದನ್ನು ಏಕಾಏಕಿ 232 ರೂ.ಗೆ ಹೆಚ್ಚಿಸಲಾಗಿತ್ತು.

2 ಗಂಟೆಯವರೆಗೆ 12 ಮತ್ತು ನಂತರದ 16 ಗಂಟೆಯವರೆಗೆ ಪ್ರತಿ ಗಂಟೆಗೆ 10 ರೂ. ಶುಲ್ಕ ಇತ್ತು. ಅದನ್ನು 15ರೂ.ಗೆ ಹೆಚ್ಚಿಸಲಾಗಿತ್ತು. ಈಗ 2 ಗಂಟೆ ಬಳಿಕ 24 ಗಂಟೆಯವರೆಗೆ ಪ್ರತಿ ಗಂಟೆಗೆ 10 ರೂ ಶುಲ್ಕ ನಿಗದಿಮಾಡಲಾಗಿದೆ.

ksr

ನಿಮ್ಮ ಕುಟುಂಬದವರನ್ನು ರೈಲು ನಿಲ್ದಾಣಕ್ಕೆ ಬಿಡಲು ಬಂದರೆ, ಐದು ನಿಮಿಷಕ್ಕಿಂತ ಹೆಚ್ಚು ಸಮಯ ರೈಲ್ವೆ ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡಿದರೆ 25 ರೂ. ತೆರಬೇಕಾಗುತ್ತಿತ್ತು.

ಈ ನಿಯಮವು ಎರಡು ದಿನಗಳ ಹಿಂದೆ ಜಾರಿಗೆ ಬಂದಿದ್ದರೂ ಕೂಡ ಅಧಿಕೃತವಾಗಿ ಮಂಗಳವಾರದಿಂದ ಜಾರಿಗೆ ತರಲಾಗಿತ್ತು.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಹೆಚ್ಚಳಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಹೆಚ್ಚಳ

ರೈಲ್ವೆ ನಿಲ್ದಾಣದಲ್ಲಿರುವ ಬ್ಯಾರಿಯರ್ ಆಕ್ಸೆಸ್ ಸಿಸ್ಟಂ ವಾಹನ ನಿಲ್ದಾಣಕ್ಕೆ ಬರುವ ಮತ್ತು ಹೊರಹೋಗುವ ವೇಳೆಯನ್ನು ದಾಖಲಿಸಿಕೊಳ್ಳುತ್ತದೆ. ಎಕ್ಸಿಟ್ ಗೇಟಿನಲ್ಲಿ ಶುಲ್ಕವನ್ನು ನೀಡಬೇಕಾಗುತ್ತದೆ. ಪ್ರತಿನಿತ್ಯ ಸುಮಾರು 2 ಸಾವಿರ ದ್ವಿಚಕ್ರ ವಾಹನಗಳು ಹಾಗೂ ಸುಮಾರು 600 ಕಾರುಗಳು ನಿಲುಗಡೆಯಾಗುತ್ತವೆ.

ನಾಲ್ಕು ಚಕ್ರದ ವಾಹನಗಳಿಗೆ ದಿನಕ್ಕೆ 300-400 ರೂ, ದ್ವಿಚಕ್ರ ವಾಹನಕ್ಕೆ 80 ರೂ ನಿಲುಗಡೆ ಶುಲ್ಕ ಪಾವತಿಸಬೇಕಾಗುತ್ತದೆ. ಟ್ಯಾಕ್ಸಿ ಹಾಗೂ ಇನ್ನಿತರೆ ವಾಣಿಜ್ಯ ವಾಹನಗಳು ಪ್ರತಿ ಗಂಟೆಗೆ 25 ರೂ ನೀಡಬೇಕಾಗಿತ್ತು.

English summary
In response to public pressure, the authorities at the Krantiveera Sangolli Rayanna Railway Station (Majestic) in Bengaluru have reduced the parking fees partially.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X