ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಹಿಂದೂಪುರ ಮೆಮು ರೈಲು; ವೇಳಾಪಟ್ಟಿ, ನಿಲ್ದಾಣ

|
Google Oneindia Kannada News

ಬೆಂಗಳೂರು, ನವೆಂಬರ್ 05 : ನೈಋತ್ಯ ರೈಲ್ವೆ ಬೆಂಗಳೂರು-ಹಿಂದೂಪುರ ನಡುವೆ ಮೆಮು ರೈಲು ಸಂಚಾರವನ್ನು ಆರಂಭಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಈ ರೈಲು ಹಿಂದೂಪುರಕ್ಕೆ ಸಂಚರಿಸಲಿದೆ.

ನವೆಂಬರ್ 1ರಿಂದ ನೈಋತ್ಯ ರೈಲ್ವೆ ಈ ರೈಲು ಸಂಚಾರವನ್ನು ಆರಂಭಿಸಿದೆ. ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿಯೂ ರೈಲು ಬೆಂಗಳೂರು-ಹಿಂದೂಪುರ ನಡುವೆ ಸಂಚಾರ ನಡೆಸಲಿದೆ.

New MEMU Train Between Hindupura And Bengaluru

ರೈಲು ಸಂಖ್ಯೆ 06565 ಮತ್ತು 06566 ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಹಿಂದೂಪುರ ನಡುವೆ ಸಂಚರಿಸಲಿದೆ. ಪ್ರಯಾಣಿಕರು ರೈಲು ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ವೇಳಾಪಟ್ಟಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಗ್ಗೆ 9.30ಕ್ಕೆ ಹೊರಡಲಿರುವ ರೈಲು ಮಧ್ಯಾಹ್ನ 12ಗಂಟೆಗೆ ಹಿಂದೂಪುರಕ್ಕೆ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ಹಿಂದೂಪುರದಿಂದ ಹೊರಡುವ ರೈಲು ಸಂಜೆ 4.10ಕ್ಕೆ ಕೆಎಸ್‌ಆರ್‌ ರೈಲು ನಿಲ್ದಾಣ ತಲುಪಲಿದೆ.

ನಿಲ್ದಾಣಗಳು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಡುವ ರೈಲು, ಕಂಟೋನ್ಮೆಂಟ್, ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ರಾಜನಕುಂಟೆ, ದೊಡ್ಡಬಳ್ಳಾಪುರ, ವಡ್ಡರಹಳ್ಳಿ, ಮಾಕಳಿದುರ್ಗ, ತೊಂಡೆಬಾವಿ, ಸೋಮೇಶ್ವರ, ಗೌರಿಬಿದನೂರು, ವಿದುರಾಶ್ವತ್ಥ, ದೇವರಪಲ್ಲೆ ಮಾರ್ಗವಾಗಿ ಹಿಂದೂಪುರಕ್ಕೆ ತಲುಪಲಿದೆ.

English summary
South Western railway began the new MEMU train between Hindupura and Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X