ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರ ಸಮೀಪ ನೂತನ ಹೈಟೆಕ್ ಜೈಲು ನಿರ್ಮಾಣ

|
Google Oneindia Kannada News

ಬೆಂಗಳೂರು, ನವೆಂಬರ್ 11 : ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಸಮೀಪ ವಿಶೇಷ ಭದ್ರತೆಯ ಮತ್ತೊಂದು ಜೈಲು ನಿರ್ಮಾಣಗೊಳ್ಳಿದೆ. ಸುಮಾರು 157ಕೋಟಿ ವೆಚ್ಚದಲ್ಲಿ ಜೈಲನ್ನು ನಿರ್ಮಿಸಲಾಗುತ್ತಿದೆ.

ಕಾರಾಗೃಹ ಇಲಾಖೆಯು 16 ಎಕರೆ ಪ್ರದೇಶದಲ್ಲಿ ಜೈಲನ್ನು ನಿರ್ಮಾಣ ಮಾಡಲಿದ್ದು, ಈಗಾಗಲೇ 100 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. 57 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಜೈಲಿನಲ್ಲೇ ವಿದ್ಯಾರ್ಥಿಯಾಗಿ, ಪದವಿ ಪಡೆದು ಹೊರಬಂದ ಸೈನಿಕ ಮಾಮಾಜಿಜೈಲಿನಲ್ಲೇ ವಿದ್ಯಾರ್ಥಿಯಾಗಿ, ಪದವಿ ಪಡೆದು ಹೊರಬಂದ ಸೈನಿಕ ಮಾಮಾಜಿ

ಕೇಂದ್ರ ಕಾರಾಗೃಹದಲ್ಲಿ ವಿಐಪಿ ಆರೋಪಿಗಳು, ಉಗ್ರರು, ನಕ್ಸಲರು, ರೌಡಿ ಶೀಟರ್‌ಗಳು ಇದ್ದಾರೆ. ವಿಚರಣಾಧೀನ ಕೈದಿಗಳು ಮತ್ತು ಅಪರಾಧಿಗಳು ಒಟ್ಟಿಗೆ ಇದ್ದಾರೆ. 3500 ಕೈದಿಗಳನ್ನು ಇರಿಸುವ ಜೈಲಿನಲ್ಲಿ ಈಗ 4500 ಜನ ಕೈದಿಗಳಿದ್ದಾರೆ.

ಉ.ಪ್ರದೇಶ: ಸ್ವ-ಇಚ್ಛೆಯಿಂದ ಜೈಲು ಸೇರುತ್ತಿರುವ ಜನ, ಕಾರಣ ವಿಚಿತ್ರವಾಗಿದೆಉ.ಪ್ರದೇಶ: ಸ್ವ-ಇಚ್ಛೆಯಿಂದ ಜೈಲು ಸೇರುತ್ತಿರುವ ಜನ, ಕಾರಣ ವಿಚಿತ್ರವಾಗಿದೆ

New jail near Parappana Agrahara at 176 crore

ಹೆಚ್ಚಿನ ಕೈದಿಗಳು ಇರುವುದರಿಂದ ಕೈದಿಗಳ ಮೇಲೆ ನಿಗಾವಹಿಸುವುದು ಸಹ ಸಿಬ್ಬಂದಿಗಳಿಗೆ ಕಷ್ಟವಾಗಿದೆ. ಆದ್ದರಿಂದ, ವಿಶೇಷ ಭದ್ರತೆಯ ಮತ್ತೊಂದು ಜೈಲು ನಿರ್ಮಿಸಿ ಹೈ ಪ್ರೊಫೈಲ್ ಕೈದಿಗಳನ್ನು ಆ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ.

ಸ್ವಾತಂತ್ರ್ಯ ದಿನಾಚರಣೆ : 93 ಖೈದಿಗಳಿಗೆ ಬಿಡುಗಡೆ ಭಾಗ್ಯಸ್ವಾತಂತ್ರ್ಯ ದಿನಾಚರಣೆ : 93 ಖೈದಿಗಳಿಗೆ ಬಿಡುಗಡೆ ಭಾಗ್ಯ

ನೂತನ ಜೈಲಿನಲ್ಲಿ ವಿಶೇಷ ಭದ್ರತೆ ಜೊತೆಗೆ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಈ ಜೈಲಿನ ಭದ್ರತೆಗಾಗಿಯೇ 250 ವಿಶೇಷ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ. ಲೋಕೋಪಯೋಗಿ ಇಲಾಖೆ ಈಗಾಗಲೇ ಜೈಲಿನ ನಕ್ಷೆ ತಯಾರಿಸಿದೆ.

ಕೈದಿಗಳು, ಮಹಿಳೆಯರು, ರೌಡಿ ಚಟುವಟಿಕೆಗಳಲ್ಲಿ ತೊಗಿರುವವರಿಗಾಗಿಯೇ ಮೂರು ಪ್ರತ್ಯೇಕ ಬ್ಯಾರಕ್ ನಿರ್ಮಾಣವಾಗಲಿದೆ. ಜೈಲಿನ ಎಲ್ಲೆಡೆ ಹೈಡ್ರಾಲಿಕ್ ಗೇಟ್‌ಗಳು ಇರಲಿವೆ. ಪ್ರತಿ ಕಾರಿಡರ್‌ನಲ್ಲಿ ಸಿಸಿ ಕ್ಯಾಮರಾ, ಮೊಬೈಲ್ ಜಾಮರ್ ಇರಲಿದೆ.

English summary
Department Of Prisons Karnataka will construct hi-tech new jail near Parappana Agrahara jail in 16 acres of land at the cost of 176 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X