ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಸಚಿವರಿಗೆ ಖಾತೆ ಹಂಚಿಕೆ, ಉಪ ಮುಖ್ಯಮಂತ್ರಿ ಹುದ್ದೆ ಪಕ್ಕಾ

|
Google Oneindia Kannada News

Recommended Video

ಹೈಕಮಾಂಡ್ ಆದೇಶವನ್ನು ಚಾಚು ತಪ್ಪದೇ ಪಾಲಿಸಿದ್ದಾರೆ ಯಡಿಯೂರಪ್ಪ..? | yediyurappa

ಬೆಂಗಳೂರು, ಆಗಸ್ಟ್ 26: ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಇಂದು(ಆಗಸ್ಟ್ 26)ರಂದು ನಡೆಯಲಿದ್ದು, ಉಪಮುಖ್ಯಮಂತ್ರಿ ಹುದ್ದೆ ಪಕ್ಕಾ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಇದೀಗ ಉಪಮುಖ್ಯಮಂತ್ರಿ ಹುದ್ದೆ ಎಷ್ಟು ಜನರಿಗೆ ದೊರೆಯಲಿದೆ ಎನ್ನುವ ಮಾಹಿತಿ ಬಹಿರಂಗವಾಗಬೇಕು ಅಷ್ಟೆ.ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ, ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ನಾಳೆ ಪೂರ್ಣವಾಗಲಿದೆ.

ಕರ್ನಾಟಕ ಬಿಜೆಪಿ ಪಾಲಿಗೆ 'ಡಿಸಿಎಂ' ಕುರ್ಚಿಯೇ ಟೈಂ ಬಾಂಬ್; ಬಿಎಸ್ ವೈ ಜ್ವಾಲಾಮುಖಿ!ಕರ್ನಾಟಕ ಬಿಜೆಪಿ ಪಾಲಿಗೆ 'ಡಿಸಿಎಂ' ಕುರ್ಚಿಯೇ ಟೈಂ ಬಾಂಬ್; ಬಿಎಸ್ ವೈ ಜ್ವಾಲಾಮುಖಿ!

ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಎಷ್ಟು‌ ಮಂದಿ ಉಪಮುಖ್ಯಮಂತ್ರಿ ಇರುತ್ತಾರೆ ಎಂಬುದು‌ ತಿಳಿಯಲಿದೆ. ನಮ್ಮ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಇರುತ್ತಾರೆ. ಈ ಬಗ್ಗೆ ಹೈಕಮಾಂಡ್ ಸೂಚನೆ ನೀಡಿದ್ದು ಅದನ್ನು ಪಾಲಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆ ಇರುತ್ತದೆ. ಯಾರು, ಎಷ್ಟು ಎಂಬುದು ಇಂದು ನಮ್ಮದು ರಾಷ್ಟ್ರೀಯ ಪಕ್ಷ, ಡಿಸಿಎಂ ಹುದ್ದೆ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ಹೈಕಮಾಂಡ್ ಸೂಚನೆಗಳನ್ನು ಪಾಲಿಸುತ್ತೇವೆ.

ಅತೃಪ್ತ ಶಾಸಕರಿಗೆ ಮಂತ್ರಿಗಿರಿ: ಯಾರಿಗೆ ಒಲಿಯಲಿದೆ ಅದೃಷ್ಟ?ಅತೃಪ್ತ ಶಾಸಕರಿಗೆ ಮಂತ್ರಿಗಿರಿ: ಯಾರಿಗೆ ಒಲಿಯಲಿದೆ ಅದೃಷ್ಟ?

ಎಷ್ಟು ಡಿಸಿಎಂ ಸ್ಥಾನ ಅನ್ನೊದು ಚರ್ಚೆ ನಡೆಯುತ್ತಿದೆ. ನಾಳೆ ಅಂತಿಮವಾಗಿ ಗೊತ್ತಾಗಲಿದೆ. ಸಚಿವ ಸ್ಥಾನ ಸಿಗದ ಅಸಮಾಧಾನಿತ ಶಾಸಕರಿಗೂ ನಿಗಮ ಮಂಡಳಿಯಲ್ಲಿ ಸ್ಥಾನ ಮಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬೇಸರ

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬೇಸರ

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಕೆಲವರಿಗೆ ಬೇಸರವಿದೆ. ಪಕ್ಷದ ವರಿಷ್ಠರ ಆದೇಶದಂತೆ‌ ಸವದಿಗೆ ಸಚಿವ ಸ್ಥಾನ ನೀಡಲಾಗಿದೆ. ಅದೇ ರೀತಿ‌ ಬೆಳಗಾವಿಯ ಮತ್ತೊಬ್ಬರಿಗೆ ಅವಕಾಶ ನೀಡಲಾಗುವುದು. ಪ್ರಧಾನಿ ಹಾಗೂ ಪಕ್ಷದ ವರಿಷ್ಠರು ನೀಡಿರುವ ಸಲಹೆ ಸೂಚನೆ ಪಾಲಿಸುತ್ತೇನೆ. ಬಿಜೆಪಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜೆಡಿಎಸ್ ‌ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆ ಇದೆ. ಸಚಿವ ಸ್ಥಾನ ದೊರೆಯದವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಯಾವುದೇ ಆತಂರಿಕ ಸಮಸ್ಯೆಗಳಿಲ್ಲ

ಬಿಜೆಪಿಯಲ್ಲಿ ಯಾವುದೇ ಆತಂರಿಕ ಸಮಸ್ಯೆಗಳಿಲ್ಲ

ಬಿಜೆಪಿಯಲ್ಲಿ ಯಾವುದೇ ಆಂತರಿಕ ಸಮಸ್ಯೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್​​ ಶಾ ಆದೇಶವನ್ನು ಪಾಲಿಸೋದು ನಮ್ಮ ಕೆಲಸ. ಕಾಂಗ್ರೆಸ್​​ ಮತ್ತು ಜೆಡಿಎಸ್​​ನಲ್ಲಿ ಸಮಸ್ಯೆಯಿದೆ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಯಾರಿಗೆ ಸಚಿವ ಸ್ಥಾನ ಸಿಗುವುದಿಲ್ಲವೋ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದರು.

ಇಂದೇ ಖಾತೆ ಹಂಚಿಕೆ ಪಕ್ಕಾ: ಯಾರಿಗೆ ಯಾವ ಖಾತೆ?ಇಂದೇ ಖಾತೆ ಹಂಚಿಕೆ ಪಕ್ಕಾ: ಯಾರಿಗೆ ಯಾವ ಖಾತೆ?

ಸಚಿವರ ಖಾತೆ, ಉಪಮುಖ್ಯಮಂತ್ರಿ ಹುದ್ದೆ ಕುರಿತು ಶಾ ಜೊತೆ ಚರ್ಚೆ

ಸಚಿವರ ಖಾತೆ, ಉಪಮುಖ್ಯಮಂತ್ರಿ ಹುದ್ದೆ ಕುರಿತು ಶಾ ಜೊತೆ ಚರ್ಚೆ

ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ. ಹೀಗಾಗಿ ರಾಜ್ಯಕ್ಕೆ ಮೊದಲು ಅಧ್ಯಯನ ತಂಡ ಕಳುಹಿಸಲಾಗಿದೆ. ತಂಡ ಈಗಾಗಲೇ ಅಧ್ಯಯನ ಪ್ರಾರಂಭಿಸಿದ್ದು, ವರದಿ ನೀಡಿದ ಬಳಿಕ ಹೆಚ್ಚಿನ ನೆರವು ಪಡೆಯಲಿದ್ದೇವೆ ಎಂದು ತಿಳಿಸಿದರು.

ನಾನು ಅನರ್ಹ ಶಾಸಕರ ಬಗ್ಗೆ ಮಾತನಾಡುವುದಿಲ್ಲ

ನಾನು ಅನರ್ಹ ಶಾಸಕರ ಬಗ್ಗೆ ಮಾತನಾಡುವುದಿಲ್ಲ

ಅನರ್ಹ ಶಾಸಕರ ಬಗ್ಗೆ ಮಾತನಾಡುವುದಿಲ್ಲ. ಈ ಕುರಿತು ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಈಗೇನಿದ್ದರೂ ಸಮಸ್ಯೆ ಕಾಂಗ್ರೆಸ್ ಜೆಡಿಎಸ್‍ನಲ್ಲಿ ಮಾತ್ರ ಎಂದು ಅನರ್ಹ ಶಾಸಕರ ಕುರಿತು ಬಿಎಸ್‍ವೈ ಮಾತನಾಡಲಿಲ್ಲ. ಲಕ್ಷ್ಮಣ ಸವದಿ ಬಗ್ಗೆ ಕೆಲವು ಶಾಸಕರು ಹಾಗೂ ನಾಯಕರಲ್ಲಿ ಅಸಮಾಧಾನ ಇರುವುದು ನಿಜ. ಹೈಕಮಾಂಡ್ ನಿರ್ದೇಶನದ ಮೇರೆಗೆ ಸವದಿಗೆ ಅವಕಾಶ ನೀಡಲಾಗಿದೆ. ಬೆಳಗಾವಿಯಲ್ಲಿ ಮತ್ತೊಬ್ಬರಿಗೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಬಿಜೆಪಿ ನಾಯಕರ ವಿರುದ್ಧವೇ ಸಿಟ್ಟಿಗೆದ್ರಾ ಅನರ್ಹ ಶಾಸಕರು?ಬಿಜೆಪಿ ನಾಯಕರ ವಿರುದ್ಧವೇ ಸಿಟ್ಟಿಗೆದ್ರಾ ಅನರ್ಹ ಶಾಸಕರು?

English summary
New Ministers Will Be Allocated Cabinet Portfolios On August 26,The allocation of portfolios to newly inducted ministers into his cabinet in Karnataka will take place after his return from New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X