ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನಿಸು ಬದಿಗಿಟ್ಟು ಮಾಜಿ ಗೃಹ ಸಚಿವ-ಹಾಲಿ ಗೃಹ ಸಚಿವ ಭೇಟಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ : ಮಾಜಿ ಗೃಹ ಸಚಿವ ಹಾಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಅನ್ನು ಹೊಸ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಭೇಟಿ ಆಗಿದ್ದಾರೆ.

ಪರಮೇಶ್ವರ್ ಅವರಿಂದ ಗೃಹ ಖಾತೆ ಕಿತ್ತುಕೊಂಡು ಎಂ.ಬಿ.ಪಾಟೀಲ್ ಅವರಿಗೆ ಕೊಟ್ಟಿರುವ ಬಗ್ಗೆ ಕಾಂಗ್ರೆಸ್‌ ನಲ್ಲಿ ಈಗಾಗಲೇ ಭಾರಿ ವಿವಾದಗಳು ಎದ್ದಿವೆ ಆದರೆ ಎಂ.ಬಿ.ಪಾಟೀಲ್ ಅವರು ಪರಮೇಶ್ವರ್ ಅವರನ್ನು ಭೇಟಿ ಆಗಿರುವುದು ನಮ್ಮಲ್ಲಿ ಎಲ್ಲಾ ಸರಿ ಇದೆ ಎಂದು ತೋರಿಸುವ ಯತ್ನದಂತೆ ಕಾಣುತ್ತಿದೆ.

ನೂತನ ಸಚಿವರಿಗೆ ಖಾತೆ ಹಂಚಿಕೆ : ಎಂ.ಬಿ.ಪಾಟೀಲ್‌ಗೆ ಗೃಹ ಖಾತೆ ನೂತನ ಸಚಿವರಿಗೆ ಖಾತೆ ಹಂಚಿಕೆ : ಎಂ.ಬಿ.ಪಾಟೀಲ್‌ಗೆ ಗೃಹ ಖಾತೆ

ಪರಮೇಶ್ವರ್ ಅವರ ಮನೆಗೆ ಇಂದು ಬೆಳಿಗ್ಗೆ ಎಂ.ಬಿ.ಪಾಟೀಲ್ ಅವರು ಭೇಟಿ ನೀಡಿದ್ದಾರೆ. ಇಬ್ಬರೂ ನಗುತ್ತಾ ಪರಸ್ಪರ ಅಭಿನಂಧಿಸುತ್ತಿರುವ ಚಿತ್ರವನ್ನು ಪರಮೇಶ್ವರ್ ಅವರು ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಪರಮೇಶ್ವರ್ ಅವರು ಹಾರೈಸಿದ್ದಾರೆ.

New Home minsiter MB Patil met G Parameshwar

ಪರಮೇಶ್ವರ್‌ ಉಪಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿದ್ದೇ ನಾನು: ಸಿದ್ದರಾಮಯ್ಯ ಪರಮೇಶ್ವರ್‌ ಉಪಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿದ್ದೇ ನಾನು: ಸಿದ್ದರಾಮಯ್ಯ

ಪರಮೇಶ್ವರ್ ಅವರಿಂದ ಗೃಹ ಖಾತೆ ಕಿತ್ತುಕೊಂಡಿದ್ದು ಸರಿ ಅಲ್ಲ ಎಂದು ಜೆಡಿಎಸ್‌ನ ಕೆಲ ಸಚಿವರು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಕೆಲ ಮುಖಂಡರು ಸಹ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಪರಮೇಶ್ವರ್ ಅವರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.

ಪರಮೇಶ್ವರ್ ಗೃಹಖಾತೆ ಬದಲಿಸಬಾರದಿತ್ತು: ರೇವಣ್ಣ ಸಹಾನುಭೂತಿಪರಮೇಶ್ವರ್ ಗೃಹಖಾತೆ ಬದಲಿಸಬಾರದಿತ್ತು: ರೇವಣ್ಣ ಸಹಾನುಭೂತಿ

ಪರಮೇಶ್ವರ್ ಅವರಿಂದ ಗೃಹ ಖಾತೆ ಕೈತಪ್ಪುವಲ್ಲಿ ಸಿದ್ದರಾಮಯ್ಯ ಪಾತ್ರವಿದೆ ಎಂಬ ಸುದ್ದಿಯೂ ಹರಿದದಾಡುತ್ತಿದೆ. ಇದೇ ದಿನ ಹೊಸ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಸಿದ್ದರಾಮಯ್ಯ ಅವರನ್ನು ಸಹ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

English summary
New Home minister MB Patil met former home minsiter G Parameshwar today in his residence. Parameshwar wished MB Patil for bright future. MB Patil also met Siddaramaiah today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X